ಅಂತಾರಾಷ್ಟ್ರೀಯ ಮಾನವ ಹಕ್ಕುಗಳು ಪ್ರಶಸ್ತಿ ಪ್ರಧಾನ ಸಮಾರಂಭವು ಡಿಸೆಂಬರ್ 25ರಂದು ಪ್ರಬೋಧಂಕರ್ ಥಾಕ್ರೆ ಆಡಿಟೋರಿಯಂ, ಮುಂಬೈ ಯಲ್ಲಿ ಅಂತರಾಷ್ರೀಯ ಮಾನವ ಹಕ್ಕುಗಳು ಪೀಪಲ್ಸ್ ಕೌನ್ಸಿಲ್ ಇದರ ಅಧ್ಯಕ್ಷರಾದ ಲಯನ್ ಡಾ. ಶಂಕರ್ ಕೆ. ಶೆಟ್ಟಿ, ಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಕಾರ್ಯಕ್ರಮವನ್ನು ಅನಿವಾಸಿ ಭಾರತೀಯ ಹಾಗೂ ಬಹರೈನ್ ರಾಷ್ಟ್ರೀಯ ಮಾನವ ಹಕ್ಕುಗಳ ಅಧ್ಯಕ್ಷರಾದ ಶ್ರೀ ಲೀಲಾದರ್ ಬೈಕಂಪಾಡಿ ಇವರು ಉದ್ಘಾಟಿದರು. ಈ ಕಾರ್ಯಕ್ರಮದಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ದ ಅಧ್ಯಕ್ಷರಾದ ಶ್ರೀ ಚಿತ್ತರಂಜನ್ ಬೋಳಾರ್ ಇವರು ಸಹಕಾರ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸಲ್ಲಿಸಿರುವ ಅಪಾರ ಸಾಧನೆಗಾಗಿ ಅಂತರಾಷ್ರೀಯ ಮಾನವ ಹಕ್ಕುಗಳ ಭಾರತ ರತ್ನ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ವೀಕರಿಸಿದರು.
ಶ್ರೀಯುತರು ಸಹಕಾರ ಕ್ಷೇತ್ರದಲ್ಲಿ ಸಾಮಾಜಿಕ ಕಳಕಳಿಯೊಂದಿಗೆ ಸೇವೆಗೈದು ರಾಜ್ಯದಲ್ಲಿ ಅಲ್ಲದೆ ರಾಷ್ಟ್ರ ಮಟ್ಟದಲ್ಲಿ ಹೆಸರು ಗಳಿಸಿದ್ದಾರೆ. ಇವರಿಗೆ 2016ರಲ್ಲಿ 63ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಉತ್ತಮ ಸಹಕಾರಿ ಪ್ರಶಸ್ತಿ, ರಾಷ್ಟ್ರೀಯ “ಬಸವಶ್ರೀ” ಪ್ರಶಸ್ತಿ, “ಸಮಾಜ ರತ್ನ ಪ್ರಶಸ್ತಿ”, “ಪರಿವರ್ತನಶ್ರೀ ರಾಜ್ಯ ಪ್ರಶಸ್ತಿ” ಜೊತೆಯಲ್ಲಿ ಹಲವಾರು ಸಂಘ -ಸಂಸ್ಠೆಗಳಲ್ಲಿ ಸಕ್ರೀಯವಾಗಿರುವ ಇವರನ್ನು ಹಲವಾರು ಸಹಕಾರ ಸಂಘ- ಸಂಸ್ಠೆಗಳು ಇವರನ್ನು ಗುರುತಿಸಿ ಸನ್ಮಾನಿಸಿದೆ. ಭಾರತರತ್ನ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ರಾಷ್ಟ್ರೀಯ ಪ್ರಶಸ್ತಿ ಇವರ ಸಾಧನೆಯ ಹಿರಿಮೆಯನ್ನು ಇನ್ನಷ್ಟು ಹೆಚ್ಚಿಸಿದೆ.
ಸಂಘದ ಸಕ್ರೀಯ ಚಟುವಟಿಕೆಯೊಂದಿಗೆ ಅಧ್ಯಕ್ಷರ ಕ್ರಿಯಾಶೀಲತೆಯು ಉಲ್ಲೇಖನೀಯ. ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ಬೆಂಗಳೂರು ಮತ್ತು ದ.ಕ. ಜಿಲ್ಲಾ ಸಹಕಾರ ಯೂನಿಯನ್ ಇದರ ನಿರ್ದೇಶಕರಾಗಿ ಹಾಗೂ ಸಹಕಾರ ಭಾರತಿ ಮಂಗಳೂರು ನಗರ ಜಿಲ್ಲೆ ಇದರ ಅಧ್ಯಕ್ಷರಾಗಿ ಗುರುತಿಸಿಕೊಂಡಿದ್ದಾರೆ.
ಮುಖ್ಯ ಅತಿಥಿಗಳಾಗಿ ಲಯನ್ಸ್ ಅಂತಾರಾಷ್ಟ್ರೀಯ ನಿರ್ದೇಶರಾದ ಲಯನ್ ಡಾ. ಸಂತೋಷ್ ಶೆಟ್ಟಿ, ಮಾನವ ಹಕ್ಕುಗಳ ಪೀಪಲ್ಸ್ ಕೌನ್ಸಿಲ್ ಅಂತಾರಾಷ್ಟ್ರೀಯ ಕಾರ್ಯದರ್ಶಿಯಾದ ಡಾ. ಎ.ಎನ್. ರಸನ್‍ಕುಟೆ ,ರಾಷ್ಟ್ರೀಯ ಕಾರ್ಯದರ್ಶಿಯಾದ ಶ್ರೀ ಧರ್ಮೆಂದ್ರ ಪ್ರಜಪತಿ: , ರಾಷ್ಟ್ರೀಯ ಸಾರ್ವಜನಿಕ ಸಂಪರ್ಕ ಅಧಿಕಾರಿಯಾದ ಶ್ರೀ ಬಾಬುರಾವ್ ತಯಡೆ, ಉಪಾಧ್ಯಕ್ಶರುಗಳಾದ ಶ್ರೀಮತಿ ಆಶಾ ಶೆಟ್ಟಿ ಹಾಗೂ ಶ್ರೀಮತಿ ಸುಜತಾ ಕೋಟ್ಯಾನ್ , ತಮಿಳುನಾಡು ಮಾನವ ಹಕ್ಕುಗಳ ರಾಜ್ಯ ಅದ್ಯಕ್ಷರಾದ ಶ್ರೀ ಮುರುಗನ್ ಮುವಪ್ಪನವರ್ ಹಾಗೂ ಮಹಾರಾಷ್ತ್ರ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಚಯರ್ ಮೈನ್ ಆದ ಶ್ರೀಮತಿ ಯಶೋದ ನಾಗರಾಜ ಶೆಟ್ಟಿ ಉಪಸ್ಥಿತರಿದ್ದರು.