ಅತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಪಂಜಿಮೊಗರು ಶಾಖೆ ,ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ (ರಿ). ಕಾವೂರು, ಯುವವಾಹಿನಿ(ರಿ) ಕೂಳೂರು ಘಟಕ ಹಾಗೂ ಶ್ರೀ ಕೃಷ್ಣ ಭಜನಾ ಮಂದಿರ ಹಾಗೂ ಶ್ರೀ ಶಾರದೋತ್ಸವ ಸೇವಾ ಟ್ರಸ್ಟ್ ವಿದ್ಯಾನಗರ ಇವರ ಜಂಟಿ ಸಹಯೋಗದೊಂದಿಗೆ ಎ ಜೆ ಇನ್ಸ್ಟಿಟ್ಯೂಟ್ of ಮೆಡಿಕಲ್ ಸಾಯನ್ಸ್ & ರಿಸರ್ಚ್ ಸೆಂಟ್‍ರ್ ಮಂಗಳೂರು ಸಮುದಾಯ ದಂತ ವಿಭಾಗ ಯೆನೆಪೆಯ ದಂತ ಕಾಲೇಜು ಮತ್ತು ಆಸ್ಪತ್ರೆ, ದೇರಳಕಟ್ಟೆ ಹಾಗೂ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಉಜ್ಜೋಡಿ ಮಂಗಳೂರು ಇಲ್ಲಿಯ ನುರಿತ ವೈದ್ಯರ ತಂಡದವರಿಂದ ಉಚಿತ ವೈದ್ಯಕೀಯ, ದಂತ ಚಿಕಿತ್ಸಾ ಶಿಬಿರ ಮತ್ತು ಉಚಿತ ಕಣ್ಣಿನ ತಪಾಸಣೆ ಹಾಗೂ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ವಿತರಣೆ ಕಾರ್ಯಕ್ರಮವು ದಿನಾಂಕ 23.02.2020ರಂದು ಶ್ರೀ ಕೃಷ್ಣ ಭಜನಾ ಮಂದಿರದ ಅಂಗಣ ವಿದ್ಯಾನಗರ ಪಂಜಿಮೊಗರು ಇಲ್ಲಿ ನಡೆಯಿತು.


ಈ ಕಾರ್ಯಕ್ರಮವನ್ನು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ|| ವೈ ಭರತ್ ಶೆಟ್ಟಿ ಉದ್ಘಾಟಿಸಿದರು. ಅತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಮತ್ತು ಸ್ಥಳೀಯ ಸಂಘ ಸಂಸ್ಥೆಗಳು ತಮ್ಮ ದಿನ ನಿತ್ಯದ ಕಾರ್ಯಗಳನ್ನು ಬದಿಗಿರಿಸಿ ಆರೋಗ್ಯ ಶಿಬಿರಗಳನ್ನು ನಡೆಸುತ್ತಿರುವುದು ಶ್ಲಾಘನೀಯ. ಈ ರೀತಿಯ ಶಿಬಿರಗಳಿಂದ ಸ್ಥಳೀಯರಿಗೆ ಆರೋಗ್ಯದ ಮಾಹಿತಿಯೊಂದಿಗೆ ಸರ್ಕಾರದ ಜನಪರ ಯೋಜನೆಗಳ ಬಗ್ಗೆ ಮಾಹಿತಿ ದೊರೆಯುತ್ತಿರುವುದು ಉತ್ತಮ ಕಾರ್ಯವೆಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಯೆನೆಪಯ ದಂತ ಕಾಲೇಜು ಮತ್ತು ಆಸ್ಪತ್ರೆ, ದೇರಳಕಟ್ಟೆ ಇಲ್ಲಿನ ವೈದ್ಯರಾದ ಡಾ|| ಇಮ್ರಾನ್ ಪಾಶ ಮಾತನಾಡಿ ಮಂಗಳೂರು ನಗರದಲ್ಲಿ ಹಲವಾರು ಆಸ್ಪತ್ರೆಗಳಿದ್ದರೂ ಉಚಿತ ಶಿಬಿರದ ಮೂಲಕ ಜನರಿಗೆ ತಮ್ಮ ಮನೆಬಾಗಿಲಿಗೆ ವೈದ್ಯಕೀಯ ಸೌಲಭ್ಯ ಸಿಗುತ್ತಿರುವುದನ್ನು ಸರಿಯಾದ ರೀತಿಯಲ್ಲಿ ಸದುಪಯೋಗ ಪಡೆದುಕೊಳ್ಳಬೇಕೆಂದರು. ಸ್ಥಳೀಯ ಮ.ನ.ಪಾ ಸದಸ್ಯರಾದ ಶ್ರೀ ಅನಿಲ್‍ಕುಮಾರ್ ಸಮಯದ ಒತ್ತಡದಿಂದಾಗಿ ಜನರು ತಮ್ಮ ಅರೋಗ್ಯದ ಸಣ್ಣಪುಟ್ಟ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಾರೆ,ಇಂತಹ ಶಿಬಿರಗಳು ಅಂತಹ ಸಣ್ಣಪುಟ್ಟ ಸಮಸೆಗಳನ್ನು ಕಂಡುಹುಡುಕಲು ಸಹಾಯವಾಗುತ್ತದೆ ಎಂದರು. ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಉಜ್ಜೋಡಿ ಮಂಗಳೂರು ಇಲ್ಲಿನ ವೈದ್ಯರಾದ ಡಾ ಸುಧಾರಾಣಿ ದ್ಕೃಷ್ಟಿಹೀನತೆಯ ಕಾರಣಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಚಿತ್ತರಂಜನ್ ಬೋಳಾರ್ ಇವರು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಕಳೆದ 7 ವರ್ಷದಿಂದ ಇಂತಹ ಶಿಬಿರವನ್ನು ಏರ್ಪಡಿಸುತ್ತಿದ್ದು, ವೈದ್ಯಕೀಯ ತಪಾಸಣೆಯು ಕೇವಲ ಶಿಬಿರಗಳಿಗೆ ಸೀಮಿತವಾಗಬಾರದು, ಶಿಬಿರದಲ್ಲಿ ವೈದ್ಯರು ನೀಡಿದ ಸಲಹೆಗಳನ್ನು ಪಡೆದು ,ತಮ್ಮ ಆರೋಗ್ಯ ಸಮಸ್ಯೆಗಳನ್ನು ಪ್ರಾರಂಭದಲ್ಲೇ ತಿಳಿದು ಅದಕ್ಕೆ ತಕ್ಕ ಪರಿಹಾರ ಕಂಡುಕೊಳ್ಳಬೇಕೆಂದು ನಮ್ಮ ಆಶಯ.ಈ ಉದ್ದೇಶದಿಂದ ನಾವು ಇಂತಹ ಉಚಿತ ಆರೋಗ್ಯ ಶಿಬಿರಗಳನ್ನು ನಡೆಸುತ್ತಾ ಬಂದಿದ್ದೇವೆ.

ಈ ಕಾರ್ಯಕ್ರಮದಲ್ಲಿಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷರಾದ ಶ್ರೀನೇಮಿರಾಜ್ ಪಿ , ಯುವವಾಹಿನಿ(ರಿ) ಕೂಳೂರು ಘಟಕ ಇದರ ಅಧ್ಯಕ್ಷರಾದ ಭಾಸ್ಕರ್ ಕೋಟ್ಯಾನ್,ಶ್ರೀ ಕೃಷ್ಣ ಭಜನಾ ಮಂದಿರ ವಿದ್ಯಾನಗರ ಅಧ್ಯಕ್ಷ ರಾದವಾಮನ್ ಪೂಜಾರಿ, ಶ್ರೀ ಶಾರದೋತ್ಸವ ಸೇವಾ ಟ್ರಸ್ಟ್ ವಿದ್ಯಾನಗರದ ಅಧ್ಯಕ್ಷರಾದ ಉಮೇಶ್ ಪೂಜಾರಿ , ಎ ಜೆ ಇನ್ಸ್ಟಿಟ್ಯೂಟ್ of ಮೆಡಿಕಲ್ ಸಾಯನ್ಸ್ & ರಿಸರ್ಚ್ ಸೆಂಟ್‍ರ್‍ನ ವೈದ್ಯರಾದ ಡಾ||ಪ್ರಶಾಂತ್, ಡಾ|| ವಿನ್ಮಾ ಶೆಟ್ಟಿ, ಡಾ|| ನಿಶಿತಾ ಅತಿಥಿಗಳಾಗಿ ಭಾಗವಹಿಸಿದ್ದರು.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕರುಗಳಾದ ಶ್ರೀ ವಾಮನ್ ಕೆ. ಶ್ರೀ ಆನಂದ ಎಸ್ ಕೊಂಡಾಣ, ಶ್ರೀ ಸುರೇಶ್ ವಿ. ಪೂಜಾರಿ, ಶ್ರೀ ಸೀತಾರಾಮ ಎನ್., ಶ್ರೀ ಚಂದ್ರಹಾಸ್ ಮರೋಳಿ, ಶ್ರೀ ರಮಾನಾಥ ಸನಿಲ್, ಶ್ರೀಮತಿ ಕುಶಾಲಾಕ್ಷಿ, ಶ್ರೀಮತಿ ಸುಜಯ ಹೇಮಚಂದ್ರ ಹಾಗೂ ಸಲಹಾ ಸಮಿತಿ ಸದಸ್ಯರಾದ ಶ್ರೀ ಗಣೇಶ್ ಸನಿಲ್, ಶ್ರೀಮತಿ ಪ್ರಮೀಳ, ಶ್ರೀ ಗೋಪಾಲ್ ಎಮ್.ಹಾಗೂ ಕಾವೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನಿ. ಕಾವೂರು ಇದರ ಅಧ್ಯಕ್ಷರಾದ ಶ್ರೀಯುತ ಕೆ. ಹರೀಶ್ಚಂದ್ರ ,ಉದ್ಯಮಿ ದೋಟ ಹರೀಶ್ ಶೆಟ್ಟಿ, ಬಿಲ್ಲವ ಸಂಘದ ಪದಾಧಿಕಾರಿಗಳು, ಯುವವಾಹಿನಿ(ರಿ) ಕೂಳೂರು ಘಟಕ, ಶ್ರೀ ಕೃಷ್ಣ ಭಜನಾ ಮಂದಿರ ಹಾಗೂ ಶ್ರೀ ಶಾರದೋತ್ಸವ ಸೇವಾ ಟ್ರಸ್ಟ್ ವಿದ್ಯಾನಗರದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸುಮಾರು 400ಕ್ಕೂ ಮಿಕ್ಕಿ ಶಿಬಿರಾರ್ಥಿಗಳಿಗೆ ರೋಗ ತಪಾಸಣೆ ಹಾಗೂ ದಂತ ಚಿಕಿತ್ಸೆ, ಉಚಿತ ಔಷಧಿ ವಿತರಣೆ , ಕಣ್ಣಿನ ತಪಾಸಣೆಯಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಿಗೆ ಉಚಿತ ಕನ್ನಡಕ ವಿತರಣೆ , ಹಾಗೂ ಸುಮಾರು 200ಕ್ಕೂ ಮಿಕ್ಕಿ ಶಿಬಿರಾರ್ಥಿಗಳು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್‍ನ್ನು ಉಚಿತವಾಗಿ ನೀಡಲಾಯಿತು. ಕಾವೂರು ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಶ್ರೀ ಚಂದ್ರಶೇಖರ್ ಸ್ವಾಗತಿಸಿದರು. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಪಂಜಿಮೊಗರು ಶಾಖೆಯ ಶಾಖಾಧಿಕಾರಿ ಶ್ರೀಮತಿ ಸುಜಾತ ಕಾರ್ಯಕ್ರಮ ನಿರೂಪಿಸಿದರು, ಸಂಘದ ಮುಖ್ಯಕಾರ್ಯನಿರ್ವಾಹಣಾಧಿಕಾರಿ(ಪ್ರ) ವಿಶ್ವನಾಥ್ ವಂದಿಸಿದರು.