ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಘದ ಗ್ರಾಹಕರಾದ ಶ್ರೀ ರೋನಾಲ್ಡ್ ಡಿ’ಸೋಜರವರು “ಸಂಘದ ಸಿಬ್ಬಂದಿಗಳ ಶೀಘ್ರ ಹಾಗೂ ನಗು ಮೊಗದ ಸೇವೆ ಮತ್ತು ಆಡಳಿತ ಮಂಡಳಿಯವರ ಭಾವನಾತ್ಮಕ ಸೇವೆಯಿಂದ ಗ್ರಾಹಕರ ವ್ಯವಹಾರಕ್ಕೆ ಬಹಳ ಸಹಕಾರಿಯಾಗಿದೆ. ಈ ಸೇವೆ ಆತ್ಮಶಕ್ತಿ ಸಹಕಾರಿ ಸಂಘದಲ್ಲಿ ಸಿಗುತ್ತಿದೆ” ಎಂದರು.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಚಿತ್ತರಂಜನ್ ಬೋಳಾರ್ ರವರು ಮಾತನಾಡಿ ಸಂಘವು ಮಾಡಿರುವ ಸಾಧನೆ ಹಾಗೂ ಸಂಘವು ತಮ್ಮ ಗ್ರಾಹಕರಿಗೆ ನಿರಂತರವಾಗಿ ಆಯ್ದ ಸರಕಾರಿ ರಜಾ ದಿನಗಳಲ್ಲೂ ಇ-ಸ್ಟ್ಯಾಂಪ್ ಸೇವೆಯನ್ನು ನೀಡುತಿದ್ದು, ಸಂಘದ ಸದಸ್ಯರ ಅನುಕೂಲಕ್ಕಾಗಿ ವೇಗವಾಗಿ ಹಣ ವರ್ಗಾವಣೆ ಮಾಡುವ ಸೌಲಭ್ಯಗಳಾದ ಆರ್.ಟಿ.ಜಿ.ಎಸ್, ನೆಫ್ಟ್ ಸೇವೆಯನ್ನು ಸತತವಾಗಿ ನೀಡುತ್ತಾ ಬಂದಿದೆ. ಅಲ್ಲದೆ ಡಿಜಿಟಲ್ ಡಿ.ಡಿ , ಎಲ್‍ಐಸಿ, ರೆಲಿಗೇರ್ ಹೆಲ್ತ್ ಇನ್ಸುರೆನ್ಸ್, ಐಸಿಐಸಿಐ ಲಾಂಬರ್ಡ್ ಜನರಲ್ ಇನ್ಸುರೆನ್ ಕಂಪೆನಿಗಳ ವಿಮಾ ಸೌಲಭ್ಯಗಳು ಮುಂತಾದ ಗ್ರಾಹಕ ಸ್ನೇಹಿ ಸೇವೆಗಳನ್ನು ನೀಡುತ್ತಿದ್ದೇವೆ. ಈ ಸೇವೆಗಳ ಸದುಪಯೋಗವನ್ನು ಪಡೆದುಕೊಳ್ಳುವಂತೆ ಗ್ರಾಹಕರಲ್ಲಿ ವಿನಂತಿಸಿದರು.
ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕರಾದ ಶ್ರೀ ಆನಂದ ಎಸ್ ಕೊಂಡಾಣ, ಉಪಸ್ಥಿತರಿದ್ಧರು. ಸಂಘದ ಶಾಖಾಧಿಕಾರಿಯಾದ ಶ್ರೀಮತಿ ಯಶವಂತಿ ಕಾರ್ಯಕ್ರಮ ನಿರ್ವಹಿಸಿ, ಸಂಘದ ಸಿಬ್ಬಂದಿ ಶ್ರೀಮತಿ ಚಿತ್ರಾವತಿಯವರು ವಂದನಾರ್ಪಣೆ ಮಾಡಿದರು.
