About us

Athmashakthi Multi purpose Co-operative Society LTD

Athmashakthi Multi purpose Co-operative Society LTD

The ideation of setting up of Athmashakthi Multipurpose Co-operative Society Ltd. in Dakshina Kannada District took its genesis in the formation of Narayanaguru Swamy Prakashana and Charitable Trust in the year 2003. The trust was registered with the social responsibility of reaching out to the deprived and disadvantaged section of the society. The trust envisaged to publish Athmashakthi quarterly magazine, to set up a co-operative bank, educational institution and health awareness camp for the benefit of the underprivileged.
In the year 2011, the Trust selected 11 members who mobilized other members and garnered the share capital within 3 months and pioneered to form Athmashakthi Multipurpose Co-operative Society (AMCS) on 30.01.2012. Within a short span of 14 years the co-operative has opened 35 branches across the D.K & Udupi District , which testify the reinforcement of faith and confidence reposed by the members and dedicated services of the staff. All the branches have financially surged ahead in terms of profits, performance and currently pay 15% of dividend, which speaks volume of their financial prudence and managerial human capital. Office bearers opine that productive investment in skill education advancement is vital for the poor to avail economic opportunity leading to their upward social mobility.
“Marginalized groups and vulnerable individuals are often worst affected, deprived of the information, money or access to health services”. To counter the health deficiency among the poor every year AMCS is organizing medical camps as well as blood donation camps in rural settings benefiting more than 15000 marginalized families. These camps are organized in association with Non-governmental Organization, Corporate, Civic bodies, Educational Institutions, Individual volunteers, Trusts and Hospitals. These camps provide integrated health care services of preventive, curative and referral nature encompassing investigative and surgical interventions. Their main objective is to enhance the awareness and provide accessibility to health careservices.
Eye check camps are being organized for the past 14 years, which helped the underprivileged communities in getting the awareness on eye ailments, the early detection of refractive errors, availing spectacles and free cataract surgeries and need-based follow up treatment. A total of more than 10000 beneficiaries have been screened for refractive errors, cataracts and other treatable eye diseases. More than 900 people are treated for cataracts with free surgery services. More than 12000 free health cards were also issued that would benefit any of the family members. The benefits of medical camps reach out to the poor women, senior citizens, children and the needy population sans health care accessibility and health insurance.

President Message

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ ) ಪಡೀಲ್ ಮಂಗಳೂರು.
ಗೌರವಾನ್ವಿತ ಸದಸ್ಯ ಬಂಧುಗಳೇ,
ಪ್ರಾಪಂಚಿಕವಾದ ಸುಂದರ ವ್ಯವಸ್ಥೆಗೆ ಗಟ್ಟಿ ನೆಲೆಗಟ್ಟನ್ನು ತುಂಬಿಕೊಟ್ಟಿರುವುದೇ ಸಹಕಾರ, ಪ್ರೀತಿ, ನಂಬಿಕೆಗಳೆAಬ ತ್ರಿಪದಗಳು ಅನ್ನುವುದು ಬೆಳಕಿನಷ್ಟೇ ಸತ್ಯ. ಸಹಕಾರಿ ಸಂಘ ಸ್ಥಾಪನೆಯ ಸಂದರ್ಭದಲ್ಲಿ ಈ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಮುನ್ನಡೆಯುತ್ತಾ ಸಾಗಿದಂತೆ 14 ಸಂವತ್ಸರಗಳು ಬಹಳ ವೇಗವಾಗಿ ಕಳೆದು ಹೋದವು ಎಂದು ಕೆಲವೊಮ್ಮೆ ಅನಿಸುವುದುಂಟು. ನಾವಿಟ್ಟ ಈ ಭರವಸೆಗಳಿಗೆ ಸಂಘದ ಬಂಧುಗಳೆಲ್ಲಾ ಪ್ರತಿಯಾಗಿ ಇದನ್ನೇ ನೀಡಿದ ಪರಿಣಾಮವಾಗಿ ನಾವಿಂದು ಸಹಕಾರಿ ರಂಗದಲ್ಲಿ ಭಿನ್ನವಾಗಿ ಗುರುತಿಸಿಕೊಳ್ಳಲು ಸಾಧ್ಯವಾಗಿದೆ.
ಮಹಾನ್ ಮಾನವತಾವಾದಿ ಬ್ರಹ್ಮಶ್ರೀ ನಾರಾಯಣ ಗುರುಗಳು ತೋರಿದ ದಾರಿಯಲ್ಲಿ ಮುನ್ನಡೆದ ಸಾಕ್ಷಿಯೆನ್ನುವಂತೆ ಸ್ಥಾಪನೆಗೊಂಡAತಹ ನಮ್ಮ ಸಂಸ್ಥೆಯು ಕಳೆದ 14 ವರ್ಷಗಳಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ 35 ಶಾಖೆಗಳನ್ನ ಹುಟ್ಟುಹಾಕಿ 3,000ಕ್ಕೂ ಮಿಕ್ಕಿ ವಾರ್ಷಿಕ ವ್ಯವಹಾರದೊಂದಿಗೆ, ಸದಸ್ಯರೆಲ್ಲರಿಗೆ ಸಂತೃಪ್ತ ಉತ್ಕöÈಷ್ಟ ಸೇವೆಯನ್ನು ನೀಡುತ್ತಾ ಬರುತ್ತಿರುವುದು ನಮ್ಮ ಕಾರ್ಯದಕ್ಷತೆಯ ಪ್ರತೀಕವೆನಿಸಿದಂತಿದೆ.
ಸಂಘವು 2025-26ನೇ ಸಾಲಿನಲ್ಲಿ “ಎ” ಮತ್ತು “ಸಿ” ವರ್ಗದ ಒಟ್ಟು 9084 ಸದಸ್ಯರಿಂದ ರೂ.179.28ಲಕ್ಷ ಷೇರು ಬಂಡವಾಳ ಹಾಗೂ ರೂ.30,531.54 ಲಕ್ಷ ಠೇವಣಿಯನ್ನು ಸಂಗ್ರಹಿಸಿ, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 23.93 ರಷ್ಟು ವೃದ್ಧಿಯನ್ನು ಕಂಡಿದೆ. ಸಾಲ ಮತ್ತು ಮುಂಗಡಗಳಲ್ಲಿ ಶೇ. 29.54ರಷ್ಟು ಸುಧಾರಣೆಯನ್ನು ಗಳಿಸಿದೆ. ವರ್ಷಾಂತ್ಯದಲ್ಲಿ ರೂ.27,884.33ಲಕ್ಷ ಸಾಲವನ್ನು ನೀಡಲಾಗಿದೆ. ಆರಂಭದಿAದಲೂ ಸಂಘವು ಆಡಿಟ್ ವರ್ಗಿಕರಣದಲ್ಲಿ “ಎ” ಶ್ರೇಣಿಯಲ್ಲಿ ಸ್ಥಾಯಿಯಾಗಿರುವುದು ನಮ್ಮ ಹೆಚ್ಚುಗಾರಿಕೆಯಾಗಿದೆ. 2025-26ನೇ ಸಾಲಿನಲ್ಲಿ ಸಂಘವು ರೂ.308.58ಲಕ್ಷ ಲಾಭಗಳಿಸಿರುತ್ತದೆ. ಸಂಘವು ತನ್ನ ಮೊದಲ ಶಾಖೆಯ ಅವಿರ್ಭವವನ್ನು ಕಂಡ ಸಂದರ್ಭದಲ್ಲಿ ಮೂರು ಮಂದಿ ಸಿಬ್ಬಂದಿಯೊAದಿಗೆ ಸೇವೆಯನ್ನು ಆರಂಭಿಸಿ, ಇಂದು 14 ವರ್ಷಗಳಲ್ಲಿ 35 ಶಾಖೆಗಳಲ್ಲಿ 92 ಮಂದಿ ಖಾಯಂ ಸಿಬ್ಬಂದಿಯಾಗಿ 100ಕ್ಕೂ ಮಿಕ್ಕಿ ಪಿಗ್ಮಿ ಸಂಗ್ರಾಹಕಗಾರರೊAದಿಗೆ ಸುಮಾರು 400ಕ್ಕೂ ಮಿಕ್ಕಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಉದ್ಯೋಗವಕಾಶವನ್ನೂ ಕಂಡುಕೊAಡು ಅವರ ಬದುಕಿಗೆ ಆಧಾರವಾಗಿ ಬಿಟ್ಟಿದೆ. ವಿಶೇಷವೆಂದರೆ ಸಂಘವು ಶೇ.95 ಮಂದಿ ಮಹಿಳಾ ಸಿಬ್ಬಂದಿಗಳ ಮೂಲಕ ಕಾರ್ಯನಿರ್ವಹಿಸುತ್ತಿರುವುದು ಸ್ತಿçà ಸಶಕ್ತೀಕರಣಕ್ಕೆ ಒತ್ತು ನೀಡಿದಂತೆಯೇ ಆಗಿದೆ. ಸಂಘದ ಸಿಬ್ಬಂದಿಗಳ ಮಕ್ಕಳಿಗೆ ಬಡ್ಡಿ ರಹಿತ ಶಿಕ್ಷಣ ಸಾಲ ಯೋಜನೆಯ ಸೌಲಭ್ಯವನ್ನೂ ವಿಸ್ತರಿಸಲಾಗಿದೆ.
ನಮ್ಮ ಸಂಘವು ಆರ್ಥಿಕ ವ್ಯವಹಾರದ ಜೊತೆ ಜೊತೆಗೆ ಇನ್ನಿತರ ಪೂರಕ ಕಾರ್ಯ ಚಟುವಟಿಕೆಯಲ್ಲೂ ನಿರಂತರವಾಗಿದೆ. ಸಂಘವು ಗುರುಶ್ರೀ ಸ್ವ-ಸಹಾಯ ಗುಂಪುಗಳ ಸದಸ್ಯರುಗಳು ಸ್ವಾವಲಂಭಿ ಬದುಕನ್ನು ಸಾಗಿಸಲು ಅವರಿಗೆ ಸ್ವ-ಉದ್ಯೋಗ ತರಬೇತಿ, ಅರಿವು ಮಾಹಿತಿ ಶಿಬಿರಗಳನ್ನು ಸಂಘದ ವಿವಿಧ ಶಾಖೆಗಳಲ್ಲಿ ಆಯೋಜಿಸಿಕೊಂಡು ಬರಲಾಗುತ್ತಿದೆ. ಇದರ ಪ್ರಯೋಜನವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳುತ್ತಿರುವುದು ಆಶಾದಾಯಕ ಅಂಶವೆನಿಸಿದೆ. ಸಂಘದ ಸದಸ್ಯರ ಹಣಕಾಸಿನ ವ್ಯವಹಾರಕ್ಕೆ ಸಂಬAಧಪಟ್ಟAತೆ ಸದಸ್ಯರ 14ಸಂಖ್ಯೆಗಳ ಖಾತೆಯೊಂದಿಗಿನ ಐ.ಎಫ್.ಎಸ್.ಸಿ ಕೋಡ್ ಮೂಲಕ ನೇರ ನಗದು ವರ್ಗಾವಣೆ ಯೋಜನೆಯನ್ನು ಅನುಷ್ಠಾನಯೋಗ್ಯಗೊಳಿಸಲಾಗಿದೆ. ಜೊತೆಗೆ ಸಂಘದ ಹಿರಿಯ ಸದಸ್ಯರಿಗೆ ಮನೆಬಾಗಿಲಿಗೆ ಹಣಕಾಸು ವಹಿವಾಟು ಸೇವಾ ಸೌಲಭ್ಯವನ್ನು ವಿಸ್ತರಿಸಿ, ಪ್ರಯೋಜನಕಾರಿಯಾಗಿಸಲಾಗಿದೆ.

ನಮ್ಮ ಸಂಘವು ಉತ್ಕöÈಷ್ಟ ವ್ಯವಹಾರ ಸೇವೆಯೊಂದಿಗೆ ಸಮಾಜಮುಖಿ ಚಿಂತನೆ, ಕಳಕಳಿ, ಪೂರಕ ಚಟುವಟಿಕೆಗಳ ಆಯೋಜನೆಯೊಂದಿಗೆ ಮುಂಚೂಣಿಯಲ್ಲಿದೆ. ಇದು ನಮ್ಮ ಭಾಗಿದಾರಿಕೆಯೂ ಹೌದು. ಮುಖ್ಯವಾಗಿ ಸ್ವಾತಂತ್ರ‍್ಯ ದಿನಾಚರಣೆ, ಶಿಕ್ಷಕ ದಿನಾಚರಣೆ, ಮಹಿಳಾ ದಿನಾಚರಣೆ, ಆಟಿದ ಪೊಲಬು…, ಇವೆಲ್ಲವನ್ನು ಆಚರಿಸುತ್ತಾ, ಆಯಾಯ ಸಂದರ್ಭಕ್ಕನುಗುಣವಾಗಿ ಸ್ವಾತಂತ್ರ‍್ಯ ಹೋರಾಟಗಾರರು, ಮಾಜಿ ಯೋಧರು, ಗುರುಶ್ರೇಷ್ಠರು, ಯಶಸ್ವೀ ಮಹಿಳಾ ಮಣಿಗಳು, ನಾಟಿ ವೈದ್ಯರುಗಳು.., ಹೀಗೆ ಸಾಧಕರು, ಸೇವಕರನ್ನು ಗುರುತಿಸಿ, ಸನ್ಮಾನಿಸಿ ಗೌರವಿಸಿಕೊಂಡು ಬರಲಾಗುತ್ತಿದೆ. ಅಂತೆಯೇ ಸಹಕಾರ ಸಪ್ತಾಹ, ಯೋಗ ದಿನಾಚರಣೆ, ಪರಿಸರ ದಿನಾಚರಣೆ, ವನಮಹೋತ್ಸವ, ನಾರಾಯಣ ಗುರು ಜಯಂತಿ ಇವೆಲ್ಲವನ್ನು ಅರ್ಥಪೂರ್ಣವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಸಮಾಜದ ಮಂದಿಯು ಆರೋಗ್ಯದ ಬಗೆಗೆ ಬಹುವಾಗಿ ಕಾಳಜಿಯನ್ನು ಹೊಂದಿರುವ ಸಂಕೇತವಾಗಿ ಶಾಖೆಗಳ ಸ್ಥಾಪನಾ ದಿನದ ಪ್ರಯುಕ್ತ ಉಚಿತ ಆರೋಗ್ಯ ಶಿಬಿರಗಳನ್ನು ಸ್ಥಳೀಯ ಸಂಘ ಸಂಸ್ಥೆಗಳು ಮತ್ತು ಮಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗಳ ಸಹಕಾರ ಸಹಯೋಗದೊಂದಿಗೆ ನಿರಂತರಗೊಳಿಸುತ್ತಾ, ಬರಲಾಗುತ್ತಿದೆ. ಇದುವರೆಗೆ ಒಟ್ಟು 112 ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗಿದ್ದು ಈ ವರ್ಷದ ಫೆಬ್ರವರಿ 01 ರಂದು 100ನೇ ಬೃಹತ್ ಉಚಿತ ಆರೋಗ್ಯ ಶಿಬಿರವನ್ನು ಸಂಘದ ಪ್ರಧಾನ ಕಛೇರಿ ವಠಾರದಲ್ಲಿ ವ್ಯವಸ್ಥೆಗೊಳಿಸಲಾಗಿ ಇದುವರೆಗೆ ಶಿಬಿರಕ್ಕೆ ಯೋಗದಾನ ನೀಡಿದ ಎಲ್ಲರನ್ನೂ ಹಾಗೂ ಸಂಘ-ಸAಸ್ಥೆ, ಆಸ್ಪತ್ರೆಗಳವರನ್ನು ಆಹ್ವಾನಿಸಿ, ಗೌರವಿಸಿ ಅಭಿನಂದಿಸಿದ್ದು ತಮಗೆಲ್ಲಾ ವೇದ್ಯವೇ ಆಗಿದೆ. ಇದುವರೆಗಿನ ಎಲ್ಲಾ ಶಿಬಿರಗಳಲ್ಲಿ ಕಣ್ಣಿನ ಉಚಿತ ಶಸ್ತçಚಿಕಿತ್ಸೆ, ಉಚಿತ ಕನ್ನಡಕ ವಿತರಣೆ, ಔಷಧ ವಿತರಣೆ, ರಕ್ತದಾನ ಮತ್ತು ಆರೋಗ್ಯ ಕಾರ್ಡ್ಗಳನ್ನು ವಿತರಿಸಿಕೊಂಡು ಬರಲಾಗುತ್ತಿದೆ.

ಆಯ್ದ ರಜಾ ದಿನಗಳನ್ನು ಹೊರತು ಪಡಿಸಿ, ಬಹುತೇಕವಾಗಿ ರಜಾ ದಿನಗಳಲ್ಲಿ ಶಾಖೆಗಳು ಕಾರ್ಯನಿರ್ವಹಿಸುತ್ತಾ ಗ್ರಾಹಕರ ಅಗತ್ಯತೆಗಳಿಗೆ ಸ್ಪಂದಿಸಿಕೊAಡು ಸಮರ್ಪಿಸಿಕೊಂಡಿದೆ. ಸಂಘದ ವಾರ್ಷಿಕೋತ್ಸವದಂದು ಸಾಧನೆಗೈದ ನಿಗದಿತ ಗುರಿ ಸಾಧಿಸಿದ ಸಿಬ್ಬಂದಿಗಳನ್ನು ಪ್ರೋತ್ಸಾಹಿಸಿ, ಉತ್ತೇಜಿಸುವ ನೆಲೆಯಲ್ಲಿ ಅವರ ಕೊಡುಗೆಯನ್ನು ಗುರುತಿಸಿ, ಅವರನ್ನು ಪುರಸ್ಕರಿಸಲಾಗುತ್ತಿದೆ. ಸಂಘದ ಸಿಬ್ಬಂದಿಗಳಿಗೆ ಹೊರ ಜಿಲ್ಲೆಗಳಿಗೆ ಅಧ್ಯಯನ ಪ್ರವಾಸವನ್ನು ವ್ಯವಸ್ಥೆಗೊಳಿಸಲಾಗಿದೆ. ವಿಶೇಷವೆಂದರೆ ಹೊರ ಜಿಲ್ಲೆಗಳ ಸಂಘದ ಸಿಬ್ಬಂದಿಗಳು ನಮ್ಮ ಸಂಘಕ್ಕೆ ಅಧ್ಯಯನ ಭೇಟಿ ನೀಡಿ ನಮ್ಮ ವ್ಯವಸ್ಥೆಯನ್ನು ಕಂಡು ಮೆಚ್ಚಿ ಅವರು ಅಲ್ಲಿ ಅನುಷ್ಠಾನಗೊಳಿಸಲು ಬಯಸುತ್ತಿರುವುದು ನಮ್ಮ ಸಂಘದ ಹಿರಿಮೆಯನ್ನು ಹೆಚ್ಚಿಸಿದೆ. ಸಂಘದ ಸಿಬ್ಬಂದಿಗಳಿಗೆ ಆಯಾಯ ಕಾಲಮಾನದಲ್ಲಿ ತರಬೇತಿ, ಪುನಃಶ್ಚೇತನಾ ಶಿಬಿರಗಳನ್ನು ಸಂಘಟಿಸಿಕೊAಡು ಬರಲಾಗುತ್ತಿದೆ.
ನಮ್ಮ ಆಡಳಿತ ಮಂಡಳಿಯ ನಿರ್ದೇಶಕರು ವಿವಿಧ ರಂಗಗಳಲ್ಲಿ ವಿಶೇಷ ಅನುಭವ ಮತ್ತು ಪರಿಪಕ್ವತೆಯನ್ನು ಹೊಂದಿ ಜ್ಞಾನ ವೃದ್ದರೆನಿಸಿದ್ದು, ನಮ್ಮ ಸಂಘದ ಪ್ರಗತಿಯಲ್ಲಿ ಇವೆಲ್ಲವನ್ನು ದಾರೆಯೆರೆಯುತ್ತಾ ಬಂದವರಾಗಿದ್ದಾರೆ. ಹಳೆ ಬೇರು ಹೊಸ ಚಿಗುರಿನೊಂದಿಗೆ ಸಂಘದ ಸದಸ್ಯರು ಈ ಸಂಸ್ಥೆಯನ್ನು ಮತ್ತಷ್ಟ್ಟು ಎತ್ತರಿಸುವಲ್ಲಿ ಕಾರಣೀಭೂತರಾಗಬೇಕಾಗಿದೆ.
ನಮ್ಮ ಸಂಘದ ಈ ಎಲ್ಲಾ ಸಾಧನೆ ಹಾಗೂ ಯಶಸ್ಸಿನಲ್ಲಿ ಪಾಲುದಾರಿಕೆಯನ್ನು ನೀಡಿದ ಸರ್ವ ಸದಸ್ಯರು ಆಡಳಿತ ಮಂಡಳಿ ನಿರ್ದೇಶಕರುಗಳು, ಸಲಹೆಗಾರರು, ಸಂಘದ ಸಿಬ್ಬಂದಿ ವರ್ಗದವರು, ಗ್ರಾಹಕರು, ನಮ್ಮೊಂದಿಗೆ ಕೈಜೋಡಿಸಿದ ಎಲ್ಲಾ ಸಂಘ ಸಂಸ್ಥೆಗಳು, ಸಹಕಾರ ಇಲಾಖೆ ಅಧಿಕಾರಿ ವರ್ಗದವರು ಇವರೆಲ್ಲರೂ ಕಾರಣೀಭೂತರಾಗಿದ್ದು ಈ ಶುಭ ಸಂದರ್ಭದಲ್ಲಿ ಎಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತಾ ತಮ್ಮೆಲ್ಲರ ಪ್ರೀತಿ ಸಹಕಾರ ಹಾರೈಕೆ ಯಥಾ ರೀತಿ ಇರಲೆಂದು ಆಶಿಸುತ್ತಾ ತಮ್ಮೆಲ್ಲರ ಸಹಕಾರವನ್ನು ಇದೇ ಬಗೆಯಲ್ಲಿ ಬಯಸುತ್ತೇನೆ.
ವಂದನೆಯೊಂದಿಗೆ.
ಸಹಕಾರ ರತ್ನ
ಶ್ರೀ ಚಿತ್ತರಂಜನ್ ಬೋಳಾರ್
ಅಧ್ಯಕ್ಷರು

News and Events

ಸAಘದ ಸದಸ್ಯರಾದ ಶ್ರೀ ಪುರುಷೋತ್ತಮ ಕೆ ರವರು ಮಾತನಾಡಿ “ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಅಧ್ಯಕ್ಷರಾದ ಸಹಕಾರ ರತ್ನ ಶ್ರೀಯುತ ಚಿತ್ತರಂಜನ್ ಬೋಳಾರವರ ನೇತ್ರತ್ವದಲ್ಲಿ ಹಮ್ಮಿಕೊಳ್ಳುತ್ತಿರುವ ಸಮಾಜ
ಸಂಘದ ಅಳದಂಗಡಿ ಶಾಖೆಯ ಕಟ್ಟಡದ ಮಾಲೀಕರಾದ ಶ್ರೀ ವಿಶ್ವನಾಥ ಕುದ್ಯಾಡಿ ರವರು ಮಾತನಾಡಿ ” ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಊರಿನ ಸಂಘ ಸಂಸ್ಥೆಗಳ ಜೊತೆಗೆ ಎಲ್ಲಾ
ಬೈರಾಡಿಕೆರೆ ಸಂರಕ್ಷಣಾ ಹಾಗೂ ಅಭಿವೃದ್ದಿ ಸಮಿತಿಯ ಅಧ್ಯಕ್ಷರಾದ ಡಾ. ಅಣ್ಣಯ್ಯ ಕುಲಾಲ್ ಉಳ್ತೂರು ರವರು ಮಾತನಾಡಿ “ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ನಿರಂತರವಾಗಿ ಕಾರ್ಯಕ್ರಮಗಳನ್ನು ಸಂಘದ ಅಧ್ಯಕ್ಷರಾದ
ಸದಸ್ಯರಾದ ಶ್ರೀಮತಿ ಪ್ರಮೀಳಾ ಸದಾಶಿವ ಶೆಟ್ಟಿ ರವರು ಮಾತನಾಡಿ “ಸಂಘದ ಶಾಖೆಗಳಲ್ಲಿ ಸಿಬ್ಬಂದಿಗಳ ಸಹಕಾರವು ಅತ್ಯುತ್ತಮವಾಗಿದ್ದು. ದೈನಂದಿನ ವ್ಯವಹಾರಕ್ಕೆ ತುಂಬಾ ಉಪಯುಕ್ತ ಸಂಘವಾಗಿದೆ” ಎಂದು ಮೆಚ್ಚುಗೆ ವ್ಯಕ್ತ