ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಬಜ್ಪೆ ಶಾಖೆಯ 7 ನೇ ವಾರ್ಷಿಕೋತ್ಸವದ ಪ್ರಯುಕ್ತ ಗ್ರಾಹಕರ ಸಭೆ ಹಾಗೂ ಉಚಿತ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ವಿತರಣಾ ಕಾರ್ಯಕ್ರಮವು ಸಂಘದ ಬಜ್ಪೆ ಶಾಖೆಯಲ್ಲಿ ದಿನಾಂಕ 09/03/2021 ನೇ ಮಂಗಳವಾರದಂದು ನಡೆಯಿತು.

ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಘದ ಸದಸ್ಯರಾದ ಶ್ರೀ ಲೋಕೆಶ್ ಪೂಜಾರಿ ಮಾತನಾಡಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಅತೀ ಅಲ್ಪ ಅವಧಿಯಲ್ಲಿ ನಿರೀಕ್ಷೆಗೂ ಮೀರಿ ಸಾಧನೆ ಮಾಡಲು ಸಂಘದ ಅಧ್ಯಕ್ಷರು, ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳ ಪಾತ್ರ ಮಹತ್ವದ್ದು, ಮುಂದೆಯೂ ಸಂಘವು ಸಹಕಾರಿ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆಯನ್ನು ಮಾಡಿ ಬಜ್ಪೆಯ ಜನತೆಗೆ ಉತ್ತಮ ಗ್ರಾಹಕ ಸ್ನೇಹಿ ಸಂಘವಾಗಿ ಮೂಡಿಬರಲಿ ಎಂದು ಆಶಯ ವ್ಯಕ್ತಪಡಿಸಿದರು. ಮತ್ತೋರ್ವ ಗ್ರಾಹಕರಾದ ಶ್ರೀ ಪ್ರದೀಪ್ ಕುಮಾರ್ ಸುವರ್ಣ ಮಾತನಾಡಿ ಗ್ರಾಹಕರೊಂದಿಗೆ ಪ್ರೀತಿ, ವಿಶ್ವಾಸದೊಂದಿಗೆ ವ್ಯವಹರಿಸಿದರೆ ಯಶಸ್ಸು ಖಂಡಿತ ಇದಕ್ಕೆ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಒಂದು ಉತ್ತಮ ನಿದರ್ಶನವಾಗಿದೆ, ಗ್ರಾಹಕರ ಹಿತದೃಷ್ಟಿಯಿಂದ ವಾರ್ಷಿಕೋತ್ಸವದ ದಿನದಂದು ಉಚಿತ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಅಭಿನಂದನಾರ್ಹವಾಗಿದೆ ಎಂದರು. ಶ್ರೀ ಮಾಧವ ಎಂ. ಅಮೀನ್ ಮಾತನಾಡಿ ಸಂಘವು ಬಜ್ಪೆ ಪರಿಸರದಲ್ಲಿ ಕೇವಲ 7 ವರ್ಷಗಳಲ್ಲಿ ವಿಶಿಷ್ಟ ಶೈಲಿಯಲ್ಲಿ ಗ್ರಾಹಕರಿಗೆ ಸೇವೆಯನ್ನು ನೀಡಿ ಒಂದು ಗ್ರಾಹಕ ಸ್ನೇಹಿ ಸಂಘವಾಗಿ ಮೂಡಿ ಬಂದಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಘದ ಅಧ್ಯಕ್ಷರಾದ ಶ್ರೀ ಚಿತ್ತರಂಜನ್ ಬೋಳಾರ್ ಮಾತನಾಡಿ ಸಂಘದ ಬಜ್ಪೆ ಶಾಖೆಯು ಉತ್ತಮ ಸಾಧನೆ ಮಾಡಲು ಸಂಘದ ಸದಸ್ಯರು ಹಾಗೂ ಗ್ರಾಹಕರುಗಳೇ ಮುಖ್ಯ ಕಾರಣವಾಗಿದ್ದು ಆಡಳಿತ ಮಂಡಳಿಯ ಪರವಾಗಿ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದರು ಹಾಗೂ ಜನಪರ ಕಾಳಜಿಯಿಂದ ಸಂಘದ ಬಜ್ಪೆ ಶಾಖೆಯ 7 ನೇ ವಾರ್ಷಿಕೋತ್ಸವದ ಪ್ರಯುಕ್ತ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡನ್ನು ಉಚಿತವಾಗಿ ಸಂಘದ ಸದಸ್ಯರಿಗೆ ಹಾಗೂ ಸಾರ್ವಜನಿಕರಿಗೆ ಆಯೋಜಿಸಿದ್ದು ಎಲ್ಲರೂ ಇದರ ಸದುಪಯೋಗವನ್ನು ಪಡೆಯುವಂತೆ ಸೂಚಿಸಿದರು. ಪ್ರಸ್ತುತ ಆರ್ಥಿಕ ಸಾಲಿನಲ್ಲಿ ರೂ.700 ಕೋಟಿಗೂ ಮಿಕ್ಕಿ ವ್ಯವಹಾರವನ್ನು ನಡೆಸಿದ್ದು ಲಾಭದಾಯಕವಾಗಿ ಮುಂದುವರಿದು ರಾಜ್ಯದಲ್ಲೇ ವಿಶೇಷವಾಗಿ ಗುರುತಿಸಲ್ಪಟ್ಟ ಸಂಸ್ಥೆಯಾಗಿದೆ ಎಂದರು.
ಸಂಘದ ಉಪಾಧ್ಯಕ್ಷರಾದ ಶ್ರೀ ನೇಮಿರಾಜ್ ಪಿ. ಮಾತನಾಡಿ ಸಂಘವು ಸಾಮಾಜಿಕ ಬದ್ಧತೆಯೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದು, ಸಂಘದ ನೂತನ ಆಡಳಿತ ಕಛೇರಿಯು ಸದ್ಯದಲ್ಲೇ ಉದ್ಘಾಟನೆಗೆ ಸಜ್ಜುಗೊಳ್ಳುತ್ತಿದ್ದು ನಮಗೆಲ್ಲ ಹೆಮ್ಮೆಯ ವಿಷಯ. ಬಜ್ಪೆ ಶಾಖೆಯು ಲಾಭದಾಯಕವಾಗಿ ಮುಂದುವರೆಯಲು ಸಹಕರಿಸಿದ ಸದಸ್ಯ ಗ್ರಾಹಕರಿಗೆ ವಂದಿಸಿದರು. ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕರಾದ ಶ್ರೀ ಸುರೇಶ್ ವಿ. ಪೂಜಾರಿ, ಶ್ರೀ ರಮಾನಾಥ್ ಸನಿಲ್ ಹಾಗೂ ಶ್ರೀಮತಿ ಕುಶಾಲಾಕ್ಷಿ ಯಶವಂತ್ ಉಪಸ್ಥಿತರಿದ್ದರು, ಸಂಘದ ಲೆಕ್ಕಿಗ ಶ್ರೀಮತಿ ಶ್ವೇತಾ ಸ್ವಾಗತಿಸಿದರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸೌಮ್ಯಾ ವಿಜಯ್ ವಂದಿಸಿದರು, ಲೆಕ್ಕಿಗ ಶ್ರೀ ವಿಶ್ವನಾಥ್ ಹಾಗೂ ಬಜ್ಪೆ ಶಾಖೆಯ ಶಾಖಾಧಿಕಾರಿ ಶ್ರೀಮತಿ ಸುಜಾತ ಕಾರ್ಯಕ್ರಮವನ್ನು ನಿರೂಪಿಸಿದರು.