ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಘದ ಸದಸ್ಯರಾದ ಶ್ರೀಯುತ ಅಬ್ಬಾಸ್ ಎಮ್ ಇವರು ಈ ಸಂಘವು ಮಹಾಮಾರಿ ಕೋವಿಡ್-19 ನ ಸಮಯದಲ್ಲಿ ಕೇವಲ 4% ಬಡ್ಡಿದರದಲ್ಲಿ ಕೋವಿಡ್-19 ವಿಶೇಷ ಚಿನ್ನಾಭರಣ ಸಾಲ ನೀಡಿದ್ಡು, ಇದರಿಂದ ಹೆಚ್ಚಿನ ಗ್ರಾಹಕರಿಗೆ ಸಹಾಯವಾಗಿದ್ದು ಇನ್ನು ಮುಂದೆಯು ಇಂತಹ ಸಾಲ ಸೌಲಭ್ಯಗಳನ್ನು ನೀಡಲಿ ಎಂದು ಹಾರೈಸಿದರು. ಪಂಚಾಯತ್ ಪಿ.ಡಿ.ಒ ಶ್ರೀ ಮಂಜಪ್ಪ ಇವರು ನಾಟೆಕಲ್ ಪ್ರದೇಶದಲ್ಲಿ ಜನರಿಗೆ ಬ್ಯಾಂಕಿಂಗ್ ಸೇವೆಯ ಅವಶ್ಯಕತೆಯನ್ನು ಮನಗಂಡ ಪಂಚಾಯತ್ ತನ್ನ ಕಟ್ಟಡದಲ್ಲಿ ಬ್ಯಾಂಕಿಂಗ್ ಸೇವೆ ತರಲು ಟೆಂಡರ್ ಕರೆದಾಗ ಆತ್ಮಶಕ್ತಿ ಎನ್ನುವ ಒಂದು ಒಳ್ಳೆಯ ಸಹಕಾರಿ ಸಂಘವು ತಮ್ಮ ಕಟ್ಟಡದಲ್ಲಿ ಶಾಖೆ ತೆರೆದಿರುವುದರಿಂದ ಜನರಿಗೆ ಅನುಕೂಲಕರವಾಗಿದೆ ಎನ್ನುವುದು ಒಂದು ಸಂತಸದ ವಿಚಾರ ಎಂದರು. ಮತ್ತೋರ್ವ ಗ್ರಾಹಕರಾದ ಶ್ರೀ ಭಾಸ್ಕರ್ ಇವರು ಸಂಘವು ಸಾಲ ಸೌಲಭ್ಯಗಳನ್ನು ನೀಡಿರುವುದಕ್ಕೆ ನಾವು ಈ ಸಂಸ್ಥೆಗೆ ಋಣಿಯಾಗಿದ್ದು ಸಾಲವನ್ನು ಮರುಪಾವತಿಸುವುದು ನಮ್ಮ ಕರ್ತವ್ಯ ಅಂತೆಯೇ ಈ ಜಾಗದಲ್ಲಿ ಈ ಸಂಸ್ಥೆಯು ರಾಷ್ಟ್ರೀಯ ಬ್ಯಾಂಕಿಗಳಿಗಿಂತ ಉತ್ತಮವಾಗಿ ಸೇವೆ ನೀಡುತ್ತಿದ್ದು ಮುಂದೆಯೂ ಅಭಿವೃದ್ಧಿ ಪಥದಲ್ಲಿ ಸಾಗಲಿ ಎಂದು ಹಾರೈಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷರಾದ ಶ್ರೀ ಚಿತ್ತರಂಜನ್ ಬೋಳಾರ್ರವರು ಮಾತನಾಡಿ ಎಲ್ಲಾ ಸದಸ್ಯರ ಸಹಕಾರದಿಂದ ಠೇವಣಿಗಳ ಸಂಗ್ರಹಣೆಯಲ್ಲಿ, ಸಾಲ ನೀಡುವಿಕೆಯಲ್ಲಿ ಹಾಗೂ ವಸೂಲಾತಿಯಲ್ಲಿ ಹೆಚ್ಚಿನ ಪ್ರಗತಿಯನ್ನು ಈ ಶಾಖೆ ಸಾಧಿಸಿದೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸೇವೆಯನ್ನು ಗ್ರಾಹಕರಿಗೆ ತಲುಪಿಸಲು ನಾವು ಪ್ರಯತ್ನಿಸುತ್ತೇವೆ ಎಂದರು. ಸಂಘದ ಉಪಾಧ್ಯಕ್ಷರಾದ ಶ್ರೀಯುತ ನೇಮಿರಾಜ್ ಪಿ, ನಿರ್ದೇಶಕರಾದ ಶ್ರೀಯುತ ಚಂದ್ರಹಾಸ್ ಮರೋಳಿ ಇವರು ಉಪಸ್ಥಿತರಿದ್ದರು.
ನಾಟೆಕಲ್ ಶಾಖೆಯ ಶಾಖಾಧಿಕಾರಿ ಶ್ರೀ ಪ್ರವೀಣ್ ಸ್ವಾಗತಿಸಿದರು, ಮುಖ್ಯಕಾರ್ಯನಿರ್ವಹಾಣಾಧಿಕಾರಿ ಶ್ರೀಮತಿ ಸೌಮ್ಯ ವಿಜಯ್ ಧನ್ಯವಾದ ಸಮರ್ಪಿಸಿದರು. ಶ್ರೀಮತಿ ಯಶವಂತಿಯವರು ಕಾರ್ಯಕ್ರಮವನ್ನು ನಿರೂಪಿಸಿದರು.