ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಉಳ್ಳಾಲ ಶಾಖೆಯ 11ನೇ ವಾರ್ಷಿಕೋತ್ಸವ ಹಾಗೂ ಗ್ರಾಹಕ ಸಭೆಯು ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ರವರ ಅಧ್ಯಕ್ಷತೆಯಲ್ಲಿ ಜರುಗಿತು. ಸಂಘದ ಸದಸ್ಯರಾದ ಶ್ರೀ ವಿಜಯ್ ಕುಮಾರ್, ಶ್ರೀ ಪುರುಷೋತ್ತಮ ಕೆ, ಶ್ರೀ ಗೋಪಾಲ್ ಯು.ಕೆ, ಹಾಗೂ ಶ್ರೀಮತಿ ದೇವಕಿ ಆರ್ ಉಳ್ಳಾಲ್ ಇವರುಗಳು ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಘದ ಸದಸ್ಯರಾದ ಶ್ರೀ ವಿಜಯ್ ಕುಮಾರ್ ರವರು ಮಾತನಾಡಿ, “ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ನಿರಂತರವಾಗಿ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದೆ. ಸಿಬ್ಬಂದಿಗಳ ನಗುಮುಖದ ಸೇವೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಸಂಘವು ಇತರೆ ಸಂಘ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ನಿರಂತರವಾಗಿ ಆರೋಗ್ಯ ಶಿಬಿರವನ್ನು ಏರ್ಪಡಿಸುತ್ತಾ ಬರುತ್ತಿರುವುದು ಶ್ಲಾಘನೀಯ” ಎಂದರು.

ಸAಘದ ಸದಸ್ಯರಾದ ಶ್ರೀ ಪುರುಷೋತ್ತಮ ಕೆ ರವರು ಮಾತನಾಡಿ “ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಅಧ್ಯಕ್ಷರಾದ ಸಹಕಾರ ರತ್ನ ಶ್ರೀಯುತ ಚಿತ್ತರಂಜನ್ ಬೋಳಾರವರ ನೇತ್ರತ್ವದಲ್ಲಿ ಹಮ್ಮಿಕೊಳ್ಳುತ್ತಿರುವ ಸಮಾಜ ಮುಖಿ ಕಾರ್ಯಕ್ರಮಗಳು ಶ್ಲಾಘನೀಯ” ಎಂದರು. ಸಂಘದ ಸದಸ್ಯರಾದ ಶ್ರೀಮತಿ ದೇವಕಿ ಆರ್ ಉಳ್ಳಾಲ್‌ರವರು ಮಾತನಾಡಿ “ರಾಷ್ಟಿçÃಕೃತ ಬ್ಯಾಂಕ್‌ನ ಸೇವೆಗಿಂತ ಸಹಕಾರಿ ಸಂಘದ ಸೇವೆಯು ವೇಗವಾಗಿರುತ್ತದೆ ಮತ್ತು ಸರಳತೆಯಿಂದ ಕೂಡಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಂಘದ ಸದಸ್ಯರಾದ ಶ್ರೀ ಪುಷ್ಪರಾಜ್, ಶ್ರೀ ಯು ಐತ್ತಪ್ಪ ಶೆಟ್ಟಿಗಾರ್ ಮತ್ತು ಶ್ರೀ ಮಾಧವ […]

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಅಳದಂಗಡಿ ಶಾಖೆಯ ವತಿಯಿಂದ ಉಚಿತ ವೈದ್ಯಕೀಯ, ನೇತ್ರ ತಪಾಸಣಾ ದಂತ ಚಿಕಿತ್ಸಾ ಮತ್ತು ರಕ್ತದಾನ ಶಿಬಿರವು ಶ್ರೀ ಗುರು ಸಭಾ ಭವನ, ಅಳದಂಗಡಿ, ಇಲ್ಲಿಜರುಗಿತು. ಈ ಶಿಬಿರವನ್ನು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ.) ಬಳಂಜ ಇದರ ಅಧ್ಯಕ್ಷರಾದ ಶ್ರೀ ಸಂತೋಷ್ ಪಿ. ಕೋಟ್ಯಾನ್ ರವರು ಉದ್ಘಾಟಿಸಿ ಮಾತನಾಡಿ “ಸಮಾಜದಲ್ಲಿ ಶ್ರೀಮಂತ ವ್ಯಕ್ತಿ ಎಂದರೆ ಹಣ ಇರುವವನಲ್ಲ, ಒಳ್ಳೆಯ ಆರೋಗ್ಯ ಇರುವ ವ್ಯಕ್ತಿ ಶ್ರೀಮಂತ. ಈ ನಿಟ್ಟಿನಲ್ಲಿ ನಿರಂತರವಾಗಿ ಶಿಬಿರಗಳನ್ನು ಆಯೋಜಿಸಿ ಉತ್ತಮ ಆರೋಗ್ಯಪೂರ್ಣ ಸಮಾಜ ನಿರ್ಮಿಸುವಲ್ಲಿ ಆತ್ಮಶಕ್ತಿ ಸಹಕಾರ ಸಂಘದ ಪಾತ್ರ ಹೆಚ್ಚಿದೆ. ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ರವರ ಬದಲಾವಣೆಯ ದೃಷ್ಟಿಕೋನ ಹಾಗೂ ಮಹಿಳಾ ಸಬಲೀಕರಣದಿಂದ ಸಂಘವು ಅಭಿವೃದ್ಧಿ ಪಥದತ್ತ ಮುನ್ನುಗುತ್ತಿದೆ” ಎಂದು ಶ್ಲಾಘಿಸಿದರು.

ಸಂಘದ ಅಳದಂಗಡಿ ಶಾಖೆಯ ಕಟ್ಟಡದ ಮಾಲೀಕರಾದ ಶ್ರೀ ವಿಶ್ವನಾಥ ಕುದ್ಯಾಡಿ ರವರು ಮಾತನಾಡಿ ” ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಊರಿನ ಸಂಘ ಸಂಸ್ಥೆಗಳ ಜೊತೆಗೆ ಎಲ್ಲಾ ಹಿರಿಯರನ್ನು ಒಟ್ಟುಗೂಡಿಸಿ ಮಾಡುತ್ತಿರುವ ವೈದ್ಯಕೀಯ ಶಿಬಿರವು ಸಮಾಜಮುಖಿ ಚಟುವಟಿಕೆಯಾಗಿದ್ದು, ಇಂತಹ ಕಾರ್ಯಕ್ರಮವನ್ನು ಆಯೋಜಿಸುತ್ತಿರುವ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘಕ್ಕೆ ಅಭಿನಂದನೆ” ಸಲ್ಲಿಸಿದರು. ಜೆಸಿಐ ಬೆಳ್ತಂಗಡಿ ಇದರ ಕಾರ್ಯದರ್ಶಿಯಾದ ಶ್ರೀ ರಕ್ಷಿತ್ ಅಂಡಿಜೆ ರವರು ಮಾತನಾಡಿ “ಆತ್ಮಶಕ್ತಿ ಸಹಕಾರಿ ಸಂಘವು ಬೇರೆ ಎಲ್ಲಾ ಸಹಕಾರಿ ಸಂಘಗಳಿಗಿ೦ತ ವಿಭಿನ್ನವಾಗಿ, ಸಾರ್ವಜನಿಕರ ಆರೋಗ್ಯದ […]

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಮಂಗಳೂರು ಇದರ ವತಿಯಿಂದ ವಿಶ್ವ ಪರಿಸರ ದಿನಚಾರಣೆ ಪ್ರಯುಕ್ತ ಸಂಘದ ಪ್ರಧಾನ ಕಛೇರಿಯ ಬಳಿಯಿರುವ ಬೈರಾಡಿಕೆರೆಯ ವ್ಯಾಪ್ತಿಯಲ್ಲಿ ಸಸಿನೆಡುವ ಮೂಲಕ ಕಾರ್ಯಕ್ರಮವನ್ನು ಆಚರಿಸಲಾಯಿತು. ವಿಶ್ವ ಪರಿಸರ ದಿನಚಾರಣೆಯನ್ನು ಪರಿಸರ ಪ್ರೇಮಿ ಶ್ರೀ ಮಾಧವ ಉಳ್ಳಾಲ ರವರ ಮಾರ್ಗದರ್ಶನದಲ್ಲಿ ಬೈರಾಡಿಕೆರೆಯ ಸುತ್ತಮುತ್ತ ಸಸಿನೆಡುವ ಮೂಲಕ ಆಚರಿಸಲಾಯಿತು.

ಬೈರಾಡಿಕೆರೆ ಸಂರಕ್ಷಣಾ ಹಾಗೂ ಅಭಿವೃದ್ದಿ ಸಮಿತಿಯ ಅಧ್ಯಕ್ಷರಾದ ಡಾ. ಅಣ್ಣಯ್ಯ ಕುಲಾಲ್ ಉಳ್ತೂರು ರವರು ಮಾತನಾಡಿ “ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ನಿರಂತರವಾಗಿ ಕಾರ್ಯಕ್ರಮಗಳನ್ನು ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್‌ರವರ ನೇತೃತ್ವದಲ್ಲಿ ಹಮ್ಮಿಕೊಂಡು ಬರುತ್ತಿದೆ. ಈ ಬಾರಿ ಸಂಘವು ವಿಶ್ವ ಪರಿಸರ ದಿನಚಾರಣೆಯನ್ನು ಬೈರಾಡಿಕೆರೆಯ ಸುತ್ತಮುತ್ತ ಸಸಿನೆಡುವ ಮೂಲಕ ಆಚರಿಸಿರುವುದು ನಮಗೆಲ್ಲರಿಗೂ ತುಂಬಾ ಸಂತಸದ ವಿಷಯವಾಗಿದೆ. ಬೈರಾಡಿಕೆರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಮುಂದಿನ ದಿನಗಳಲ್ಲಿ ನಮ್ಮೊಂದಿಗೆ ಕೈ […]

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ) ನೀರುಮಾರ್ಗ ಶಾಖೆಯ ಚತುರ್ಥ ವಾರ್ಷಿಕೋತ್ಸವ ಹಾಗೂ ಗ್ರಾಹಕರ ಸಭೆಯು ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ರವರ ಅಧ್ಯಕ್ಷತೆಯಲ್ಲಿ ನೀರುಮಾರ್ಗ ಶಾಖೆಯಲ್ಲಿ ಜರುಗಿತು. ಸಂಘದ ಗ್ರಾಹಕರುಗಳಾದ ಶ್ರೀ ಪುಟ್ಟಸ್ವಾಮಿ ಎಚ್. ಶ್ರೀ ಶ್ರೀಧರ, ಶ್ರೀ ರಾಜೇಶ್, ಶ್ರೀಮತಿ ಶಶಿಪ್ರಭಾ ಹಾಗೂ ಶ್ರೀ ನಾರಾಯಣ ಪೂಜಾರಿ ರವರು ದೀಪ ಪ್ರಜ್ವಲನೆ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಘದ ಸದಸ್ಯರಾದ ಶ್ರೀ ಪುಟ್ಟಸ್ವಾಮಿ ಎಚ್. ರವರು “ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ನೀರುಮಾರ್ಗ ಪರಿಸರದಲ್ಲಿರುವ ಉತ್ತಮ ಸೊಸೈಟಿ ಆಗಿದ್ದು, ಇಲ್ಲಿನ ಜನರ ಅಚ್ಚುಮೆಚ್ಚಿನ ಸೊಸೈಟಿ ಆಗಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸದಸ್ಯರಾದ ಶ್ರೀಮತಿ ಶಶಿಪ್ರಭಾ ರವರು ಮಾತನಾಡಿ “ಸಹಕಾರಿ ಕ್ಷೇತ್ರದಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಸೇವಾ ಮನೋಭಾವದ ಸಿಬ್ಬಂದಿಯಿAದ ಉನ್ನತ ಸ್ಥಾನಕ್ಕೆ ಏರುವುದರಲ್ಲಿ ಎರಡು ಮಾತಿಲ್ಲ” ಎಂದು ಶ್ಲಾಘಿಸಿದರು.

ಸದಸ್ಯರಾದ ಶ್ರೀಮತಿ ಪ್ರಮೀಳಾ ಸದಾಶಿವ ಶೆಟ್ಟಿ ರವರು ಮಾತನಾಡಿ “ಸಂಘದ ಶಾಖೆಗಳಲ್ಲಿ ಸಿಬ್ಬಂದಿಗಳ ಸಹಕಾರವು ಅತ್ಯುತ್ತಮವಾಗಿದ್ದು. ದೈನಂದಿನ ವ್ಯವಹಾರಕ್ಕೆ ತುಂಬಾ ಉಪಯುಕ್ತ ಸಂಘವಾಗಿದೆ” ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು. ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ರವರು ಮಾತನಾಡಿ “ಗ್ರಾಹಕರ ಪ್ರೋತ್ಸಾಹದಿಂದ ಸಂಘವು ಉತ್ತಮ ಪ್ರಗತಿಯನ್ನು ಹೊಂದಲು ಸಾಧ್ಯವಾಗಿದೆ. ಸಂಘವು ಕೇವಲ ಬ್ಯಾಂಕಿAಗ್ ಮಾತ್ರವಲ್ಲದೆ, ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಜೊತೆಯಲ್ಲಿ ಸದಸ್ಯರ ಆರೋಗ್ಯದ ಕಾಳಜಿಯಿಂದ ನಿರಂತರವಾಗಿ ವೈದ್ಯಕೀಯ ಶಿಬಿರಗಳನ್ನು ಆಯೋಜಿಸುತ್ತಾ […]

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಎಲ್ಯಾರ್‌ಪದವು ಶಾಖೆಯ ದ್ವಿತೀಯ ವಾರ್ಷಿಕೋತ್ಸವದ ಪ್ರಯುಕ್ತ ಎ.ಜೆ ಇನ್‌ಸ್ಟಿಟ್ಯೂಟ್ ಆ¥s಼ï ಡೆಂಟಲ್ ಸೈನ್ಸ್, ಮಂಗಳೂರು ಹಾಗೂ ಕಣಚೂರು ಮೆಡಿಕಲ್ ಕಾಲೇಜ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ನಾಟೆಕಲ್, ಮಂಗಳೂರು ಇವರ ನುರಿತ ವೈದ್ಯರ ತಂಡದವರಿAದ ಉಚಿತ ನೇತ್ರ ತಪಾಸಣಾ, ದಂತ ಚಿಕಿತ್ಸಾ ಮತ್ತು ಸಾಮಾನ್ಯ ವೈದ್ಯಕೀಯ ಶಿಬಿರವು ಶರೂನ್ ಸ್ಟçಕ್ಚರ್ , ಹೋಲಿ ಕ್ರಾಸ್ ಚರ್ಚ್ ಬಳಿ, ಎಲ್ಯಾರ್‌ಪದವು, ಕೊಣಾಜೆ (ಶಾಖೆಯ ಆವರಣ) ಇಲ್ಲಿ ಜರುಗಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಇದರ ನೋಡೆಲ್ ಅಧಿಕಾರಿಯಾದ ಶ್ರೀ ಪ್ರಶಾಂತ್ ಪೂರ್ಜೆ ರವರು ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, “ರೋಗ ಬಂದಿರುವವರು ಮಾತ್ರ ಚಿಕಿತ್ಸೆ ಪಡೆಯುವುದಲ್ಲದೇ, ರೋಗ ಬರುವ ಮುಂಚಿತವಾಗಿ ರೋಗ ಬಾರದಂತೆ ಮುನ್ನೆಚ್ಚರಿಕೆ ವಹಿಸಿಕೊಂಡು ಇಂತಹ ಶಿಬಿರಗಳಲ್ಲಿ ಭಾಗವಹಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ತುಂಬಾ ಅತ್ಯಗತ್ಯ ಹಾಗೂ ಈ ಶಿಬಿರದಲ್ಲಿ ಆಯುಷ್ಮಾನ್ (ಅಭಾ) ಕಾರ್ಡ್ ಮತ್ತು ಇಶ್ರಮ್ ಕಾರ್ಡ್ ಉಚಿತ ನೋಂದಾವಣಿಯನ್ನು ಮಾಡಲಾಗುತ್ತಿದ್ದು ಶಿಬಿರಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ” ತಿಳಿಸಿದರು.

ಸಿ.ಎಸ್.ಐ ಬೆಥಾನ್ಯ ಚರ್ಚ್ ಬೆಳ್ಮ ಕೊಣಾಜೆ ಇದರ ಸದಸ್ಯರು ಮತ್ತು ಶರೂನ್ ಸ್ಟçಕ್ಚರ್ ಕಟ್ಟಡದ ಮಾಲಿಕರಾದ ಶ್ರೀ ರೋನಾಲ್ಡ್ ಜೆ ಅಮ್ಮಣ್ಣ ರವರು ಮಾತನಾಡಿ “ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಬ್ಯಾಂಕಿAಗ್ ವ್ಯವಹಾರದ ಜೊತೆಗೆ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಜನಸಾಮಾನ್ಯರ ಆರೋಗ್ಯದ ಕಾಳಜಿ ವಹಿಸಿ ಎಲ್ಲಾ ಶಾಖೆಗಳಲ್ಲಿ ಉಚಿತ ಆರೋಗ್ಯ ಶಿಬಿರವನ್ನು ನಡೆಸುತ್ತಿರುವುದಕ್ಕೆ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರಿಗೆ ಕೃತಜ್ಞತೆಯನ್ನು ಸಲ್ಲಿಸಿದರು”. ಕೊಣಾಜೆ ಪಂಚಾಯತ್‌ನ ಮಾಜಿ ಅಧ್ಯಕ್ಷರಾದ ಶ್ರೀಮತಿ ಗೀತಾ ಕುಂದರ್ ರವರು ಮಾತನಾಡಿ “ಆತ್ಮಶಕ್ತಿ […]

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಅಡ್ಯಾರ್ ಶಾಖೆಯ ಚತುರ್ಥ ವಾರ್ಷಿಕೋತ್ಸವ ಹಾಗೂ ಗ್ರಾಹಕರ ಸಭೆಯು ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ರವರ ಅಧ್ಯಕ್ಷತೆಯಲ್ಲಿ ಅಡ್ಯಾರ್ ಶಾಖೆಯಲ್ಲಿ ಜರುಗಿತು. ಸಂಘದ ಗ್ರಾಹಕರುಗಳಾದ ಶ್ರೀ ಜಯಶೀಲ ಅಡ್ಯಂತಾಯ , ಶ್ರೀ ಉಮೇಶ್ ಶೆಟ್ಟಿ, ಹಾಗೂ ಶ್ರೀ ಹರೀಶ್ ಅಡ್ಯಾರ್ ರವರು ದೀಪ ಪ್ರಜ್ವಲನೆ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸದಸ್ಯರಾದ ಶ್ರೀ ಉಮೇಶ್ ಶೆಟ್ಟಿ ಯವರು ಮಾತನಾಡಿ “ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ರವರ ಮೇಲುಸ್ತುವಾರಿಯಲ್ಲಿ ಗ್ರಾಹಕರಿಗೆ ಉತ್ತಮ ರೀತಿಯಲ್ಲಿ ಸೇವೆಯನ್ನು ನೀಡುತ್ತಾ ಬರುತ್ತಿದೆ” ಎಂದರು.

ಸAಘದ ಸದಸ್ಯರಾದ ಶ್ರೀ ಜಯಶೀಲ ಅಡ್ಯಂತಾಯ ರವರು ಮಾತನಾಡಿ ” ಸಂಘವು ೩೫ ಶಾಖೆಗಳನ್ನು ಹೊಂದಿದ್ದು ಇನ್ನಷ್ಟೂ ಎತ್ತರಕ್ಕೆ ಬೆಳೆಯಲಿ ಹಾಗೂ ಇನ್ನು ಮುಂದಕ್ಕೆ ಹೆಚ್ಚಿನ ಶಾಖೆಗಳನ್ನು ಹೊಂದಲಿ” ಎಂದು ಶುಭ ಹಾರೈಸಿದರು. ಸದಸ್ಯರಾದ ಶ್ರೀ ಹರೀಶ್ ಅಡ್ಯಾರ್ ಅವರು ಮಾತನಾಡಿ “ಅಡ್ಯಾರು ಶಾಖೆಯು ಗ್ರಾಹಕರಿಗೆ ಉತ್ತಮ ಶಾಖೆಯಾಗಿದ್ದು, ಉತ್ತಮ ಸೇವೆಯನ್ನು ನೀಡುತ್ತಿದೆ” ಎಂದು ಶ್ಲಾಘಿಸಿದರು. ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ರವರು ಮಾತನಾಡಿ “ನಮ್ಮ ಸಂಸ್ಥೆ ಯಲ್ಲಿ ಹೆಚ್ಚಿನ […]

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಹಂಪನಕಟ್ಟೆ ಶಾಖೆಯ ದಶಮಾನೋತ್ಸವ ಹಾಗೂ ಗ್ರಾಹಕರ ಸಭೆಯು ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ರವರ ಅಧ್ಯಕ್ಷತೆಯಲ್ಲಿ ದ. ಕ. ಜಿಲ್ಲಾ ನಿವೃತ್ತ ಸರಕಾರಿ ನೌಕರರ ಸಂಘ (ರಿ.), ಎನ್.ಜಿ.ಓ ಕಟ್ಟಡ, ಹಂಪನಕಟ್ಟೆ, ಮಂಗಳೂರು ಇಲ್ಲಿ ಜರುಗಿತು. ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ (ರಿ.) ದ.ಕ ಜಿಲ್ಲೆಯ ಅಧ್ಯಕ್ಷರಾದ ಶ್ರೀ ನವೀನ್ ಕುಮಾರ್ ಎಮ್. ಎಸ್, ಸಂಘದ ಗ್ರಾಹಕರುಗಳಾದ ಶ್ರೀ ರಾಜಗೋಪಾಲ್ ಬಿ ಎಮ್, ಶ್ರೀಮತಿ ಚೂಡಮಣಿ, ಶ್ರೀ ಮೋಹನ್ ದಾಸ್ ಎಮ್, ಹಾಗೂ ಶ್ರೀಮತಿ ಬೋಳಾರ್ ರಮಣಿ ರವರುಗಳು ದೀಪ ಪ್ರಜ್ವಲನೆ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಸದಸ್ಯರಾದ ಶ್ರೀ ಮಾಧವ ಎಮ್ ಅಮೀನ್ ರವರು ಮಾತನಾಡಿ “ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಉತ್ತಮ ಬ್ಯಾಂಕಿAಗ್ ಸೇವೆಯೊಂದಿಗೆ ೧೪ ವರ್ಷಗಳಲ್ಲಿ ೩೫ ಶಾಖೆಗಳನ್ನು ತೆರೆದಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಶಾಖೆಗಳನ್ನು ತೆರೆದು ಸಾರ್ವಜನಿಕರಿಗೆ ಸೇವೆಯನ್ನು ನೀಡುವಂತಾಗಲಿ” ಎಂದು ಶುಭ ಹಾರೈಸಿದರು. ಸದಸ್ಯರಾದ ಶ್ರೀ ರಾಜಗೋಪಾಲ್ ಬಿ ಎಮ್ ಹಾಗೂ ಶ್ರೀ ರಾಮಚಂದ್ರ ರಾವ್ ರವರು ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ರವರು ಮಾತನಾಡಿ “ಗ್ರಾಹಕರ ಪ್ರೋತ್ಸಾಹದಿಂದ […]

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಕರಂಗಲ್ಪಾಡಿ ಶಾಖೆಯ ಹನ್ನೋಂದನೆಯ ವಾರ್ಷಿಕೋತ್ಸವದ ಪ್ರಯುಕ್ತ ಗ್ರಾಹಕರ ಸಭೆಯು ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ರವರ ಅಧ್ಯಕ್ಷತೆಯಲ್ಲಿ ಕರಂಗಲ್ಪಾಡಿ ಶಾಖೆಯಲ್ಲಿ ಜರುಗಿತು. ಕಾರ್ಯಕ್ರಮವನ್ನು ಸಂಘದ ಸದಸ್ಯರುಗಳಾದ ಶ್ರೀ ಪುಟ್ಟಸ್ವಾಮಿ ಹೆಚ್, ಶ್ರೀ ಬಿ. ಸತೀಶ್ ಶೆಟ್ಟಿ, ಶ್ರೀ ಮಾರಪ್ಪ ಪೂಜಾರಿ, ಶ್ರೀಮತಿ ಸುಮ ಪ್ರಸಾದ್ ಹಾಗೂ ಶ್ರೀಮತಿ ಶಾಲಿನಿ ರವರುಗಳು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದರು.

ಸಂಘದ ಸದಸ್ಯರಾದ ಶ್ರೀ ಮಾರಪ್ಪ ಪೂಜಾರಿ ಯವರು ಮಾತನಾಡಿ “ಸಂಘದ ಬೆಳವಣಿಗೆಯನ್ನು ಶ್ಲಾಘಿಸಿದರು ಹಾಗೂ ಆತ್ಮಶಕ್ತಿ ಸಹಕಾರಿ ಸಂಘವು ಬ್ಯಾಂಕಿAಗ್ ವ್ಯವಹಾರದ ಜೊತೆಗೆ ವಿವಿಧ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಇದರ ಮಾಹಿತಿಯನ್ನು ನಾನು ದಿನಂಪ್ರತಿ ಪ್ರತಿಕೆಗಳಲ್ಲಿ ಗಮನಿಸುತ್ತಿದ್ದೇನೆ. ಸಂಘವು ಇನ್ನಷ್ಟು ಸೇವಾ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಿ ಎಂದು ಶುಭ ಹಾರೈಸಿದರು. ಸಂಘದ ಸದಸ್ಯರಾದ ಶ್ರೀ ನಾಗೇಶ್ ಶೆಣೈ ರವರು ಮಾತನಾಡಿ, “ಸಂಘದ ಸಿಬ್ಬಂದಿಗಳು ನಗುಮೊಗದಿಂದ ಗ್ರಾಹಕರಿಗೆ ಗುಣಮಟ್ಟದ ಬ್ಯಾಂಕಿAಗ್ ಸೇವೆಯನ್ನು ನೀಡುತ್ತಿದ್ದಾರೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. […]

ಕೇರಳದ ಶಿವಗಿರಿಯ ಶ್ರೀ ನಾರಾಯಣ ಗುರು ಧರ್ಮ ಸಂಘ ಇದರ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, ೨೦೧೯ ರಲ್ಲಿ ರಾಷ್ಟçದ ಅತ್ಯುನ್ನತ ಪದ್ಮಶ್ರೀ ಪ್ರಶಸ್ತಿಯಿಂದ ಪುರಸ್ಕöÈತರಾದ ಪದ್ಮಶ್ರೀ ಪರಮಪೂಜ್ಯ ಶ್ರೀ ಶ್ರೀ ಶ್ರೀ ವಿಶುದ್ಧಾನಂದ ಸ್ವಾಮೀಜಿಯವರು ಕೇರಳದ ಅಲಪುö್ಪಝ ಜಿಲ್ಲೆಯ ಕಾಯಂಕುಳA ಮಠದ (ಶಿವಗಿರಿ ಮಠದ ಶಾಖೆ) ತಮ್ಮ ೪೮ಕ್ಕೂ ಮಿಕ್ಕಿ ಅನುಯಾಯಿಗಳೊಂದಿಗೆ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದ ಪ್ರಧಾನ ಕಛೇರಿ ಆತ್ಮಶಕ್ತಿ ಸೌಧ, ಪಡೀಲ್, ಮಂಗಳೂರು ಇಲ್ಲಿಗೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ರವರು ಸಂಘದ ವತಿಯಿಂದ ಪದ್ಮಶ್ರೀ ಪರಮಪೂಜ್ಯ ಶ್ರೀ ಶ್ರೀ ಶ್ರೀ ವಿಶುದ್ಧಾನಂದ ಸ್ವಾಮೀಜಿಯವರನ್ನು ಪೂಜ್ಯ ಭಾವದಿ ಯೋಗ್ಯ ಬಗೆಯಲ್ಲಿ ಸತ್ಕರಿಸಿ, ಗೌರವಿಸಿದರು. ಈ ಸಂದರ್ಭದಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದ ಉಪಾಧ್ಯಕ್ಷರಾದ ಶ್ರೀ ನೇಮಿರಾಜ್ ಪಿ, ಮುಖ್ಯಕಾರ್ಯನಿರ್ವಹಣಾಧಿಕಾರಿಯಾದ ಶ್ರೀಮತಿ ಸೌಮ್ಯ ವಿಜಯ್, ಸಹಾಯಕ ಪ್ರಬಂಧಕರಾದ ಶ್ರೀ ವಿಶ್ವನಾಥ, ಹಿರಿಯ ಶಾಖಾಧಿಕಾರಿಯಾದ ಶ್ರೀಮತಿ ಹರಿಣಾಕ್ಷಿ ಪ್ರಶಾಂತ್, ಶ್ರೀ ನಾರಾಯಣ ಗುರು ಧರ್ಮ […]

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಪಕ್ಷಿಕೆರೆ ಶಾಖೆಯ ದ್ವಿತೀಯ ವಾರ್ಷಿಕೋತ್ಸವದ ಪ್ರಯುಕ್ತ ಕೆ. ಎಂ. ಸಿ ಆಸ್ಪತ್ರೆ ಅತ್ತಾವರ ಮತ್ತು ಮಣಿಪಾಲ ಕಾಲೇಜ್ ಆಫ್ ಡೆಂಟಲ್ ಸಾಯನ್ಸಸ್, ಮಂಗಳೂರು ಇವರ ನುರಿತ ವೈದ್ಯರ ತಂಡದವರಿAದ ಉಚಿತ ಸಾಮಾನ್ಯ ವೈದ್ಯಕೀಯ, ನೇತ್ರ ತಪಾಸಣಾ ಮತ್ತು ದಂತ ಚಿಕಿತ್ಸಾ ಶಿಬಿರವು ಅಂಬೇಡ್ಕರ್ ಭವನ, ಕರ‍್ದಬ್ಬು ದೈವಸ್ಥಾನದ ಹತ್ತಿರ, ಪಕ್ಷಿಕೆರೆ ಇಲ್ಲಿ ಜರುಗಿತು. ಈ ಶಿಬಿರವನ್ನು ವಿನಾಯಕ ಮಿತ್ರ ಮಂಡಳಿ (ರಿ.) ಇದರ ಗೌರವಾಧ್ಯಕ್ಷರಾದ ಶ್ರೀ ಧನಂಜಯ ಶೆಟ್ಟಿಗಾರ್ ರವರು ಉದ್ಘಾಟಿಸಿ ಮಾತನಾಡಿ “ನಾವು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿರಬೇಕು. ನಾವು ಎರಡು ಸ್ಥಿತಿಯಲ್ಲಿ ಆರೋಗ್ಯವಾಗಿ ಇದ್ದರೆ ಸಮಾಜ ಆರೋಗ್ಯ ಪೂರ್ಣವಾಗಿರುತ್ತದೆ. ಇವೆಲ್ಲವನ್ನು ಗಮನದಲ್ಲಿ ಇಟ್ಟುಕೊಂಡು ಸಂಘ-ಸAಸ್ಥೆಗಳ ಜೊತೆ ಸೇರಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ವೈದ್ಯಕೀಯ ಶಿಬಿರಗಳನ್ನು ಆಯೋಜಿಸುತ್ತಾ ಬರುತ್ತಿದೆ. ಈ ಶಿಬಿರದ ಪ್ರಯೋಜನ ಊರಿಗೆ ಸಿಗಲಿ. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಇನ್ನಷ್ಟು ಬೆಳವಣಿಗೆಯನ್ನು ಕಾಣಲಿ” ಎಂದು ಶುಭ ಹಾರೈಸಿದರು.

ಕೆ.ಎಂ.ಸಿ. ಆಸ್ಪತ್ರೆ ಅತ್ತಾವರ ಮತ್ತು ಮಣಿಪಾಲ ಕಾಲೇಜ್ ಆಫ್ ಡೆಂಟಲ್ ಸಾಯನ್ಸಸ್, ಮಂಗಳೂರು ಇಲ್ಲಿನ ಸಮುದಾಯ ದಂತ ಆರೋಗ್ಯ ಶಿಬಿರದ ಮುಖ್ಯಸ್ಥೆಯಾದ ಡಾ| ರಮ್ಯ ಶೆಣೈ ರವರು ಮಾತನಾಡಿ, “ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘಕ್ಕೆ ಇಂತಹ ಶಿಬಿರಗಳನ್ನು ಆಯೋಜಿಸಿದ್ದಕ್ಕಾಗಿ ಕೆ.ಎಂ.ಸಿ. ಆಸ್ಪತ್ರೆಯ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿ, ಶಿಬಿರದಲ್ಲಿ ಲಭ್ಯವಿರುವ ಸೇವೆಗಳ ಬಗ್ಗೆ ಮಾಹಿತಿ ನೀಡಿದರು ಹಾಗೂ ಸೇವೆಗಳ ಪ್ರಯೋಜನವನ್ನು ಪಡೆದುಕೊಳ್ಳುವಂತೆ ವಿನಂತಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ […]