ಸಾಮಾಜಿಕ ಕಾರ್ಯಗಳಲ್ಲಿ ಸತತವಾಗಿ 18 ವರ್ಷಗಳಿಂದ ಗ್ರಾಮೀಣ ಪ್ರದೇಶಗಳಲ್ಲಿ ಉಚಿತ ವೈದ್ಯಕೀಯ ಶಿಬಿರ, ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಅಸಹಾಯಕರಿಗೆ ಸಹಾಯಧನ ವಿತರಣೆ ಮುಂತಾದ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು, ಈ ಬಾರಿ ಕೊರೊನಾ ಮಹಾಮಾರಿಯಿಂದ ತೊಂದರೆಗೊಳಗಾಗಿ ಚಿಕತ್ಸೆ ಪಡೆಯುತ್ತಿರುವ ಬಡ ಕುಟುಂಬಗಳಿಗೆ ಆರ್ಥಿಕ ಸಹಾಯವನ್ನು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಪ್ರಕಾಶನ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ.) ಮಂಗಳೂರು ಇದರ ವತಿಯಿಂದ ಸಹಾಯಧನ ನೀಡುವ ಕಾರ್ಯಕ್ರಮವು ನಡೆಯಿತು.

ಈ ಸಹಾಯಧನ ನೀಡಲು ಆರ್ಥಿಕ ಸಹಾಯ ನೀಡಿದ ಟ್ರಸ್ಟಿನ ಬಳಗದವರಾದ ಉದ್ಯಮಿ ಶ್ರೀ ಜಯಚಂದ್ರ ಕಜೆಕಾರ್ ಇವರಿಗೆ ದನ್ಯವಾದ ಸಲ್ಲಿಸಲಾಯಿತು. ಈ ಕಾರ್ಯಕ್ರಮವನ್ನು ಉದ್ಯಮಿ ಸುರೇಶ್ ಕೆ.ಪಿ ಹಾಗೂ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷರಾದ ಶ್ರೀ ನೇಮಿರಾಜ್ ಪಿ.ರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಟ್ರಸ್ಟ್‍ನ ಕಾರ್ಯದರ್ಶಿ ಶ್ರೀ ಗೋಪಾಲ್ ಎಮ್. ಸ್ವಾಗತಿಸಿದರು. ಆತ್ಮಶಕ್ತಿ ಪತ್ರಿಕೆಯ ಪ್ರಧಾನ ಸಂಪಾದಕರು ಹಾಗೂ ಟ್ರಸ್ಟಿನ ಸ್ಥಾಪಕ ಸದಸ್ಯರಾದ ಶ್ರೀ ವಾಮನ್ ಕೆ. ಇವರು ಪ್ರಾಸ್ತಾವಿಕ ಭಾಷಣ ಮಾಡಿದರು. ಆತ್ಮಶಕ್ತಿ ವಿವಿಧೋದ್ದೇಶ […]

ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ (ಆರ್.ಐ.ಸಿ.ಎಮ್) ಬೆಂಗಳೂರು ಇವರಿಂದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಬೆಂದೂರ್‍ವೆಲ್ ಮಂಗಳೂರು ಇವರ ಸಮನ್ವಯದಲ್ಲಿ ಮಂಗಳೂರು ಕೇಂದ್ರವಾಗಿಸಿಕೊಂಡು ಸಹಕಾರ ನಿರ್ವಹಣೆಯಲ್ಲಿ ಉನ್ನತ Diploma (ಹೆಚ್.ಡಿ.ಸಿ.ಎಮ್) ಕೋರ್ಸಿನ ದೂರ ಶಿಕ್ಷಣದ ಪರೀಕ್ಷೆಯಲ್ಲಿ ಉಪ್ಪಿನಂಗಡಿ ವ್ಯವಸಾಯಿಕ ಸಹಕಾರಿ ಸಂಘದ ಸಿಬ್ಬಂದಿ ಶ್ರೀ ಕೀರ್ತನ್ ಯು ಇವರು ಪ್ರಥಮ ಸ್ಥಾನ ,ಜಾಗೃತ ವಿವಿಧೋದ್ಧೇಶ ಸಹಕಾರಿ ಸಂಘದ ಸಿಬ್ಬಂದಿ ಶ್ರೀಮತಿ ಸುಕಲಾಕ್ಷಿ ರವರು ದ್ವಿತೀಯ ಸ್ಥಾನ ಹಾಗೂ ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘದ ಸಿಬ್ಬಂದಿ ಶ್ರೀ ಉದಯ್ ನಾಯ್ಕ್ ರವರು ತೃತೀಯ ಸ್ಥಾನ ಪಡೆದಿರುತ್ತಾರೆ.

ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆಯು ಸಹಕಾರಿ ಸಂಘದ ಸಿಬ್ಬಂದಿಗಳ ಪದೋನ್ನತಿಗಾಗಿ ಅವಶ್ಯವಿರುವ ಹೆಚ್‍ಡಿಸಿಎಮ್ ಕೋರ್ಸನ್ನು ದೂರಶಿಕ್ಷಣದ ಮೂಲಕ ನೀಡುತ್ತಿದ್ದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ 65 ಶಿಕ್ಷಣಾರ್ಥಿಗಳು ಹೆಚ್‍ಡಿಸಿಎಮ್ 30ನೇ ಅಧಿವೇಶನದಲ್ಲಿ ಪರೀಕ್ಷೆ ಬರೆದಿರುತ್ತಾರೆ. ಪರೀಕ್ಷೆಗಳು ವಿಶ್ವವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರಿನಲ್ಲಿ ನಡೆದಿದ್ದು ಇದರಲ್ಲಿ 17 ಶಿಕ್ಷಣಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಮತ್ತು 28 ಶಿಕ್ಷಣಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವುದು ಅವಿಭಜಿತ ಜಿಲ್ಲೆಗಳಿಗೆ ಹೆಮ್ಮೆಯ ವಿಷಯವಾಗಿದೆ. ಈ ನಿಟ್ಟಿನಲ್ಲಿ ತರಬೇತಿ ಸಮನ್ವಯ ಅಧಿಕಾರಿ ಹಾಗೂ ಉಪನ್ಯಾಸಕರಾದ ಶ್ರೀ ಸುರೇಶ್ […]

ಮಂಗಳೂರಿನ ಬೆಂದೂರ್‍ವೆಲ್‍ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಪಂಜಿಮೊಗರು ಶಾಖೆಯು ಪಂಜಿಮೊಗರು ಮೊಗೇರ ಸಂಘ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ.

ಸ್ಥಳಾಂತರ ಶಾಖೆಯನ್ನು ಉದ್ಘಾಟಿಸಿದ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಭರತ್ ವೈ. ಶೆಟ್ಟಿಯವರು ಮಾತನಾಡಿ, ಸಹಕಾರ ಸಂಘದ ಬೆಳವಣಿಗೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಕ್ಷೇತ್ರದ ಜನರಿಗೆ ಹೆಚ್ಚಿನ ಬ್ಯಾಂಕಿಂಗ್ ಸೌಲಭ್ಯವನ್ನು ನೀಡುವುದರ ಮೂಲಕ ಜನರ ಜೊತೆಗೆ ಉತ್ತಮ ಭಾಂದವ್ಯ ಹೊಂದಿದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಕಡಿಮೆ ಅವಧಿಯಲ್ಲಿ ತನ್ನ 19 ಶಾಖೆಯನ್ನು ತೆರೆದು ಗ್ರಾಹಕರಿಗೆ ಉತ್ತಮ ಸೇವೆಯನ್ನು ಸಲ್ಲಿಸುತ್ತಾ ಜನಮನ್ನಣೆ ಗಳಿಸಿದೆ. ಈ ಸಂಘವು ಇನ್ನಷ್ಟು ಉನ್ನತಿ ಪಡೆದು ನೂರಾರು ಶಾಖೆಗಳನ್ನು ತೆರೆದು ಜನಪ್ರಿಯಗೊಳ್ಳಲಿ […]

ಮಂಗಳೂರಿನ ಬೆಂದೂರ್‍ವೆಲ್‍ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಮುಡಿಪು ಶಾಖೆಯು ಪಂಚಾಯತ್ ಆಫೀಸಿನ ಎದುರುಗಡೆ ಇರುವ ಗೋಪಾಲಕೃಷ್ಣ ಬಿಲ್ಡಿಂಗ್‍ಗೆ ಸ್ಥಳಾಂತರಗೊಂಡಿತು.

ಅಮ್ಮೆಂಬಳ ಸೇವಾ ಸಹಕಾರಿ ಸಂಘದ ಅಧ್ಯಕ್ಷರು ಹಾಗೂ ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ನ ನಿರ್ದೇಶಕರಾಗಿರುವ ಶ್ರೀ ಟಿ. ರಾಜಾರಾಮ್ ಭಟ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಉತ್ತಮ ಸೇವೆ ನೀಡುತ್ತಿರುವ ಆತ್ಮಶಕ್ತಿ ಸಹಕಾರಿಯು ಕೇವಲ 9 ವರ್ಷಗಳಲ್ಲಿ 19 ಶಾಖೆಗಳನ್ನು ಸ್ಥಾಪನೆ ಮಾಡಿರುವ ರಾಜ್ಯದ ಎಕೈಕ ಸಹಕಾರಿ ಸಂಘ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಚಿನ್ನಾಭರಣ ಸಾಲದಲ್ಲಿ ಗಣನೀಯ ಸಾಧನೆಯನ್ನು ಮಾಡಿರುವ ಸಂಘವು ಜನಸಾಮಾನ್ಯರಿಗೆ ಪ್ರೀತಿ ವಿಶ್ವಾಸದ ಸೇವೆಯನ್ನು ನೀಡುತ್ತಿದ್ದು ಅಮ್ಮೆಂಬಳ ಸಹಕಾರಿ ಸಂಘವು ಆತ್ಮಶಕ್ತಿಯೊಂದಿಗೆ ಅವಿನಾಭಾವ […]

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಮಂಗಳೂರು ಇದರ ಪ್ರಧಾನ ಕಛೇರಿಯಲ್ಲಿ 75ನೇ ಸ್ವಾತಂತ್ಯೋತ್ಸವವನ್ನು ಆಚರಿಸಲಾಯಿತು. ಪ್ರಧಾನ ಕಛೇರಿಯಲ್ಲಿ ನಡೆದ ಕಾರ್ಯಕ್ರಮವು ಸಂಘದ ಅಧ್ಯಕ್ಷರಾದ ಶ್ರೀ ಚಿತ್ತರಂಜನ್ ಬೋಳಾರ್ ಇವರ ಅಧ್ಯಕ್ಷತೆಯಲ್ಲಿ ಜರುಗಿತು.

ನಿವೃತ್ತ ಯೋಧ ಶ್ರೀ ದಿವಾಕರ್ ವಿ. ರವರು ಧ್ವಜಾರೋಹಣ ನೆರವೇರಿಸಿ, ದೇಶ ಸೇವೆಯಲ್ಲಿ ತನ್ನ ಅನುಭವವನ್ನು ಹಂಚಿಕೊಳ್ಳುತ್ತಾ ಮಾತನಾಡಿ ಹಿರಿಯರ ತ್ಯಾಗ ಬಲಿದಾನಗಳಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಅವರ ತ್ಯಾಗ ಬಲಿದಾನವನ್ನು ಸ್ಮರಿಸುವ ಕೆಲಸ ನಮ್ಮಿಂದ ಅಗಬೇಕಿದೆ. ಸೇನೆಯಲ್ಲಿ ಹಲವಾರು ಉದ್ಯೋಗವಕಾಶಗಳು ಇದ್ದು, ಯುವ ಪೀಳಿಗೆ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದು ದೇಶ ಸೇವೆ ಮಾಡುವ ಅವಕಾಶದ ಜೊತೆಗೆ ಗೌರವಯುತ ಉದ್ಯೋಗವನ್ನು ಪಡೆಯಬಹುದು ಎಂದು ಹೇಳಿದರು. ಸಂಘದ ನಿರ್ದೇಶಕರಾದ ಶ್ರೀ ಆನಂದ ಎಸ್ ಕೊಂಡಾಣ, ಶ್ರೀ […]