ಆತ್ಮಶಕ್ತಿ ವಿವಿದೋದ್ದೇಶ ಸಹಕಾರಿ ಸಂಘ ಸಣ್ಣ ಅವಧಿಯಲ್ಲಿ ಹಲವು ಶಾಖೆಗಳನ್ನು ಆರಂಭಿಸುವುದರ ಮೂಲಕ ದಾಖಲೆ ಮೆರೆದಿದೆ. ಜಿಲ್ಲಾ, ರಾಜ್ಯ ಮಟ್ಟದಲ್ಲಿ ಪುರಸ್ಕಾರ ಪಡೆದುಕೊಂಡಿರುವ ಸಂಘ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವ ಮೂಲಕ ಜನರಿಗೆ ಸಹಕಾರ ಆಗುವ ರೀತಿಯಲ್ಲಿ ಇನ್ನಷ್ಟು ಅಭಿವೃದ್ಧಿ ಗೊಳ್ಳಲಿ ಎಂದು ಮಾಜಿ ಸಚಿವ ಯು.ಟಿ ಖಾದರ್ ಅಭಿಪ್ರಾಯ ಪಟ್ಟರು. ಅವರು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ನಾಟೆಕಲ್ ನಲ್ಲಿ 17 ನೇ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು. ಆತ್ಮಶಕ್ತಿ ಸಹಕಾರಿ ಸಂಘ ಸಣ್ಣ ಅವಧಿಯೇ ಯಶಸ್ವಿಯಾಗಿದ್ದುಕೊಂಡು ಹಲವು ಶಾಖೆಗಳನ್ನು ಸ್ಥಾಪಿಸಿದೆ. ಹತ್ತು ಕೈಗಳು ಸರ್ವರ ವಿಶ್ವಾಸ ಪಡೆದುಕೊಂಡು ಬೆಳೆದಿರುವುದು ಸಮಾಜಕ್ಕೆ ಮಾದರಿ. ಏಳು ವರ್ಷದಲ್ಲಿ 17 ನೇ ಶಾಖೆ ಸ್ಥಾಪಿಸಿರುವುದು ಒಂದು ದಾಖಲೆ ಆಗಿದೆ. ರಾಜ್ಯ, ಜಿಲ್ಲಾ ಮಟ್ಟದ ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಸಂಸ್ಥೆ ರಾಷ್ಟ್ರಮಟ್ಟದ ಗೌರವಕ್ಕೆ ಒಳಗಾಗುವ ಮುಖೇನ ಮುಂದೆ ಗಿನ್ನಿಸ್ ರೆಕಾಡ್೯ ನತ್ತ ದಾಪುಗಾಲು ಹಾಕಬೇಕು ಎಂದು ಹಾರೈಸಿದರು. ರತ್ನ ಎಜ್ಯುಕೇಷನ್ ಟ್ರಸ್ಟ್ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ಮಾತನಾಡಿ, ಜನರ ಆಶೋತ್ತರಗಳನ್ನು ಈಡೇರಿಸುವಂತೆ ಸಂಸ್ಥೆ ಅಭಿವೃದ್ಧಿ ಯಾಗಲಿ. ಎಲ್ಲಾ ಶಾಖೆಗಳು ಉತ್ತಮ ರೀತಿಯಲ್ಲಿ ಕಾರ್ಯಾಚರಿಸುತ್ತಿದೆ. ಅಧ್ಯಕ್ಷರೂ ಎಲ್ಲರನ್ನು ಸೇರಿಸಿಕೊಂಡು, ಎಲ್ಲರೂ ಒಂದೇ ಅನ್ನುವ ಏಕಾತ್ಮತೆಯಿಂದ ಹೋಗಿರುವುದರಿಂದ ಸಂಸ್ಥೆ ಈ ರೀತಿಯ ಸಾಧಿಸಲು ಸಾದ್ಯವಾಗಿದೆ. ಸಂಸ್ಥೆ ನಮ್ಮ ಎಂಬ ಭಾವನೆಯಿಂದ ಕಾರ್ಯನಿರ್ವಹಿಸಿದಾಗ ಅದು ಇನ್ನಷ್ಟು ಅಭಿವೃದ್ಧಿ ಗೆ ಪೂರಕ ಎಂದರು. ತಾ. ಪಂ ಸದಸ್ಯೆ ಸುರೇಖಾ ಚಂದ್ರಹಾಸ್ ಮಾತನಾಡಿ ನಿಸ್ವಾರ್ಥ ಸೇವೆಯಿಂದ ಉತ್ತಮ ಕೆಲಸ ಹಾಗೂ ಜನಪರ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ಈ ಸಂಘ ಆರೋಗ್ಯದ ಕಡೆಗೂ ಹೆಚ್ಚಿನ ಸೇವೆ ನೀಡಿರುವುದು ಶ್ಲಾಘನಾರ್ಹ. ಜನರಿಗೆ ಇನ್ನಷ್ಟು ಸಹಕಾರವನ್ನು ಸಂಘ ಒದಗಿಸಲಿ ಎಂದು ಹಾರೈಸಿದರು. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಬ್ರಹ್ಮಶ್ರೀ ಕೊಲ್ಯ ಸಂಘದ ಗೌರವಾಧ್ಯಕ್ಷ ಡಾ. ರಾಮಾನುಜಂ, ಮಂಜನಾಡಿ ಗ್ರಾ.ಪಂ ಅಧ್ಯಕ್ಷ ಮಹಮ್ಮದ್ ಅಸೈ ವಳಚ್ಚಿಲ್, ಮಂಜನಾಡಿ ಗ್ರಾ.ಪಂ ಸದಸ್ಯೆ ಪ್ರೇಮಾ, ಕಿನ್ಯಾ ಬೆಳರಿಂಗೆ ಶ್ರೀ ಮಲರಾಯ ಧೂಮಾವತಿ ಬಂಟ ದೈವಗಳ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬಾಬು ಶ್ರೀಶಾಸ್ತ ಕಿನ್ಯಾ, ಜಿ.ಪಂ ಮಾಜಿ ಸದಸ್ಯ ಎನ್. ಎಸ್ ಕರೀಂ, ಮಂಜನಾಡಿ ಗ್ರಾ.ಪಂ ಪಿಡಿಓ ಮಂಜಪ್ಪ ಹೆಚ್. ಹೆಚ್, ಗ್ರಾ.ಪಂ ಸದಸ್ಯರಾದ ಅಬ್ಬಾಸ್, ನಾಟೆಕಲ್ ವರ್ತಕರ ಸಂಘದ ಅಧ್ಯಕ್ಷ ಹನೀಫ್, ಮುಖ್ಯ ಅತಿಥಿಗಳಾಗಿದ್ದರು. ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಶ್ರೀ ವಾಮನ್ ಕೆ. ಶ್ರೀ ರಾಮದಾಸ್ ಮರೋಳಿ, ಶ್ರೀ ಜಿ. ಪರಮೇಶ್ವರ ಪೂಜಾರಿ, ಶ್ರೀ ಆನಂದ ಎಸ್ ಕೊಂಡಾಣ, ಶ್ರೀ ಸುರೇಶ್ ವಿ. ಪೂಜಾರಿ, ಶ್ರೀ ಸೀತಾರಾಮ್ ಎನ್, ಶ್ರೀ ರಮಾನಾಥ ಸನಿಲ್, ಶ್ರೀ ಚಂದ್ರಹಾಸ ಮರೋಳಿ, ಶ್ರೀಮತಿ ಸುಜಯ ಹೇಮಚಂದ್ರ, ಶ್ರೀಮತಿ ಕುಶಲಾಕ್ಷಿ ಯಶವಂತ್, ಸಲಹಾ ಸಮಿತಿ ಸದಸ್ಯರಾದ ಶ್ರೀ ಚಂದ್ರೇಶ್, ಶ್ರೀ ದಿವಾಕರ್ ಬಿ.ಪಿ, ಶ್ರೀ ಬಾಬು ಎಸ್ ಕರ್ಕೇರ, ಶ್ರೀ ಗೋಪಾಲ್, ಶ್ರೀ ಜಗದೀಶ್ ಕೋಟ್ಯಾನ್, ಹಾಗೂ ಶ್ರೀಮತಿ ದೇವಕಿ ಆರ್ ಉಳ್ಳಾಲ್ ಕಾರ್ಯಕ್ರಮದಲ್ಲಿ ಉಪಸ್ಠಿತರಿದ್ದರು. ಇದೇ ವೇಳೆ ಸಂಸ್ಥೆಯ ವಿವಿಧ ರೀತಿಯ ಉಳಿತಾಯ ಖಾತೆಗಳಿಗೆ ಚಾಲನೆ ನೀಡಲಾಯಿತು. ಸಂಘದ ಉಪಾಧ್ಯಕ್ಷ ಶ್ರೀ ನೇಮಿರಾಜ್ ಪಿ ಸ್ವಾಗತಿಸಿದರು. ಸಿಬ್ಬಂದಿ ಕುಮಾರಿ ಮೇಘಶ್ರೀ ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸೌಮ್ಯ ವಿಜಯ್ ವಂದಿಸಿದರು.