ಭಾರತೀಯ ರಿಸವ್ ಬ್ಯಾಂಕ್‍ನ ನಿರ್ದೇಶಕರಾದ ಶ್ರೀ ಸತೀಶ್ ಮರಾಠೆ ಇವರು ಸಹಕಾರ ರಂಗದಲ್ಲಿ ಉತ್ತಮ ಸಾಧನೆ ಮಾಡುತ್ತಿರುವ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಪ್ರಧಾನ ಕಛೇರಿಗೆ ಬೇಟಿ ನೀಡಿದರು.

ಈ ಸಂದರ್ಭದಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹಣಕಾಸು ವಿನಿಯೋಗ ಮತ್ತು ಸಾಲ ನೀಡುವ ವಿಧಾನದ ಬಗ್ಗೆ ಸಂಘದ ಸಿಬ್ಬಂದಿಗಳಿಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ Campco ಅಧ್ಯಕ್ಷ ಶ್ರೀ ಎಸ್. ಆರ್. ಸತೀಶ್ಚಂದ್ರ,ದ.ಕ. ಜಿಲ್ಲಾ ಮಹಿಳಾ ಬ್ಯಾಂಕ್‍ನ ಅಧ್ಯಕ್ಷೆ ಶ್ರೀಮತಿ ಭಾರತಿ ಭಟ್, ಸಂಘದ ಅಧ್ಯಕ್ಷರಾದ ಶ್ರೀ ಚಿತ್ತರಂಜನ್ ಬೋಳಾರ್, ಉಪಾಧ್ಯಕ್ಷರಾದ ಶ್ರೀ ನೇಮಿರಾಜ್ ಪಿ., ನಿರ್ದೇಶಕರುಗಳಾದ ಶ್ರಿ ವಾಮನ್ ಪಿ., ಶ್ರೀ ಸೀತಾರಾಮ್ ಎನ್., ಶ್ರೀ ಚಂದ್ರಹಾಸ ಮರೋಳಿ, ಶ್ರೀ ಸುರೇಶ್ ವಿ ಪೂಜಾರಿ ಹಾಗೂ ಮುಖ್ಯ […]

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಬೆಂದೂರ್ ವೆಲ್, ಮಂಗಳೂರು ಇದರ 8ನೇ ವಾರ್ಷಿಕೋತ್ಸವ ಹಾಗೂ ಗ್ರಾಹಕರ ಸಭೆಯು ಸಂಘದ ಅಧ್ಯಕ್ಷರಾದ ಶ್ರೀ ಚಿತ್ತರಂಜನ್ ಬೋಳಾರ್ ರವರ ಅಧ್ಯಕ್ಷತೆಯಲ್ಲಿ ನಗರದ ಹಂಪನಕಟ್ಟೆಯ NGO ಬಿಲ್ಡಿಂಗ್‍ನ ನಂದಿನಿ ಸಭಾಭವನದಲ್ಲಿ ಜರಗಿತು. ಕಾರ್ಯಕ್ರಮವನ್ನು ಸಂಘದ ಸದಸ್ಯರುಗಳಾದ ,ಶ್ರೀ ಕೃತೀಶ್ ಕುಮಾರ್, ಶ್ರೀ ಮಹಾಬಲ ಪೂಜಾರಿ, ಶ್ರೀ ಸೋಮಶೇಖರ ದೇರೆಬೈಲ್, ಶ್ರೀ ಎಸ್.ಎಸ್ ಪೂಜಾರಿ, ಶ್ರೀ ಸಾಧು ಪೂಜಾರಿ, ಶ್ರೀ ರಂಜನ್ ಕುಮಾರ್ ಹಾಗೂ ಶ್ರೀ ಜಾರ್ಜ್ ರೋಡ್ರಿಗಸ್ ಇವರುಗಳು ದ್ವೀಪ ಪ್ರಜ್ವಲನೆ ಮಾಡುವುದರ ಮೂಲಕ ಚಾಲನೆ ನೀಡಿದರು.

ಸಂಘದ ಸದಸ್ಯರಾದ ಶ್ರೀ ಪ್ರದೀಪ್ ಕುಮಾರ್ ಸುವರ್ಣ ಇವರು ಮಾತನಾಡಿ ಸಂಘವು ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತಿದ್ದು, ಅತೀ ಕಡಿಮೆ ಅವಧಿಯಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸುವುದರ ಜೊತೆಗೆ ಪಡೀಲಿನಲ್ಲಿ ಸಂಘದ ಸ್ವಂತ ಕಟ್ಟಡ ನಿರ್ಮಾಣ ಮಾಡಲು ಶಿಲಾನ್ಯಾಸ ನೆರವೇರಿಸಿರುವುದನ್ನು ಪ್ರಶಂಶಿಸಿದರು. ಸಂಘದ ಇನ್ನೋರ್ವ ಸದಸ್ಯರಾದ ಶ್ರೀ ಅಶೋಕ್ ಕುಮಾರ್ ಮಾತನಾಡಿ ಸಂಘದ ಸರ್ವತೋಮುಖ ಪ್ರಗತಿಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ಸಂಘದ ಹಿರಿಮೆಯನ್ನು ಇನ್ನಷ್ಟು ಹೆಚ್ಚಿಸಿದೆ ಎಂದರು. ಸಂಘವು ಇನ್ನೂ ಹೆಚ್ಚು ವ್ಯವಹಾರವನ್ನು ವಿಸ್ತಾರ ಮಾಡಿ […]

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಮಂಗಳೂರು ಇದರ ಬೆಂದೂರ್ ವೆಲ್ ಶಾಖೆ ಹಾಗೂ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ (ರಿ) ಜಪ್ಪಿನಮೊಗರು ಇವರ ಜಂಟಿ ಸಹಯೋಗದೊಂದಿಗೆ ಮಾತಾ ಅಮೃತಾನಂದಮಯಿ ಮಠ, ಬೋಳೂರು, ಸಮುದಾಯ ದಂತ ವಿಭಾಗ ಯೆನೆಪೆಯ ದಂತ ಕಾಲೇಜು ಮತ್ತು ಆಸ್ಪತ್ರೆ, ದೇರಳಕಟ್ಟೆ ಹಾಗೂ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಉಜ್ಜೋಡಿ ಮಂಗಳೂರು ಇಲ್ಲಿಯ ನುರಿತ ವೈದ್ಯರ ತಂಡದವರಿಂದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ, ಉಚಿತ ದಂತ ಚಿಕಿತ್ಸಾ ಶಿಬಿರ, ಉಚಿತ ಕಣ್ಣಿನ ತಪಾಸಣೆ, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ವಿತರಣೆ ಹಾಗೂ ಕನ್ನಡಕ ವಿತರಣಾ ಕಾರ್ಯಕ್ರಮವು ಬ್ರಹ್ಮಶ್ರೀನಾರಾಯಣಗುರು ಸೇವಾ ಸಂಘ(ರಿ.) ಜಪ್ಪಿನಮೊಗರು, ಇದರ ಅಧ್ಯಕ್ಷರಾದ ಶ್ರೀ ಜೆ. ದಿನೇಶ್ ಅಂಚನ್ ಇವರ ಅಧ್ಯಕ್ಷತೆಯಲ್ಲಿ ಜಪ್ಪಿನಮೊಗರು ಬ್ರಹ್ಮಶ್ರೀ ನಾರಾಯಣಗುರು ಮಂದಿರದಲ್ಲಿ ಜರುಗಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತಾನಾಡಿದ ಮಾತಾ ಅಮೃತಾನಂದಮಯಿ ಮಠದ ವ್ಯೆದ್ಯರ ತಂಡದ ಡಾ! ದೇವದಾಸ್, ಮಾತಾ ಅಮೃತಾನಂದಮಯಿ ಮಠವು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಸಹಯೋಗದೊಂದಿಗೆ ವ್ಯೆದ್ಯಕೀಯ ಶಿಬಿರವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ, ಜೊತೆಗೆ ಹಲವಾರು ಅಶಕ್ತ ರೋಗಿಗಳಿಗೆ ಶಸ್ತ್ರಚಿಕೆತ್ಸೆಯನ್ನು ಮಾಡಿಸುತ್ತಾ ಬಂದಿದೆ. ಇಂತಹ ಶಿಬಿರಗಳಿಂದ ಆರ್ಥಿಕವಾಗಿ ಹಿಂದುಳಿದವರಿಗೆ ತುಂಬಾ ಪ್ರಯೋಜನವಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬ್ರಹ್ಮಶ್ರೀನಾರಾಯಣಗುರು ಸೇವಾ ಸಂಘ(ರಿ.) ಜಪ್ಪಿನಮೊಗರು, ಇದರ ಅಧ್ಯಕ್ಷರಾದ ಶ್ರೀ ಜೆ. ದಿನೇಶ್ ಅಂಚನ್ ಇವರು ಮಾತನಾಡಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ […]