ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ಇವರು ಉದ್ಘಾಟಿಸಿ ಮಾತನಾಡಿ, ಗ್ರಾಹಕರಿಗೆ ಬ್ಯಾಂಕಿನ ರೀತಿಯಲ್ಲಿ ಸೇವೆ ನೀಡುತ್ತಿರುವ ಆತ್ಮಶಕ್ತಿ ಸಹಕಾರಿಯು ಕೇವಲ 10 ವರ್ಷಗಳಲ್ಲಿ 19 ಶಾಖೆಗಳನ್ನು ಸ್ಥಾಪನೆ ಮಾಡಿದ್ದು, 7 ಶಾಖೆಗಳನ್ನು ನನ್ನ ಕ್ಷೇತ್ರದಲ್ಲಿಯೇ ಉದ್ಘಾಟಿಸಿದ ಹೆಮ್ಮೆ ನನಗಿದೆ ಎಂದರು. ಸಂಘವು ಜನಸಾಮಾನ್ಯರಿಗೆ ಪ್ರೀತಿ ವಿಶ್ವಾಸದ ಸೇವೆಯನ್ನು ನೀಡುತ್ತಿದ್ದು, ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭಹಾರೈಸಿದರು.
ದೀಪ ಪ್ರಜ್ವಲನೆ ಮಾಡಿ ಚಿನ್ನದ ನೈಜತಾ ಪರೀಕ್ಷಾ ಯಂತ್ರವನ್ನು ಉದ್ಘಾಟಿಸಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ರವಿಶಂಕರ್ ಮಿಜಾರು ಇವರು ಮಾತನಾಡಿ, ಬಹಳ ಕನಿಷ್ಟ ಸಮಯದಲ್ಲಿ ಸಂಘವು ಬಹಳಷ್ಟು ಎತ್ತರದ ಸಾಧನೆಗಳನ್ನು ಮಾಡಿ ಅತ್ಯುತ್ತಮ ಸಹಕಾರಿ ಸಂಘವಾಗಿ ಮೂಡಿ ಬಂದಿದೆ. ಅಲ್ಲದೇ ಹಲವಾರು ಪ್ರಶಸ್ತಿಗಳು ಪಡೆದಿದ್ದು, ಇನ್ನಷ್ಟು ಪ್ರಶಸ್ತಿಗಳು ಪಡೆಯಲಿ ಎಂದು ಶುಭ ಹಾರೈಸಿದರು.
ವಿಶ್ವಕರ್ಮ ಸಹಕಾರಿ ಬ್ಯಾಂಕ್ನ ಅಧ್ಯಕ್ಷರಾದ ಶ್ರೀ ಹರೀಶ್ ಆಚಾರ್ರವರು ಗಣಕೀಕೃತ ಬ್ಯಾಂಕಿಂಗ್ ವಿಭಾಗವನ್ನು ಉದ್ಘಾಟಿಸಿ ಮಾತನಾಡಿ, ಆತ್ಮಶಕ್ತಿ ವಿವಿಧೊದ್ದೇಶ ಸಹಕಾರಿ ಸಂಘವು ತನ್ನ ಅತೀ ಕಡಿಮೆ ಅವಧಿಯಲ್ಲಿ ಅಭೂತಪೂರ್ವ ಸಾಧನೆ ಮಾಡಿ ಹೆಚ್ಚಿನ ಠೇವಣಾತಿ ಸಂಗ್ರಹಿಸಿ ಸಹಕಾರಿ ರಂಗದಲ್ಲಿ ಹೆಮ್ಮೆಯ ಸಾಧನೆಯ ಮಾಡಿದೆ ಎಂದರು. ಇದರಲ್ಲಿ ಸಂಘದ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಚಿತ್ತರಂಜನ್ ಬೋಳಾರ್ರವರು ಮಾತಾನಾಡಿ ಆತ್ಮಶಕ್ತಿ ಸಹಕಾರಿ ಸಂಘವು ಮಾದರಿ ಸಂಸ್ಧೆಯಾಗಿ ಬೆಳೆಯುವುದಕ್ಕೆ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ ಹಾಗೂ ಗ್ರಾಹಕರ ಸಹಕಾರವೇ ಕಾರಣವಾಗಿದೆ. ಸಂಘದ ಬೆಂದೂರ್ವೆಲ್, ಮೂಲ್ಕಿ, ಬಜ್ಪೆ, ಉಪ್ಪಿನಂಗಡಿ ಹಾಗೂ ತೊಕ್ಕೊಟ್ಟು ಶಾಖೆಗಳಲ್ಲಿ ನೂತನವಾಗಿ ಚಿನ್ನದ ನೈಜತಾ ಪರೀಕ್ಷಾ ಯಂತ್ರವನ್ನು ಅಳವಡಿಸಲಾಗಿದ್ದು, ಜನಸಾಮಾನ್ಯರಿಗೆ ತಮ್ಮಲ್ಲಿರುವ ಚಿನ್ನದ ಪರಿಶುದ್ದತೆಯನ್ನು ಸುಲಭವಾಗಿ ತಿಳಿಯಲು ಚಿನ್ನದ ನೈಜತಾ ಪರೀಕ್ಷಾ ಯಂತ್ರವು ತುಂಬಾ ಸಹಕಾರಿಯಾಗಿದ್ದು, ಸಹಕಾರಿ ರಂಗದಲ್ಲಿ ಈ ಸೇವೆಯನ್ನು ಅಳವಡಿಸಿರುವ ರಾಜ್ಯದ ಪ್ರಥಮ ಸಹಕಾರಿ ಸಂಘವಾಗಿದೆ ಹಾಗೂ ಹತ್ತನೇ ವರ್ಷದ ಸಂಭ್ರಮದಲ್ಲಿರುವ ಸಂಘದ ಸ್ವಂತ ಕಟ್ಟಡದ ಕನಸು ಶೀಘ್ರ ನೆರವೇರಲಿದೆ ಎಂದರು.
ಸಹಕಾರಿ ಸಂಘಗಳ ಉಪನಿಬಂಧಕರಾದ ಶ್ರೀ ಪ್ರವೀಣ್ ಬಿ. ನಾಯಕ್ ಹಾಗೂ ದಕ್ಷಿಣ ಕನ್ನಡ ಕೇಂದ್ರ ಸಹಕಾರ ಸಗಟು ಮಾರಾಟ ಸಂಘದ ಅಧ್ಯಕ್ಷರಾದ ಶ್ರೀ ಪುರುಷೋತ್ತಮ್ ಭಟ್ ಇವರು ನೂತನ ತೊಕ್ಕೊಟ್ಟು ಶಾಖೆಗೆ ಶುಭ ಹಾರೈಸಿದರು.
ಮಂಗಳೂರು ಬಿಜೆಪಿ ಪ್ರಕೋಷ್ಟದ ಕೋಶಾಧಿಕಾರಿ ಶ್ರೀ ಶ್ರೀನಿವಾಸ ಶೇಟ್, ಸಂಘದ ನಿರ್ದೆಶಕರಾದ ಶ್ರೀ ಆನಂದ ಎಸ್. ಕೊಂಡಾಣ, ಶ್ರೀ ಸೀತಾರಾಮ್ ಎನ್., ಶ್ರೀ ರಮಾನಾಥ್ ಸನಿಲ್, ಶ್ರೀ ಚಂದ್ರಹಾಸ್ ಮರೋಳಿ, ಶ್ರೀ ಕುಶಲಾಕ್ಷಿ ಯಶವಂತ್, ಶಾಖಾಧಿಕಾರಿ ಶ್ರೀಮತಿ ಹರಿಣಾಕ್ಷಿ ಪ್ರಶಾಂತ್ ಮೊದಲಾದವರು ಉಪಸ್ಥಿತರಿದ್ದರು.
ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸೌಮ್ಯ ವಿಜಯ್ರವರು ಸ್ವಾಗತಿಸಿ, ಉಪಾಧ್ಯಕ್ಷರಾದ ಶ್ರೀ ನೇಮಿರಾಜ್ ಪಿ.ರವರು ವಂದಿಸಿದರು. ಸಂಘದ ಸಿಬ್ಬಂದಿಗಳಾದ ಶ್ರೀ ವಿಶ್ವನಾಥ ಹಾಗೂ ಶ್ರೀಮತಿ ಚೈತ್ರಕುಮಾರಿ ಜೆ.ಎನ್ ಕಾರ್ಯಕ್ರಮ ನಿರ್ವಹಿಸಿದರು.