ಸಂಘದ ಸದಸ್ಯರಾದ ಶ್ರೀ ಸದಾಶಿವ ಪೂಜಾರಿ ಮತ್ತು ಶ್ರೀ ಮೋಹನ್‍ದಾಸ್ ಕೆ ಮಾತನಾಡಿ ಸಂಘವು ನೀಡುತ್ತಿರುವ ಸೇವೆಗೆ ಮತ್ತು ಸಿಬ್ಬಂದಿಗಳು ನೀಡುತ್ತಿರುವ ಸೇವೆಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಸಂಘದ ಸದಸ್ಯರಾದ ಶ್ರೀಮತಿ ಜಯಕುಮಾರಿ ಮಾತನಾಡಿ ಸಂಘವು ಹೆಚ್ಚು ಶಾಖೆಗಳನ್ನು ತೆರೆದು ಗ್ರಾಹಕರಿಗೆ ಇನ್ನೂ ಉತ್ತಮ ರೀತಿಯ ಸೇವೆಯನ್ನು ನೀಡಲಿ ಎಂದು ಶುಭ ಹಾರೈಸಿದರು. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಚಿತ್ತರಂಜನ್ ಬೋಳಾರ್ ರವರು ಮಾತನಾಡಿ “ಸಂಘ ಮಾಡಿರುವ ಸಾಧನೆ ಮತ್ತು ಸರ್ವತೋಮುಖ ಪ್ರಗತಿಗೆ ದ.ಕ.ಜಿಲ್ಲಾ […]
