









ATHMASHAKTHI MULTI PURPOSE CO-OPERATIVE SOCIETY LTD



President Message
ನಮ್ಮ ಸಂಘವು ಉತ್ಕöÈಷ್ಟ ವ್ಯವಹಾರ ಸೇವೆಯೊಂದಿಗೆ ಸಮಾಜಮುಖಿ ಚಿಂತನೆ, ಕಳಕಳಿ, ಪೂರಕ ಚಟುವಟಿಕೆಗಳ ಆಯೋಜನೆಯೊಂದಿಗೆ ಮುಂಚೂಣಿಯಲ್ಲಿದೆ. ಇದು ನಮ್ಮ ಭಾಗಿದಾರಿಕೆಯೂ ಹೌದು. ಮುಖ್ಯವಾಗಿ ಸ್ವಾತಂತ್ರ‍್ಯ ದಿನಾಚರಣೆ, ಶಿಕ್ಷಕ ದಿನಾಚರಣೆ, ಮಹಿಳಾ ದಿನಾಚರಣೆ, ಆಟಿದ ಪೊಲಬು…, ಇವೆಲ್ಲವನ್ನು ಆಚರಿಸುತ್ತಾ, ಆಯಾಯ ಸಂದರ್ಭಕ್ಕನುಗುಣವಾಗಿ ಸ್ವಾತಂತ್ರ‍್ಯ ಹೋರಾಟಗಾರರು, ಮಾಜಿ ಯೋಧರು, ಗುರುಶ್ರೇಷ್ಠರು, ಯಶಸ್ವೀ ಮಹಿಳಾ ಮಣಿಗಳು, ನಾಟಿ ವೈದ್ಯರುಗಳು.., ಹೀಗೆ ಸಾಧಕರು, ಸೇವಕರನ್ನು ಗುರುತಿಸಿ, ಸನ್ಮಾನಿಸಿ ಗೌರವಿಸಿಕೊಂಡು ಬರಲಾಗುತ್ತಿದೆ. ಅಂತೆಯೇ ಸಹಕಾರ ಸಪ್ತಾಹ, ಯೋಗ ದಿನಾಚರಣೆ, ಪರಿಸರ ದಿನಾಚರಣೆ, ವನಮಹೋತ್ಸವ, ನಾರಾಯಣ ಗುರು ಜಯಂತಿ ಇವೆಲ್ಲವನ್ನು ಅರ್ಥಪೂರ್ಣವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಸಮಾಜದ ಮಂದಿಯು ಆರೋಗ್ಯದ ಬಗೆಗೆ ಬಹುವಾಗಿ ಕಾಳಜಿಯನ್ನು ಹೊಂದಿರುವ ಸಂಕೇತವಾಗಿ ಶಾಖೆಗಳ ಸ್ಥಾಪನಾ ದಿನದ ಪ್ರಯುಕ್ತ ಉಚಿತ ಆರೋಗ್ಯ ಶಿಬಿರಗಳನ್ನು ಸ್ಥಳೀಯ ಸಂಘ ಸಂಸ್ಥೆಗಳು ಮತ್ತು ಮಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗಳ ಸಹಕಾರ ಸಹಯೋಗದೊಂದಿಗೆ ನಿರಂತರಗೊಳಿಸುತ್ತಾ, ಬರಲಾಗುತ್ತಿದೆ. ಇದುವರೆಗೆ ಒಟ್ಟು 112 ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗಿದ್ದು ಈ ವರ್ಷದ ಫೆಬ್ರವರಿ 01 ರಂದು 100ನೇ ಬೃಹತ್ ಉಚಿತ ಆರೋಗ್ಯ ಶಿಬಿರವನ್ನು ಸಂಘದ ಪ್ರಧಾನ ಕಛೇರಿ ವಠಾರದಲ್ಲಿ ವ್ಯವಸ್ಥೆಗೊಳಿಸಲಾಗಿ ಇದುವರೆಗೆ ಶಿಬಿರಕ್ಕೆ ಯೋಗದಾನ ನೀಡಿದ ಎಲ್ಲರನ್ನೂ ಹಾಗೂ ಸಂಘ-ಸAಸ್ಥೆ, ಆಸ್ಪತ್ರೆಗಳವರನ್ನು ಆಹ್ವಾನಿಸಿ, ಗೌರವಿಸಿ ಅಭಿನಂದಿಸಿದ್ದು ತಮಗೆಲ್ಲಾ ವೇದ್ಯವೇ ಆಗಿದೆ. ಇದುವರೆಗಿನ ಎಲ್ಲಾ ಶಿಬಿರಗಳಲ್ಲಿ ಕಣ್ಣಿನ ಉಚಿತ ಶಸ್ತçಚಿಕಿತ್ಸೆ, ಉಚಿತ ಕನ್ನಡಕ ವಿತರಣೆ, ಔಷಧ ವಿತರಣೆ, ರಕ್ತದಾನ ಮತ್ತು ಆರೋಗ್ಯ ಕಾರ್ಡ್ಗಳನ್ನು ವಿತರಿಸಿಕೊಂಡು ಬರಲಾಗುತ್ತಿದೆ.
ಶ್ರೀ ಚಿತ್ತರಂಜನ್ ಬೋಳಾರ್
ಅಧ್ಯಕ್ಷರು









