ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಉಳ್ಳಾಲ ಮಂಗಳೂರು, ಬಹ್ಮಶ್ರೀ ನಾರಾಯಣಗುರು ಬಿಲ್ಲವ ಸೇವಾ ಸಂಘ (ರಿ.) ಮತ್ತು ಮಹಿಳಾ ಘಟಕ, ಬಂಡಿಕೊಟ್ಯ, ಉಳ್ಳಾಲ ಹಾಗೂ ವಿದ್ಯಾರಣ್ಯ ಯುವಕ ವೃಂದ (ರಿ) ವಿದ್ಯಾರಣ್ಯ ಕಲಾವೃಂದ, ಉಳ್ಳಾಲ ಇವರ ಜಂಟಿ ಸಹಯೋಗದೊಂದಿಗೆ ಮಾತಾ ಅಮೃತಾನಂದಮಯಿ ಮಠ, ಬೋಳೂರು , ಸಮುದಾಯ ದಂತ ವಿಭಾಗ ಯೆನೆಪೆಯ ದಂತ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆ ಹಾಗೂ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಉಜ್ಜೋಡಿ ಮಂಗಳೂರು ಇಲ್ಲಿಯ ನುರಿತ ವೈದ್ಯರ ತಂಡದವರಿಂದ ಉಚಿತ ವೈದ್ಯಕೀಯ ತಪಾಸಣೆ, ಉಚಿತ ದಂತ ಚಿಕಿತ್ಸೆ,ಮತ್ತು ಉಚಿತ ಕಣ್ಣಿನ ತಪಾಸಣೆ, ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಕಾರ್ಡ್ ವಿತರಣೆ ಶಿಬಿರವು ಉಳ್ಳಾಲ ನಗರಸಭೆಯ ಸಮುದಾಯ ಭವನದಲ್ಲಿ ನಡೆಯಿತು.

ಮಲರಾಯ ದೈವಸ್ಥಾನದ ಅರ್ಚಕರಾದ ಶ್ರೀಯುತ ಮುಂಡ ಯಾನೆ ಲತೀಶ್ ಪೂಜಾರಿ ಹಾಗೂ ಶ್ರೀ ಚೀರುಂಭ ಭಗವತಿ ಕ್ಷೇತ್ರದ ಅರ್ಚಕರಾದ ಶ್ರೀಯುತ ಕಂಡಪ್ಪ ಕಾನ್ವವರ್ ಶಿಬಿರವನ್ನು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಇದರ ಸದುಪಯೋಗವನ್ನು ಹೆಚ್ಚಿನ ಜನರು ಪಡೆದು ಆರೋಗ್ಯ ಪೂರ್ಣ ಜೀವನ ನಡೆಸುವಂತಗಲಿ ಎಂದರು.
ಅಧ್ಯಕ್ಷತೆ ವಹಿಸಿದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಚಿತ್ತರಂಜನ್ ಬೋಳಾರ್ ಇವರು ಸಂಘದ ಬೆಳವಣಿಗೆಯ ಬಗ್ಗೆ ಮಾತನಾಡಿ ನಮ್ಮ ಸಹಕಾರಿ ಸಂಘವು ನಿರಂತರವಾಗಿ ಪ್ರತಿಯೊಂದು ಶಾಖೆಯಲ್ಲಿ ಉಚಿತ ವೈದ್ಯಕೀಯ ಶಿಬಿರವನ್ನು ನಡೆಸಿಕೊಂಡು ಬರುತ್ತಿದ್ದು ಈ ಶಿಬಿರವು 32 ನೇ ಆರೋಗ್ಯ ಶಿಬಿರವಾಗಿದ್ದು ಈ ವರೆಗೆ ಒಟ್ಟು 6536 ಸದಸ್ಯರ ಆರೋಗ್ಯ ತಪಾಸಣೆ ನಡೆಸಿ ಇವರಲ್ಲಿ 2770 ಮಂದಿಗೆ ಉಚಿತ ಕನ್ನಡಕ ವಿತರಣೆಯನ್ನು ಮಾಡಿರುವುದಲ್ಲದೇ 298 ಜನರ ಕಣ್ಣಿನ ಶಸ್ತ್ರ ಚಿಕಿತ್ಸೆಯನ್ನು ಉಚಿತವಾಗಿ ಮಾಡಿಸಲಾಗಿದೆ ಹಾಗೂ 700 ಕ್ಕೂ ಅಧಿಕ ಮಂದಿಗೆ ಉಚಿತ ಆರೋಗ್ಯ ಕಾರ್ಡ್ ವಿತರಿಸಿರುವುದರಿಂದ ಸದಸ್ಯರಿಗೆ ಹಾಗೂ ಸಾರ್ವಜನಿಕರಿಗೆ ಹೆಚ್ಚಿನ ಪ್ರಯೋಜನ ದೊರಕಿದೆ. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಸ್ಥಳೀಯ ಸಹಕಾರ ಸಂಸ್ಥೆಗಳ ಸಹಯೋಗದೊಂದಿಗೆ ಉಚಿತ ವೈದ್ಯಕೀಯ ಶಿಬಿರವನ್ನು ನಡೆಸಿಕೊಂಡು ಬಂದಿದ್ದು ಪರಿಸರದ ಬಡ ಜನರ ಆರೋಗ್ಯದ ಬಗ್ಗೆ ನಾವು ಕಾಳಜಿ ವಹಿಸಿ ಎಲ್ಲರ ಮೆಚ್ಚುಗೆಗೆ ಪ್ರಾತ್ರರಾಗಿದ್ದೇವೆ ಎಂದರು. ಈ ಸಂಧರ್ಭದಲ್ಲಿ ಕನ್ನಡಕ ವಿತರಣೆಗೆ ಸಹಾಯ ಹಸ್ತ ನೀಡಿ ನಿರಂತರವಾಗಿ ಕನ್ನಡಕದ ಖರ್ಚನ್ನು ವಹಿಸಿದ ಅವಿನಾಶ್ ಗ್ಯಾಸ್ ಏಜೆನ್ಸಿಯ ಮಾಲಕರಾದ ಶ್ರೀ ಬಿ.ಡಿ.ಗೋಪಾಲ್ ಇವರಿಗೆ ಕೃತಜ್ನತೆ ಸಲ್ಲಿಸಲಾಯಿತು ಹಾಗೂ ಶಿಬಿರಾರ್ಥಿಗಳಿಗೆ ಆಯುಷ್ಮಾನ್ ಕಾರ್ಡ್ ವಿತರಿಸಲಾಯಿತು.
ನಾರಾಯಣಗುರು ಬಿಲ್ಲವ ಸೇವಾ ಸಂಘ (ರಿ.) ಉಪಾಧ್ಯಕ್ಷರಾದ ಶ್ರೀ ಉದಯ್ ಕುಮಾರ್ ಆರ್. ಕೆ. , ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಹರಿಣಾಕ್ಷಿ ಎಮ್., ವಿದ್ಯಾರಣ್ಯ ಯುವಕ ವೃಂದ (ರಿ.) ವಿದ್ಯಾರಣ್ಯ ಕಲಾವೃಂದ ಅಧ್ಯಕ್ಷರಾದ ಶ್ರೀ ಚೂಡಪ್ಪ ಉಳ್ಳಾಲ್ ಮಾತಾ ಅಮೃತಾನಂದಮಯಿ ಮಠ ಬೋಳೂರು ಇಲ್ಲಿಯ ವೈದ್ಯರಾದ ಡಾ|| ದೇವದಾಸ್,ಡಾ|| ಸುಚಿತ್ರ ,ಡಾ|| ಅಶೋಕ ಶೆಣೈ, ಸಮುದಾಯ ದಂತ ವಿಭಾಗ ಯೆನೆಪೆಯ ದಂತ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆ ಇಲ್ಲಿಯ ವೈದ್ಯರಾದ ಡಾ|| ಆಶಿಫ ಹಾಗೂ ಪಿ.ಆರ್.ಒ. ಶ್ರೀ ಭರತ್, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತೆ ವೈದ್ಯರಾದ ಡಾ|| ಶ್ರೀತೇಜ , ಬಿಲ್ಲವ ಸೇವಾ ಸಮಾಜ ಸಂಘ (ರಿ.) ಕೊಲ್ಯ ಇದರ ಉಪಾಧ್ಯಕ್ಷರಾದ ಶ್ರೀ ಪುರುಷೋತ್ತಮ ಕೆ ಅತಿಥಿಗಳಾಗಿ ಭಾಗವಹಿಸಿದರು.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕರುಗಳಾದ ಶ್ರೀ ವಾಮನ್ ಕೆ. , ಶ್ರೀ ಆನಂದ್ ಎಸ್. ಕೊಂಡಾಣ, ಶ್ರೀ ಸೀತಾರಾಮ್ ಎನ್. , ಶ್ರೀ ಸುರೇಶ್ ವಿ. ಪೂಜಾರಿ , ಶ್ರೀ ಚಂದ್ರಹಾಸ್ ಮರೋಳಿ , ಮುಖ್ಯಕಾರ್ಯನಿರ್ವಹಣಾಧಿಕಾರಿ(ಪ್ರ) ಶ್ರೀ ವಿಶ್ವನಾಥ್, ಸಿಬ್ಬಂದಿ ವರ್ಗ, ಸಲಹಾ ಸಮಿತಿ ಸದಸ್ಯರು sಹಾಗೂ ಎಲ್ಲಾ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷರಾದ ಶ್ರೀ ನೇಮಿರಾಜ್ ಪಿ. ಇವರು ಶಿಬಿರದ ಬಗ್ಗೆ ಮಾಹಿತಿ ನೀಡಿದರು, ಮಾಡೂರು ಶಾಖೆಯ ಶಾಖಾಧಿಕಾರಿ ಶ್ರೀಮತಿ ಸೌಮ್ಯಲತಾ ಸ್ವಾಗತಿಸಿದರು. ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘದ ಉಪಾಧ್ಯಕ್ಷರಾದ ಶ್ರೀ ಉದಯ್ ಕುಮಾರ್ ಆರ್. ಕೆ ಇವರು ವಂದಿಸಿದರು. ಉಳ್ಳಾಲ ಶಾಖೆಯ ಶಾಖಾಧಿಕಾರಿ ಶ್ರೀಮತಿ ಹರಿಣಾಕ್ಷಿ ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿದರು.