ಬಳಿಕ ಮಾತನಾಡಿದ ಪೂಜಾರಿ, ಈಗ ನಾನು ಪಿಂಚಣಿ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇನೆ. ಆರ್ಥಿಕವಾಗಿ ನಾನು ಅಷ್ಟೊಂದು ಸಬಲನಲ್ಲ. ಆದ್ದರಿಂದ ನನ್ನ ಪುತ್ರ ಸಂತೋಷ್ ಪೂಜಾರಿ ಈ ಕಟ್ಟಡದ ಕೆಲಸಕ್ಕೆ 5 ಲಕ್ಷ ರು. ಧನಸಹಾಯ ಮಾಡಲಿದ್ದಾರೆ ಎಂದರು.
ನಾಮಫಲಕ ಬಿಡುಗಡೆಗೊಳಿಸಿದ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಆತ್ಮಶಕ್ತಿ ಸಹಕಾರ ಸಂಘ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮುಂದೆ ಸಾಗುತ್ತಿದೆ. ಸಂಘವು 100 ಶಾಖೆಗಳನ್ನು ಹೊಂದುವ ಮೂಲಕ ಮೇಲ್ದರ್ಜೆಗೆ ಏರಲಿ ಎಂದು ಆಶಿಸಿದರು. ಶಾಸಕ ಡಿ. ವೇದವ್ಯಾಸ ಕಾಮತ್ ಮಾತನಾಡಿ, ದ.ಕ ಜಿಲ್ಲೆ ಈಗಾಗಲೇ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದೆ. ಆತ್ಮಶಕ್ತಿ ಸಹಕಾರಿ ಸಂಘವಂತೂ ವಿಶಿಷ್ಟವಾಗಿ ಕೆಲಸ ಮಾಡುತ್ತಿದೆ ಎಂದರು.
ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ, ಸ್ಥಳೀಯ ಕಾರ್ಪೊರೇಟರ್ ರೂಪಶ್ರೀ ಪೂಜಾರಿ, ಬ್ರಹ್ಮಬೈದರ್ಕಳ ಗರಡಿ ಕ್ಷೇತ್ರ ಕಂಕನಾಡಿಯ ಅಧ್ಯಕ್ಷ ಚಿತ್ತರಂಜನ್ ಕೆ., ದ.ಕ.ಸಹಕಾರ ಸಂಘಗಳ ಉಪನಿಬಂಧಕ ಪ್ರವೀಣ್ ನಾಯಕ್, ವಾಸ್ತುಶಿಲ್ಪಿ ರಾಜ್‌ಕುಮಾರ್, ಕಟ್ಟಡದ ಎಂಜಿನಿಯರ್ ವಿನಯಕುಮಾರ್ ಬಗಂಬಿಲ, ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸೌಮ್ಯ ವಿಜಯ್, ಆಡಳಿತ ಮಂಡಳಿಯ ನಿರ್ದೇಶಕ ವಾಮನ್ ಕೆ. ಮತ್ತಿತರರು ಇದ್ದರು. ಆತ್ಮಶಕ್ತಿ ವಿ.ಸ. ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಅಧ್ಯಕ್ಷತೆ ವಹಿಸಿದ್ದರು.