ATHMASHAKTHI MULTI PURPOSE CO-OPERATIVE SOCIETY LTD
The ideation of setting up of Athmashakthi Multipurpose Co-operative Society Ltd. in Dakshina Kannada District took its genesis in the formation of Narayanaguru Swamy Prakashana and Charitable Trust in the year 2003. The trust was registered with the social responsibility of reaching out to the deprived and disadvantaged section of the society. The trust envisaged to publish Athmashakthi quarterly magazine, to set up a co-operative bank, educational institution and health awareness camp for the benefit of the underprivileged.
In the year 2011, the Trust selected 11 members who mobilized other members and garnered the share capital within 3 months and pioneered to form Athmashakthi Multipurpose Co-operative Society (AMCS) on 30.01.2012. Within a short span of 9 years the co-operative has opened 18 branches across the District , which testify the reinforcement of faith and confidence reposed by the members and dedicated services of the staff.
President Message
ಆತ್ಮೀಯ ಗೌರವಾನ್ವಿತ ಸದಸ್ಯ ಬಂಧುಗಳೇ,
ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿಯವರ ತತ್ವ, ಆದರ್ಶ, ಧ್ಯೇಯದೊಂದಿಗೆ ಸ್ಥಾಪನೆಗೊಂಡ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.)ವು ಕಳೆದ ಹತ್ತು ವರ್ಷಗಳಲ್ಲಿ “30” ಶಾಖೆಗಳನ್ನು ಹೊಂದಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ 200ಕ್ಕೂ ಅಧಿಕ ಮಂದಿಗೆ ಉದ್ಯೋಗವಕಾಶವನ್ನು ಕಲ್ಪಿಸಿ ರೂ.2,000 ಕೋಟಿಗೂ ಮೀರಿ ವ್ಯವಹಾರವನ್ನು ಮಾಡಿ 2022-23ನೇ ಸಾಲಿನ ಕಾರ್ಯಯೋಜನೆಯಲ್ಲಿ ನಿಗದಿಪಡಿಸಿರುವ ಷೇರುಧನ, ಠೇವಣಿ ಸಂಗ್ರಹಣೆ, ಸಾಲ ಮತ್ತು ಮುಂಗಡಗಳು, ಲಾಭಗಳಿಕೆಯ ಪ್ರಮಾಣದ ಗುರಿ ಮೀರಿದ ಸಾಧನೆಯನ್ನು ಸಾಧಿಸಿದೆ. ವರದಿ ಸಾಲಿನಲ್ಲಿ ಸಂಘವು “ಎ” ಮತ್ತು “ಸಿ” ವರ್ಗದ ಒಟ್ಟು 5,974 ಸದಸ್ಯರಿಂದ ರೂ.129.21 ಲಕ್ಷ ಷೇರು ಬಂಡವಾಳ ಹಾಗೂ ರೂ.21,237 ಲಕ್ಷ ಠೇವಣಿಯನ್ನು ಸಂಗ್ರಹಿಸಿದ್ದು, ಇದು ಕಳೆದ ಸಾಲಿಗಿಂತ ಶೇ.20.63 ರಷ್ಟು ವೃದ್ಧಿ ಯಾಗಿರುತ್ತದೆ, ಸಾಲ ಮತ್ತು ಮುಂಗಡದಲ್ಲಿ ಶೇ.14.08 ರಷ್ಟು ವೃದ್ಧಿಯಾಗಿದ್ದು ವರ್ಷಾಂತ್ಯಕ್ಕೆ ರೂ.14,924.86 ಲಕ್ಷ ಸಾಲ ನೀಡಲಾಗಿದೆ. ಸಂಘವು ಪ್ರಾರಂಭದಿಂದಲೂ ಆಡಿಟ್ ವರ್ಗಿಕರಣದಲ್ಲಿ “ಎ” ಶ್ರೇಣಿಗಳಿಸಿದೆ. ವರದಿ ಸಾಲಿನಲ್ಲಿ ಸಂಘವು ರೂ.235.93 ಲಕ್ಷ ನಿವ್ವಳ ಲಾಭಗಳಿಸಿದ್ದು, ಇದು ಮಾನ್ಯ ಸದಸ್ಯರ ಸಹಕಾರ ಮತ್ತು ಪ್ರೋತ್ಸಾಹ, ಸಿಬ್ಬಂದಿ ವರ್ಗದವರ ಕಠಿಣ ಪರಿಶ್ರಮ, ಕಾರ್ಯದಕ್ಷತೆ ಹಾಗೂ ಪಾರದರ್ಶಕ ವ್ಯವಹಾರದಿಂದ ಕಳೆದ ವರ್ಷದ ಲಾಭಕ್ಕಿಂತ ಶೇ.57.87 ರಷ್ಟು ಏರಿಕೆಯಾಗಿದ್ದು ಈ ಪ್ರಗತಿಗೆ ಆಡಳಿತ ಮಂಡಳಿಯ ಪರವಾಗಿ ಸರ್ವರಿಗೂ ನನ್ನ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.
ಸಮಾಜದ ತೀರಾ ಬಡವರ್ಗದ ಜನರ ಹಿತ ಚಿಂತನೆಯನ್ನು ಸದಾ ಬಯಸುತ್ತಾ ಈ ದಿಕ್ಕಿನಲ್ಲಿ ಮುಂದಡಿಯಿರಿಸುತ್ತಾ ಸಾಗುವುದರಲ್ಲಿ ಸಂತೋಷವನ್ನು ಹೊಂದಿದ್ದೇವೆ. ಆರ್ಥಿಕವಾಗಿ ಹಿಂದುಳಿದ ಮಹಿಳೆಯರ ಸಶಕ್ತತೆ ಮತ್ತು ಸ್ವಾವಲಂಬಿತನಕ್ಕೆ ಯೋಜನೆಗಳನ್ನು ರೂಪಿಸಿ ಅವರ ಸಾಮಾಜಿಕ ಬದುಕಿಗೆ ದೃಢತೆಯನ್ನು ನೀಡುತ್ತಿರುವ ತೃಪ್ತತೆ ನಮ್ಮ ಸಂಘದ್ದಾಗಿದೆ. ಮಹಿಳಾ ಸಬಲೀಕರಣದ ದೃಷ್ಟಿಯಿಂದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಮಾಡುತ್ತಿರುವ ಸೇವೆ ಅನನ್ಯ. ಸಂಘದಲ್ಲಿ ಮುಖ್ಯಕಾರ್ಯನಿರ್ವಹಣಾಧಿಕಾರಿಯಿಂದ ಕಚೇರಿ ಸಹಾಯಕರವರೆಗೆ ಶೇ.95 ರಷ್ಟು ಮಹಿಳಾ ಸಿಬ್ಬಂದಿಗಳೇ ಇದ್ದು, ಉತ್ತಮ ಸೇವೆಯನ್ನು ನೀಡುತ್ತಿರುವ ಸಿಬ್ಬಂದಿ ವರ್ಗದವರನ್ನು ಪ್ರತಿ ವರ್ಷ ಸಂಘದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪೆÇ್ರೀತ್ಸಾಹಕ ಉಡುಗೊರೆಯನ್ನು ನೀಡಿ ಗೌರವಿಸಿರುತ್ತೇವೆ. ಸಂಘದ ಸಿಬ್ಬಂದಿಗಳ ಪ್ರತಿಭೆಗಳಿಗೆ ಸೂಕ್ತ ಅವಕಾಶಗಳನ್ನು ನೀಡುವ ನಿಟ್ಟಿನಲ್ಲಿ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನೂ ಕೂಡ ಆಯೋಜಿಸುತ್ತಾ ಬಂದಿರುತ್ತೇವೆ.
ಆರೋಗ್ಯ ಪೂರ್ಣ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಕಳೆದ ಹತ್ತು ವರ್ಷಗಳಿಂದ ಸಂಘದ ಬೇರೆ ಬೇರೆ ಶಾಖೆಗಳಲ್ಲಿ 50ಕ್ಕೂ ಮಿಕ್ಕಿ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸಿದ್ದೇವೆ. ಸುಮಾರು 400ಕ್ಕೂ ಮಿಕ್ಕಿ ಕಣ್ಣಿನ ಶಸ್ತ್ರಚಿಕಿತ್ಸೆ, 10,000ಕ್ಕೂ ಮಿಕ್ಕಿ ಉಚಿತ ಕನ್ನಡಕ ವಿತರಣೆ, ಉಚಿತ ಔಷಧಿ ವಿತರಣೆ ಹಾಗೂ ಉಚಿತ ರಕ್ತದಾನ ಶಿಬಿರ, ಉಚಿತ ಆರೋಗ್ಯ ಕಾರ್ಡ್ ವಿತರಣೆಯನ್ನು ಆಯೋಜಿಸುತ್ತಾ ಬಂದಿರುತ್ತೇವೆ. ಪ್ರಾರಂಭದಿಂದಲೂ ಸಾವಿರಾರು ಮಂದಿ ಬಡವರು ಇದರ ಪ್ರಯೋಜನ ಪಡೆದದ್ದು ಸಂಘಕ್ಕೆ ಸಾರ್ಥಕ ಸಂಪ್ರಾಪ್ತವಾದ ಬಗ್ಗೆ ಸಂತೋಷವಿದೆ.
ಸಾರ್ವಜನಿಕರ ಉಪಯೋಗಕ್ಕಾಗಿ ಬಸ್ಸು ತಂಗುದಾಣ ನಿರ್ಮಾಣ, ಪರಿಸರ ದಿನಾಚರಣೆಯಂದು ರಾಷ್ಟ್ರೀಯ ಹೆದ್ದಾರಿ ನಡುವೆ ಗಿಡಗಳನ್ನು ನೆಟ್ಟು ವನಮಹೋತ್ಸವವನ್ನು ಆಚರಿಸಿರುತ್ತೇವೆ. ಆರ್ಥಿಕವಾಗಿ ಹಿಂದುಳಿದವರಿಗೆ ಸೋರುವ ಸೂರಿನಲ್ಲಿ ವಾಸಿಸುತ್ತಾ ಛಾವಣಿ ನೋಡುತ್ತಾ ದಿನಗಳೆಯುತ್ತಿದ್ದ ಒಂದಷ್ಟು ಮಂದಿಗೆ ಸಂಘದ ವತಿಯಿಂದ ಮನೆಯ ಪುನರ್ ನಿರ್ಮಾಣ ಮಾಡಿಕೊಡುವ ಮೂಲಕ ಸಂಘವು ತನ್ನ ಸಾಮಾಜಿಕ ಬದ್ಧತೆಯನ್ನು ಹಾಗೂ ಆರ್ಥಿಕ ಕಾರಣಗಳಿಂದ ಶಿಕ್ಷಣದಿಂದ ವಂಚಿತರಾದ ಮಕ್ಕಳಿಗೆ ನಿರಂತರ ವಿದ್ಯಾರ್ಥಿ ವೇತನವನ್ನು ನೀಡಿ ಅವರನ್ನು ವಿದ್ಯಾ ಸಂಪನ್ನರನ್ನಾಗಿಸುತ್ತಾ ಸಮಾಜ ಮತ್ತು ದೇಶಕ್ಕೆ ಆಸ್ತಿಯಾಗಿಸುತ್ತಾ ಬಂದುದರ ಬಗ್ಗೆ ಹೆಮ್ಮೆಯೂ ನಮ್ಮ ಸಂಘದ್ದಾಗಿದೆ.
ಈ ಎಲ್ಲಾ ಸಾಧನೆ ಮತ್ತು ಸರ್ವತೋಮುಖ ಅಭಿವೃದ್ಧಿಗೆ ಸರ್ವ ಸದಸ್ಯರು, ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಮತ್ತು ಸಿಬ್ಬಂದಿ ವರ್ಗದವರು ಹಾಗೂ ನಮ್ಮೊಂದಿಗೆ ಕೈ ಜೋಡಿಸಿದ ಎಲ್ಲಾ ಸಂಘ-ಸಂಸ್ಥೆಗಳು ಕಾರಣೀಭೂತರಾಗಿದ್ದೀರಿ. ಈ ಸಂದರ್ಭದಲ್ಲಿ ಎಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತಾ ನಿಮ್ಮೆಲ್ಲರ ಬೆಂಬಲ, ಸಹಕಾರ, ಹಾರೈಕೆ ನಮ್ಮೊಂದಿಗೆ ನಿರಂತರವಾಗಿರಲಿ ಎಂದು ಆಶಿಸುತ್ತಾ ನನ್ನ ಮಾತಿಗೆ ವಿರಾಮ ನೀಡುತ್ತಿದ್ದೇನೆ.