ATHMASHAKTHI MULTI PURPOSE CO-OPERATIVE SOCIETY LTD

The ideation of setting up of Athmashakthi Multipurpose Co-operative Society Ltd. in Dakshina Kannada District took its genesis in the formation of Narayanaguru Swamy Prakashana and Charitable Trust in the year 2003. The trust was registered with the social responsibility of reaching out to the deprived and disadvantaged section of the society. The trust envisaged to publish Athmashakthi quarterly magazine, to set up a co-operative bank, educational institution and health awareness camp for the benefit of the underprivileged.
In the year 2011, the Trust selected 11 members who mobilized other members and garnered the share capital within 3 months and pioneered to form Athmashakthi Multipurpose Co-operative Society (AMCS) on 30.01.2012. Within a short span of 14 years the co-operative has opened 33 branches across the D.K & Udupi District , which testify the reinforcement of faith and confidence reposed by the members and dedicated services of the staff. All the branches have financially surged ahead in terms of profits, performance and currently pay 15% of dividend, which speaks volume of their financial prudence and managerial human capital. Office bearers opine that productive investment in skill education advancement is vital for the poor to avail economic opportunity leading to their upward social mobility.

President Message

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ ) ಪಡೀಲ್ ಮಂಗಳೂರು.
ಗೌರವಾನ್ವಿತ ಆತ್ಮೀಯ ಸದಸ್ಯ ಬಂಧುಗಳೇ,
ಸ್ಥಾನೀಯ ನಡವಳಿಕೆಯೊಂದಿಗೆ ಪ್ರಾಪಂಚಿಕ ಯೋಚನೆ ಸಮ್ಮಿಳಿತಗೊಂಡಾಗ ಸಾಫಲ್ಯ ಅನ್ನುವುದು ನೆರಳಿನಂತೆ ಹಿಂಬಾಲಿಸಿಕೊಂಡು ಬರುತ್ತದೆ ಇದರೊಂದಿಗೆ ದೂರದೃಷ್ಟಿ, ಪರಿಶ್ರಮ,ಪ್ರಾಮಾಣಿಕತೆ, ಇಚ್ಚಾಶಕ್ತಿ, ಕ್ರಿಯಾಶೀಲ ನಾಯಕತ್ವ .. ಹೀಗೆ ಇವೆಲ್ಲವೂ ಜೊತೆ ಸೇರಿಕೊಂಡಾಗ ಯಶಸ್ಸು ಅನ್ನುವುದು ಬೆಳಕಿನಷ್ಟೇ ಸ್ಪಷ್ಟವಾಗಿ ಪ್ರಕಟವಾಗಿ ಬಿಡುತ್ತದೆ ಅನ್ನುವುದು ಪ್ರಾಜ್ಞರ ಮಾತು ಇವೆಲ್ಲದಕ್ಕೆ ಉದಾಹರಣೆಯಾಗಿ ನಿಲುಕುವುದು ನಮ್ಮ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಅನ್ನುವುದು ಅಕ್ಷರಶಃ ಸತ್ಯವೇ ಆಗಿದೆ.ನಿಜ,
ಬ್ರಹ್ಮಶ್ರೀ ನಾರಾಯಣ ಗುರುವರ್ಯರ ತತ್ವ, ಆದರ್ಶ , ಸಂದೇಶ, ಆಶಯ, ಅನುಷ್ಠಾನ ಕಾಯಕದಿ ನಮ್ಮದೂ ಹಿರಿದಾದ ಪಾಲು ಸಲ್ಲಿಕೆಯಾಗುವಂತೆ ನೋಡಿಕೊಳ್ಳಬೇಕೆಂಬ ಹಿರಿದಾಸೆಯೊಂದಿಗೆ ಕಾಣಿಕೆ ರೂಪವೆ ಆಗಿ 30-01-2012 ಸ್ಥಾಪನೆಗೊಂಡಂತಹ ನಮ್ಮ ಸಹಕಾರಿ ಸಂಘವು ಕಳೆದ 14 ವರ್ಷಗಳಲ್ಲಿ ದ.ಕ ಹಾಗೂ ಉಡುಪಿ ಜಿಲ್ಲೆಯಾದ್ಯಂತ ಒಟ್ಟು “33” ಶಾಖೆಗಳನ್ನು ತೆರೆದು ಸದಸ್ಯರಿಗೆ ಉತ್ಕೃಷ್ಟ ಮತ್ತು ಸಂತೋಷಕರ ಸೇವೆಯನ್ನು ನೀಡುತ್ತಾ ಬರುತ್ತಿರುವುದು ಹಾಗು ಇದರ ದ್ಯೋತಕವಾಗಿ ಸಂಘವು 2024-25ನೇ ಸಾಲಿನಲ್ಲಿ “ಎ” ಮತ್ತು “ಸಿ” ವರ್ಗದ ಒಟ್ಟು 7,508 ಸದಸ್ಯರಿಂದ ರೂ.158.00ಲಕ್ಷ ಷೇರು ಬಂಡವಾಳ ಹಾಗೂ ರೂ. 24,635.16ಲಕ್ಷ ಠೇವಣಿಯನ್ನು ಸಂಗ್ರಹಿಸಿದ್ದು, ಇದು ಕಳೆದ ಸಾಲಿಗಿಂತ ಶೇ.9.51ರಷ್ಟು ವೃದ್ಧಿಯಾಗಿರುವುದು ಉಲ್ಲೇಖನೀಯ.ಸಾಲ ಮತ್ತು ಮುಂಗಡಗಳಲ್ಲಿ ಶೇ.20.60ರಷ್ಟು ವೃದ್ಧಿಯಾಗಿದ್ದು, ವರ್ಷಾಂತ್ಯಕ್ಕೆ ರೂ.21,525.69ಲಕ್ಷ ಸಾಲ ನೀಡಲಾಗಿದೆ. ಸಂಘವು ಪ್ರಾರಂಭದಿಂದಲೂ ಆಡಿಟ್ ವರ್ಗಿಕರಣದಲ್ಲಿ “ಎ” ಶ್ರೇಣಿ ಗಳಿಸಿರುವುದು ದಾಖಲಾರ್ಹ ವಾಗಿದೆ . ವರದಿ ವರ್ಷದಲ್ಲಿ ಸಂಘವು ರೂ. 306.32ಲಕ್ಷ ನಿವ್ವಳ ಲಾಭಗಳಿಸಿರುತ್ತದೆ. ಸಂಘದ ಪ್ರಥಮ ಶಾಖಾರಂಭದ ಸಂದರ್ಭ ಕೇವಲ ಮೂರು ಮಂದಿ ಸಿಬ್ಬಂದಿಗಳೊಂದಿಗೆ ಕಾರ್ಯಾರಂಭಗೊಂಡು ಇಂದು 111 ಖಾಯಂ ಸಿಬ್ಬಂದಿಗಳನ್ನೊಳಗೊಂಡು, 100ಕ್ಕೂ ಮಿಕ್ಕ ಪಿಗ್ನಿ ಸಂಗ್ರಾಹಕರು ಸೇವೆ ಸಲ್ಲಿಸುತ್ತಿದ್ದು, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸುಮಾರು 350ಕ್ಕೂ ಅಧಿಕ ಮಂದಿಗೆ ಉದ್ಯೋಗಾವಕಾಶವನ್ನು ಕಲ್ಪಿಸಿಕೊಟ್ಟಿದೆ.ನಗರದ ಪಡೀಲ್ ನಲ್ಲಿ 10,000 ಚದರ ಡಿಯ ಸ್ವಂತ ಆಡಳಿತ ಕಚೇರಿಯನ್ನು ಮತ್ತು ತನ್ನ 33 ನೇ ಕೃಷ್ಣಾಪುರ ಶಾಖೆಯು ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿಯೇ ಆಗಿದೆ ಸಂಘದಲ್ಲಿ ಶೇ.95ರಷ್ಟು ಮಹಿಳಾ ಸಿಬ್ಬಂದಿಗಳೇ ಕಾರ್ಯನಿರ್ವಹಿಸುತ್ತಿದ್ದು ಮಹಿಳಾ ಸಶಕ್ತಿಕರಣದ ಧೈಯೋದ್ದೇಶದ ಸಾಫಲ್ಯಕ್ಕೆ ನಮ್ಮ ಸಂಘವು ಕೈಗನ್ನಡಿಯಾಗಿದೆಯೆನ್ನಲು ಸಂತೋಷವಾಗುತ್ತಿದೆ. ಸಿಬ್ಬಂದಿ ವರ್ಗದ ಮಕ್ಕಳ ವಿದ್ಯಾಭ್ಯಾಸಕ್ಕೆ ಬಡ್ಡಿ ರಹಿತ ಶೈಕ್ಷಣಿಕ ಸಾಲ ಸೌಲಭ್ಯ ಯೋಜನೆಯನ್ನು ಸಂಘವು ಜಾರಿಗೊಳಿಸಿ ವಿಶೇಷತೆಯನ್ನು ಮೆರೆದಿದೆ .
ನಮ್ಮ ಸಂಘದ ಗುರುಶ್ರೀ ಸ್ವಸಹಾಯ ಗುಂಪುಗಳ ಸದಸ್ಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವಲ್ಲಿ ಸ್ವ-ಉದ್ಯೋಗ ತರಬೇತಿ ಶಿಬಿರಗಳನ್ನು ಸಂಘದ ವಿವಿಧ ಶಾಖೆಗಳಲ್ಲಿ ಹಮ್ಮಿಕೊಂಡು ಬರಲಾಗಿದ್ದು, ಗುಂಪಿನ ಸದಸ್ಯರು ಇದರ ಪ್ರಯೋಜನವನ್ನು ನಿರಂತರವಾಗಿ ಪಡೆದುಕೊಳ್ಳುತ್ತಿದ್ದಾರೆ. ಸಂಘದ ಸದಸ್ಯರ ಹಣಕಾಸಿನ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಸದಸ್ಯರ 14 ಸಂಖ್ಯೆಗಳ ಖಾತೆಯೊಂದಿಗೆ ಐಎಫ್‌ಎಸ್‌ ಕೋಡ್ ಮೂಲಕ ನೇರ ನಗದು ವರ್ಗಾವಣೆ ಯೋಜನೆಯನ್ನು ಕಲ್ಪಿಸಲಾಗಿದೆ. ಜೊತೆಗೆ ಸಂಘದ ಹಿರಿಯ ನಾಗರಿಕರಿಗೆ ಮನೆಬಾಗಿಲಿಗೆ ಹಣಕಾಸು ಸೇವಾ ಭಾಗ್ಯದ ಸೌಲಭ್ಯವನ್ನು ವಿಸ್ತರಿಸಲಾಗಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಗಮನ ಸೆಳೆಯಲಾಗಿದೆ.
ವರುಷದ ವಿಶೇಷ ದಿನಗಳಿಗೆ ಸಂಬಂಧಿಸಿದಂತೆ ತತ್ಸಂಬಂಧಿ ಸಾಧಕ ಶ್ರೇಷ್ಠರನ್ನ ಗುರುತಿಸಿ ಗೌರವಿಸಲಾಗುತ್ತಿದೆ. ಮುಖ್ಯವಾಗಿ ಸ್ವಾತಂತ್ರ್ಯ ದಿನಾಚರಣೆಯಂದು ಸ್ವಾತಂತ್ರ್ಯ ಹೋರಾಟಗಾರರು,ಮಾಜಿ ಯೋಧರನ್ನು, ಶಿಕ್ಷಕ ದಿನಾಚರಣೆಯಂದು ಶಿಕ್ಷಕರನ್ನು, ಮಹಿಳಾ ದಿನಾಚರಣೆಯಂದು ಪ್ರೇರಕ ಮಾದರಿ ವನಿತೆಯರನ್ನು, ಆಟಿದ ಪೊಲಬು ದಿನಾಚರಣೆಯಂದು ಹಿರಿಯ ನಾಟಿ ವೈದ್ಯರನ್ನು, ಸಾಧಕ ಗ್ರಾಹಕರನ್ನು…… ಅಭಿನಂದಿಸಿಕೊಂಡು ಬರುತ್ತಿರುವುದು ನಮ್ಮ ಹೊಣೆಗಾರಿಕೆ ಕರ್ತವ್ಯವೆಂದೆ ಭಾವಿಸಿಕೊಂಡು ಬರಲಾಗಿದೆ ಸಂಘವು ವಿಶೇಷ ದಿನಗಳನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರುತ್ತಿದ್ದು ಪ್ರಮುಖವಾಗಿ ಸಹಕಾರ ಸಪ್ತಾಹ ದಿನಾಚರಣೆ, ಪರಿಸರ ದಿನ, ಯೋಗ ದಿನ, ನಾರಾಯಣಗುರು ಜಯಂತಿ….. ಹೀಗೆ ಇವೆಲ್ಲಾ ಸಂಘದ ಇತರೆ ಕಾರ್ಯ ಚಟುವಟಿಕೆಗಳಿಗೆ ಮೆರಗನ್ನೆ ನೀಡಿಬಿಟ್ಟಿದೆ.ಕಳೆದ 13 ವರ್ಷಗಳಿಂದ ಸಂಘದ ಬೇರೆ ಬೇರೆ ಶಾಖೆಗಳಲ್ಲಿ ಮಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗಳ ಸಹಯೋಗದೊಂದಿಗೆ ತಜ್ಞ ವೈದ್ಯರುಗಳ ಉಪಸ್ಥಿತಿಯಲ್ಲಿ , ವಿವಿಧ ಸಂಘ ಸಂಸ್ಥೆ ಗಳ ಸಹಕಾರದೊಂದಿಗೆ ಈ ಲೇಖನದ ಹೊತ್ತಿಗೆ ಒಟ್ಟು 100 ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸಿ ದಿನಾಂಕ 01-02-2026 ರಂದು ಪ್ರಧಾನ ಕಚೇರಿಯಲ್ಲಿ ಆರೋಗ್ಯ ಸೇವಾ ಸಂಗಮ ಸ್ವಾಸ್ತ್ಯ ಸ್ತುತಿ ಶತ ಸ್ಮೃತಿ ಅನ್ನುವ ಅರ್ಥಪೂರ್ಣ ಕಾರ್ಯಕ್ರಮ ನಡೆಸಿ ಆರೋಗ್ಯ ಸೇವಾ ಸಾಧಕರನ್ನು (ಶಿಬಿರಕ್ಕೆ ಯೋಗದಾನ ನೀಡಿದ ವೈದ್ಯರು, ಆಸ್ಪತ್ರೆಗಳು, ಸಹಾಯಕ ಸಿಬ್ಬಂದಿಗಳು, ಆರೋಗ್ಯ ಕಾರ್ಯಕರ್ತರು, ಸಂಘ ಸಂಸ್ಥೆಗಳು ಮಾಧ್ಯಮ ಮಿತ್ರರು….ಹೀಗೆ 250 ಕ್ಕಿಂತಲೂ ಮಿಕ್ಕಿ ಸೇವಾ ಭಾವರುಗಳನ್ನು) ಗುರುತಿಸಿ ಗೌರವಿಸಿ ಧನ್ಯತೆಯನ್ನು ಕಾಣಲಾಗಿದೆ ಅನ್ನುವುದನ್ನು ಇಲ್ಲಿ ಪಡಿ ಮೂಡಿಸಲು ಬಹಳಷ್ಟು ಆನಂದಪಡುತ್ತೇವೆ.ಈ ಶಿಬಿರಗಳಲ್ಲಿ ಶಿಬಿರಾರ್ಥಿಗಳಿಗೆ ಕಣ್ಣಿನ ಉಚಿತ ಶಸ್ತ್ರ ಚಿಕಿತ್ಸೆ, ಉಚಿತ ಕನ್ನಡಕ ಮತ್ತು ಉಚಿತ ಔಷಧಿ ವಿತರಣೆ ಹಾಗೂ ರಕ್ತದಾನ ಶಿಬಿರ ಮತ್ತು ಉಚಿತ ಆರೋಗ್ಯ ಕಾರ್ಡನ್ನು ವಿತರಿಸಲಾಗುತ್ತಿದೆ.ಗ್ರಾಹಕರಿಗೆ ಪ್ರಯೋಜನಕಾರಿಯಾಗುವಲ್ಲಿ ಅವರ ಅಗತ್ಯ ಅನುಕೂಲವನ್ನು ಅನುಲಕ್ಷಿಸಿಕೊಂಡು.ಸಂಘದ ಶಾಖೆಗಳು ವಾರದ ನಡುವಿನ ಕೆಲವೊಂದು ರಜಾದಿನಗಳಲ್ಲೂ ಕಾರ್ಯನಿರ್ವಹಿಸುತ್ತಾ ಬರುತ್ತಿರುವುದು ಗ್ರಾಹಕರ ಬಗೆಗಿನ ಕಾಳಜಿಯನ್ನು ಪ್ರತಿಬಿಂಬಿಸುತ್ತದೆ..
ಸಂಘದ ವಾರ್ಷಿಕೋತ್ಸವದಂದು ಸಿಬ್ಬಂದಿಗಳನ್ನು ಪ್ರೋತ್ಸಾಹಿಸುವ, ಉತ್ತೇಜಿಸುವ ಅವರ ಸಾಧನೆ ಸೇವೆಗಳನ್ನು ಗುರುತಿಸಿ ಗೌರವಿಸುವ ಕಾರ್ಯ ನಿರಂತರ ಗೊಳಿಸಲಾಗಿದೆ ವಿವಿಧ ಜಿಲ್ಲೆಗಳ ಸಹಕಾರಿ ಸಂಘಗಳು ಸದರಿ ಸಂಘಕ್ಕೆ ಭೇಟಿ ನೀಡಿ ಅಧ್ಯಯನ ನಡೆಸುವುದರ ಜೊತೆಗೆ ನಮ್ಮ ಸಿಬ್ಬಂದಿಗಳು ಕೂಡ ಹೊರ ಜಿಲ್ಲೆಗಳ ಹೆಸರಾಂತ ಸಂಘಗಳಿಗೆ ಅಧ್ಯಯನ ಪ್ರವಾಸವನ್ನು ಕೈಗೊಂಡು ನಮ್ಮ ಸಂಘದ ಬೆಳವಣಿಗೆಯ ವೇಗೋತ್ಕರ್ಷಕ್ಕೆ ಪೂರಕ ವಾತಾವರಣವನ್ನು ಕಲ್ಪಿಸಿಕೊಡಲಾಗಿದೆ . ಆಯಾಯ ಸಂದರ್ಭ ಕಾಲಘಟ್ಟದಲ್ಲಿ ಸಂಘದ ಸಿಬ್ಬಂದಿಗಳಿಗೆ ವಿಶೇಷ ತರಬೇತಿ, ಕಾರ್ಯಗಾರ, ಕಾರ್ಯಕ್ರಮಗಳನ್ನು ವ್ಯವಸ್ಥೆಗೊಳಿಸಿ ಅವರನ್ನು ಮತ್ತಷ್ಟು ಪರಿಣಾಮಕಾರಿಗೊಳಿಸುವುದು ಇನ್ನಷ್ಟು ಕ್ರಿಯಾಶೀಲವಾಗಿಸುವುದು ಯಾತವತ್ತುಗೊಳಿಸಲಾಗಿದೆ. ಈ ಎಲ್ಲಾ ಸಾಧನೆ ಹಾಗೂ ಯಶಸ್ಸಿಗೆ ಸರ್ವ ಸದಸ್ಯರು, ಆಡಳಿತ ಮಂಡಳಿ ನಿರ್ದೇಶಕರುಗಳು, ಸಲಹೆಗಾರರು, ಸಂಘದ ಸಿಬ್ಬಂದಿ ವರ್ಗದವರು, ಸಂಘದ ಗ್ರಾಹಕರುಗಳು ಹಾಗೂ ನಮ್ಮೊಂದಿಗೆ ಕೈ ಜೋಡಿಸಿದ ಎಲ್ಲಾ ಸಂಘ ಸಂಸ್ಥೆಗಳು, ಸಹಕಾರಿ ಇಲಾಖೆಯ ಅಧಿಕಾರಿ ವರ್ಗದವರು…. ಕಾರಣೀಭೂತರಾಗಿದ್ದು, ಎಲ್ಲರಿಗೂ ಹೃತ್ತೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತಾ ನಿಮ್ಮೆಲ್ಲರ ಪ್ರೀತಿ, ಸಹಕಾರ, ಹಾರೈಕೆ ನಮ್ಮೊಂದಿಗೆ ಸದಾ ನಿರಂತರವಾಗಿರಲಿ ಎಂದು ಆಶಿಸುತ್ತಾ, ಈ ಸಂಘವನ್ನು ಮಗದಷ್ಟು ಸದೃಢತೆಯಲ್ಲಿ ಮುನ್ನಡೆಸಲು ತಮ್ಮೆಲ್ಲರ ಸಹಕಾರವನ್ನು ಅಪೇಕ್ಷಿಸುತ್ತೇನೆ.
ದಾರಿ ನಡೆಯುವುದರಲ್ಲಿ ಸಂತೋಷವನ್ನು ಕಾಣುತ್ತಿರುವಂತೆ ಗುರಿ ಮುಟ್ಟುತ್ತಿರುವುದರಲ್ಲಿ ಸಾರ್ಥಕ್ಯವನ್ನೂ ನಮ್ಮದಾಗಿಸಿಕೊಳ್ಳುತ್ತಿದ್ದೇವೆ ತಮ್ಮ ಸಹಕಾರದಿಂದ.
ವಂದನೆಯೊಂದಿಗೆ.
ಸಹಕಾರ ರತ್ನ
ಶ್ರೀ ಚಿತ್ತರಂಜನ್ ಬೋಳಾರ್
ಅಧ್ಯಕ್ಷರು

News and Events

ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಮುಲ್ಕಿ ನಗರ ಪಂಚಾಯತ್‌ನ ಮಾಜಿ ಮುಖ್ಯಾಧಿಕಾರಿ ಹಾಗೂ ಹೊಸ ಅಂಗಣ ಪತ್ರಿಕೆಯ ಸಂಪಾದಕರಾದ ಶ್ರೀ ಹರಿಶ್ಚಂದ್ರ ಪಿ ಸಾಲ್ಯಾನ್ ರವರು ಮಾತನಾಡಿ, “ಆತ್ಮಶಕ್ತಿ
ಸಮಾರಂಭದಲ್ಲಿ ದಿವ್ಯ ಸಾನ್ನಿದ್ಯವನ್ನು ವಹಿಸಿದ್ದ ಮೂಡಬಿದಿರೆ ಜೈನ ಮಠದ ಜಗದ್ಗುರು ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಆಶೀರ್ವಚನವನ್ನು ನೀಡುತ್ತಾ “ಮಾನವ ಆದಿಯಿಂದಲೂ ಹುಟ್ಟಿನಾರಭ್ಯ ಸಹಕಾರ ತತ್ವದಿಂದಲೇ
ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ. ಬೆಂಗಳೂರು ಇದರ ಅಧ್ಯಕ್ಷರಾದ ಶ್ರೀ ಜಿ.ಟಿ. ದೇವೇಗೌಡರು ರವರು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಡಾ.ಎಮ್.ಎನ್.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್‌ರವರು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಶ್ರೀ ನೇಮಿರಾಜ್ ಪಿ, ಮುಖ್ಯ