ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ಚಿತ್ತರಂಜನ್ ಬೋಳಾರ್ ರವರು ಮಾತನಾಡಿ ಪ್ರಸ್ತುತ ಸಹಕಾರ ಕಾಯ್ದೆ ಮತ್ತು ನಿಯಮಗಳಲ್ಲಿ ಪತ್ತಿನ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ನೇಮಕಾತಿ ಹಾಗೂ ನೌಕರರನ್ನು ಉನ್ನತ ಹುದ್ದೆಗೆ ಪದೋನ್ನತಿ ಪಡೆಯಬೇಕಾದರೆ ಆತನ ಅರ್ಹತೆಯಲ್ಲಿ Higher Diploma in Co-Operative Management (HDCM) ಕೋರ್ಸ್‍ನ್ನು ಸರಕಾರವು ನಿಗದಿಪಡಿಸಿರುವುದರಿಂದ ಮುಂದಿನ ದಿನಗಳಲ್ಲಿ ಈ ಶಿಕ್ಷಣ ಅತೀ ಅಗತ್ಯವಿರುತ್ತದೆ. ಈ ಅಗತ್ಯತೆಯನ್ನು ಮನಗಂಡು ನಮ್ಮ ಸಂಘದ […]
Month: February 2021
ಮಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಆತ್ಮಶಕ್ತಿ ವಿವಿಧೊದ್ದೇಶ ಸಹಕಾರಿ ಸಂಘದ 18ನೇ ತುಂಬೆ ಶಾಖೆಯು ರವಿವಾರ ತುಂಬೆ ಬಸ್ ನಿಲ್ದಾಣದ ಬಳಿಯ ಕುಲ್ಶ್ ಸೆಂಟರ್ ನಲ್ಲಿ ಉದ್ಘಾಟನೆಗೊಂಡಿತು.
ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ.ಖಾದರ್ ಉದ್ಘಾಟಿಸಿ ಮಾತನಾಡಿ, ಆತ್ಮಶಕ್ತಿ ಸಹಕಾರಿ ಸಂಘದ 5 ಶಾಖೆಗಳನ್ನು ನನ್ನ ಕ್ಷೇತ್ರದಲ್ಲಿಯೇ ಉದ್ಘಾಟಿಸಿದ ಹೆಮ್ಮೆ ನನಗಿದೆ. ಸಹಕಾರಿ ರಂಗದಲ್ಲಿ ಗ್ರಾಹಕರ ಕಾಳಜಿ ಹಾಗೂ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿದರೆ ಯಶಸ್ಸು ಸಾಧ್ಯ. ಇದಕ್ಕೆ ಆತ್ಮಶಕ್ತಿ ವಿವಿಧೊದ್ದೇಶ ಸಹಕಾರಿ ಸಂಘವು ಉತ್ತಮ ನಿದರ್ಶನವಾಗಿದೆ. ಗ್ರಾಹಕರಿಗೆ ಬ್ಯಾಂಕಿನ ರೀತಿಯಲ್ಲಿ ಸೇವೆ ನೀಡುತ್ತಿರುವ ಆತ್ಮಶಕ್ತಿ ಸಹಕಾರಿಯು ರಾಷ್ಟ್ರಮಟ್ಟದಲ್ಲಿ ಬೆಳುಗುವಂತಾಗಲಿ ಎಂದರು. ತುಂಬೆ ಪಾದರ್ ಮುಲ್ಲರ್ ಆಸ್ಪತ್ರೆಯ ಆಡಳಿತಾಧಿಕಾರಿ ವಂ! ಸಿಲ್ವೆಸ್ಟರ್ ವಿನ್ಸೆಂಟ್ ಲೋಬೋ ದೀಪ ಪ್ರಜ್ವಲನೆ ಮಾಡಿ […]
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಇದರ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ.) ಜಪ್ಪಿನಮೊಗರು, ಮಂಗಳೂರು ಇವರ ಆಶ್ರಯದಲ್ಲಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ , ಉಜ್ಜೋಡಿ, ಮಂಗಳೂರು ಇವರ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಹಾಗೂ ಕನ್ನಡಕ ವಿತರಣಾ ಕಾರ್ಯಕ್ರಮವು ಬ್ರಹ್ಮಶ್ರೀ ನಾರಾಯಣ ಗುರು ಮಂದಿರ, ಜಪ್ಪಿನಮೊಗರಿನಲ್ಲಿ ನಡೆಯಿತು.
ಮಂಗಳೂರು ಮಹಾನಗರ ಪಾಲಿಕೆಯ Corporater ಆದ ಶ್ರೀಮತಿ ವೀಣಾ ಮಂಗಳ ಇವರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಇವರು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ನಿರಂತರವಾಗಿ ಇಂತಹ ಆರೋಗ್ಯ ಶಿಬಿರವನ್ನು ಆಯೋಜಿಸುತ್ತಾ ಬರುತ್ತಿದ್ದು ಈ ಸಂಘವು ಜನರಪರ ಕಾಳಜಿಯುಳ್ಳ ಒಂದು ಉತ್ತಮ ಸಹಕಾರಿ ಸಂಘವಾಗಿ ಸಮಾಜದಲ್ಲಿ ಒಂದು ಮಾದರಿ ಸಂಘವಾಗಿ ಕಾರ್ಯನಿರ್ವಹಿಸುತ್ತಿದೆ, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸಂಘವು ಇಂತಹ ಶಿಬಿರವನ್ನು ಈ ಸಂಘವು ಆಯೋಜಿಸುವಂತಾಗಲಿ ಎಂದು ಶುಭ ಹಾರೈಸಿ ಪರಿಸರದ ಜನರು […]
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಇದರ ವತಿಯಿಂದ ಹಿಂದೂ ಯುವಸೇನೆ ಓಂ ಶಕ್ತಿ ಶಾಖೆ, ಎಕ್ಕೂರು, ಮಂಗಳೂರು ಹಾಗೂ ಅಯ್ಯಪ್ಪ ಭಜನಾ ಮಂಡಳಿ, ಹಿಂದೂಪುರ , ಎಕ್ಕೂರು, ಮಂಗಳೂರು ಇವರ ಆಶ್ರಯದಲ್ಲಿ ಕರ್ನಾಟಕ ಒನ್ ಸೇವಾ ಸಂಸ್ಥೆಯ ಮೂಲಕ ಉಚಿತ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಕಾರ್ಡ್ ವಿತರಣಾ ಕಾರ್ಯಕ್ರಮವು ಅಯ್ಯಪ್ಪ ಭಜನಾ ಮಂಡಳಿ, ಹಿಂದೂಪುರ , ಎಕ್ಕೂರಿನಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಆದ ಶ್ರೀ ದಿವಾಕರ್ ಪಾಂಡೇಶ್ವರ ಇವರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಇವರು ಹಿಂದೂ ಯುವಸೇನೆಯು ಜನಪರ ಕಾಳಜಿಯಿಂದ ಉಚಿತ ಆಂಬುಲೆನ್ಸ್, ರಕ್ತದಾನ ಶಿಬಿರ, ಆರೋಗ್ಯ ಕಾರ್ಡ್ ವಿತರಣೆಯಂತಹ ಕಾರ್ಯಕ್ರಮವನ್ನು ಮಾಡುವುದು ಪ್ರಶಂಸನೀಯ, ಅಂತೆಯೇ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಕೂಡ ಕೇವಲ ತನ್ನ ವ್ಯವಹಾರದ ಪ್ರಗತಿಯನ್ನಷ್ಟೇ ನೋಡದೆ ಬಡ ವಿಧ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಹಾಯ, ಸಮಾಜ ಪರ ಕಾಳಜಿಯನ್ನಿಟ್ಟುಕೊಂಡು ಅನಾರೋಗ್ಯ ಪೀಡಿತ […]
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಹಾಗೂ ಲಯನ್ಸ್ ಮತ್ತು ಲಿಯೋ ಕ್ಲಬ್ ಮುಲ್ಕಿ ಇದರ ಸಹಯೋಗದೊಂದಿಗೆ ಕರ್ನಾಟಕ ಒನ್ ಸೇವಾ ಸಂಸ್ಥೆಯ ಮೂಲಕ ಉಚಿತ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ವಿತರಣಾ ಕಾರ್ಯಕ್ರಮವು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಮುಲ್ಕಿ ಶಾಖೆಯಲ್ಲಿ ನಡೆಯಿತು.
ಸಂಘದ ಸದಸ್ಯರಾದ ಡಾ. ಹರೀಶ್ಚಂದ್ರ ಪಿ. ಸಾಲ್ಯಾನ್ ಇವರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಜನರಿಗೆ ಉತ್ತಮ ಸೇವೆಯನ್ನು ನೀಡುವುದರ ಜೊತೆಯಲ್ಲಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದರಿಂದ ಹಲವಾರು ಬಡ ಜನರಿಗೆ ಸಹಾಯವಾಗುತ್ತಿದೆ. ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು. ಲಯನ್ಸ್ ಕ್ಲಬ್ ಮುಲ್ಕಿ ಇದರ ಅಧ್ಯಕ್ಷೆ ಹಾಗೂ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಸದಸ್ಯರಾದ ಶ್ರೀಮತಿ ಪ್ರತಿಭಾ ಹೆಬ್ಬಾರ್ ಮಾತನಾಡಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ […]
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಮಂಗಳೂರು ಇದರ 9 ನೇ ವಾರ್ಷಿಕೋತ್ಸವ, ಗ್ರಾಹಕರ ಸಭೆ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಂಘದ ಸದಸ್ಯರಿಗೆ ಹಾಗೂ ಸಿಬ್ಬಂದಿಗಳಿಗೆ ಗೌರವಾರ್ಪಣೆ ಕಾರ್ಯಕ್ರಮವು ಸಂಘದ ಅಧ್ಯಕ್ಷರಾದ ಶ್ರೀ ಚಿತ್ತರಂಜನ್ ಬೋಳಾರ್ ರವರ ಅಧ್ಯಕ್ಷತೆಯಲ್ಲಿ ನಗರದ ಕದ್ರಿ, ಮಲ್ಲಿಕಟ್ಟೆಯ ಲಯನ್ಸ್ ಸೇವಾ ಮಂದಿರದ ಸಭಾಭವನದಲ್ಲಿ ಜರುಗಿತು.
ಸಂಘದ ಸದಸ್ಯರುಗಳಾದ ಶ್ರೀ ದಿವಾಕರ್ ವಿ. , ಶ್ರೀ ಗಣೇಶ್ ಸನಿಲ್, ಶ್ರೀ ಯಶವಂತ, ಶ್ರೀ ಲಕ್ಷ್ಮೀ ನಾರಾಯಣ್ ಹಾಗೂ ಶ್ರೀಮತಿ ದೇವಕಿ ಉಳ್ಳಾಲ್ ಇವರುಗಳು ದ್ವೀಪ ಪ್ರಜ್ವಲನೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಘದ ಸದಸ್ಯರಾದ ಶ್ರೀ ಲಕ್ಷ್ಮೀ ನಾರಾಯಣ ರವರು ಮಾತನಾಡಿ ಸಂಘದಲ್ಲಿ ದೊರಕುವ ಸೇವೆ ಸೌಲಭ್ಯಗಳ ಬಗ್ಗೆ ಹರ್ಷವ್ಯಕ್ತಪಡಿಸಿ, ಇನ್ನೂ ಹೆಚ್ಚು ವ್ಯವಹಾರವನ್ನು ವಿಸ್ತಾರ ಮಾಡಿ ಹೆಚ್ಚಿನ ಶಾಖೆಗಳನ್ನು ತೆರೆದು ಅಭಿವೃದ್ಧಿ ಹೊಂದುವಂತಾಗಲೀ ಹಾಗೂ ಕೊರೋನಾ ಸಮಯದಲ್ಲಿ ಸಂಘವು ಸಾಮಾಜಿಕ ಬದ್ಧತೆಯನ್ನು […]