ಮಂಗಳೂರಿನ ಬೆಂದೂರ್‍ವೆಲ್‍ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಮುಡಿಪು ಶಾಖೆಯು ಪಂಚಾಯತ್ ಆಫೀಸಿನ ಎದುರುಗಡೆ ಇರುವ ಗೋಪಾಲಕೃಷ್ಣ ಬಿಲ್ಡಿಂಗ್‍ಗೆ ಸ್ಥಳಾಂತರಗೊಂಡಿತು.

ಅಮ್ಮೆಂಬಳ ಸೇವಾ ಸಹಕಾರಿ ಸಂಘದ ಅಧ್ಯಕ್ಷರು ಹಾಗೂ ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ನ ನಿರ್ದೇಶಕರಾಗಿರುವ ಶ್ರೀ ಟಿ. ರಾಜಾರಾಮ್ ಭಟ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಉತ್ತಮ ಸೇವೆ ನೀಡುತ್ತಿರುವ ಆತ್ಮಶಕ್ತಿ ಸಹಕಾರಿಯು ಕೇವಲ 9 ವರ್ಷಗಳಲ್ಲಿ 19 ಶಾಖೆಗಳನ್ನು ಸ್ಥಾಪನೆ ಮಾಡಿರುವ ರಾಜ್ಯದ ಎಕೈಕ ಸಹಕಾರಿ ಸಂಘ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಚಿನ್ನಾಭರಣ ಸಾಲದಲ್ಲಿ ಗಣನೀಯ ಸಾಧನೆಯನ್ನು ಮಾಡಿರುವ ಸಂಘವು ಜನಸಾಮಾನ್ಯರಿಗೆ ಪ್ರೀತಿ ವಿಶ್ವಾಸದ ಸೇವೆಯನ್ನು ನೀಡುತ್ತಿದ್ದು ಅಮ್ಮೆಂಬಳ ಸಹಕಾರಿ ಸಂಘವು ಆತ್ಮಶಕ್ತಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ ಈ ಸಂಬಂಧ ಇನ್ನಷ್ಟು ಗಟ್ಟಿಯಾಗಿ ಬೆಳೆಯಲಿ ಹಾಗೂ ಸಂಘವು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭಹಾರೈಸಿದರು.

ಅಧ್ಯಕ್ಷತೆ ವಹಿಸಿದ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಚಿತ್ತರಂಜನ್ ಬೋಳಾರ್‍ರವರು ಮಾತಾನಾಡಿ ಆತ್ಮಶಕ್ತಿ ಸಹಕಾರಿ ಸಂಘವು ಮಾದರಿ ಸಂಸ್ಧೆಯಾಗಿ ಬೆಳೆಯುವುದಕ್ಕೆ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ ಹಾಗೂ ಗ್ರಾಹಕರ ಸಹಕಾರವೇ ಕಾರಣವಾಗಿದೆ. ಹತ್ತನೇ ವರ್ಷದ ಸಂಭ್ರಮದಲ್ಲಿರುವ ಸಂಘದ ಸ್ವಂತ ಕಟ್ಟಡದ ಕನಸು ಶೀಘ್ರ ನೆರವೇರಲಿದೆ ಎಂದರು.

ಶ್ರೀ ಗೋಪಾಲಕೃಷ್ಣ ದೇವರು ಟ್ರಸ್ಟ್ (ರಿ.) ಇದರ ಟ್ರಸ್ಟಿಯಾಗಿರುವ ಡಾ. ಸದಾನಂದ ಕಾಮತ್ ರವರು ಭದ್ರತಾ ಕೊಠಡಿಯನ್ನು ಉದ್ಘಾಟಿಸಿ , ಆತ್ಮದಲ್ಲಿ ದೈರ್ಯವೊಂದಿದ್ದರೆ ಯಾವ ಸಾಧನೆಯನ್ನು ಬೇಕಾದರೂ ಮಾಡಬಹದು, ಸಂಘವು ಇನ್ನಷ್ಟು ಉನ್ನತವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು. ಶ್ರೀ ಗೋಪಾಲಕೃಷ್ಣ ದೇವರು ಟ್ರಸ್ಟ್ (ರಿ.) ಇದರ ಅಧ್ಯಕ್ಷರಾದ ಶ್ರೀ ಎ. ನಾಗೇಶ್ ಕಾಮತ್ ರವರು ಸಂಘದ ಬೆಳೆವಣಿಗೆಗೆ ಶುಭ ಹಾರೈಸಿದರು.
ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿ. ನ ಅಧ್ಯಕ್ಷರಾದ ಶ್ರೀ ಸಂತೋಷ್ ಕುಮಾರ್ ರೈ ಬೋಳಿಯಾರ್ ರವರು ಸಂಘವು ಇ-ಸ್ಟಾಂಪಿಂಗ್‍ನಲ್ಲಿ ಉತ್ತಮ ಸೇವೆಯನ್ನು ನೀಡಿ ಜನ ಸಾಮಾನ್ಯರ ಹೆಗ್ಗಳಿಕೆ ಪಾತ್ರವಾದ ಎಕೈಕ ಸಂಸ್ಥೆಯಾಗಿ ಬೆಳೆದಿದೆ, ಹೀಗೆ ಉತ್ತಮ ಸೇವೆಯನ್ನು ನೀಡುತ್ತಾ ಬರಲಿ ಎಂದೂ ಹಾರೈಸಿದರು.

ಸಂಘದ ನಿರ್ದೆಶಕರಾದ ಶ್ರೀ ವಾಮನ್ ಕೆ., ಶ್ರೀ ಸೀತಾರಾಮ್ ಎನ್., ಶ್ರೀ ಆನಂದ ಎಸ್. ಕೊಂಡಾಣ, ಶ್ರೀ ಸುರೇಶ್ ವಿ. ಪೂಜಾರಿ, ಶ್ರೀ ಚಂದ್ರಹಾಸ್ ಮರೋಳಿ, ಸಲಹಾ ಸಮಿತಿ ಸದಸ್ಯರಾದ ಶ್ರೀ ಬಿ. ಪಿ. ದಿವಾಕರ್, ಸಂಘದ ಲೆಕ್ಕಿಗರಾದ ಶ್ರೀ ವಿಶ್ವನಾಥ , ಶಾಖಾಧಿಕಾರಿ ಶ್ರೀಮತಿ ಸೌಮ್ಯಲತಾ, ಶಾಖಾಧಿಕಾರಿ ಶ್ರೀಮತಿ ಭವ್ಯ ಮೊದಲಾದವರು ಉಪಸ್ಥಿತರಿದ್ದರು.

ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸೌಮ್ಯ ವಿಜಯ್‍ರವರು ಸ್ವಾಗತಿಸಿ, ಉಪಾಧ್ಯಕ್ಷರಾದ ಶ್ರೀ ನೇಮಿರಾಜ್ ಪಿ. ರವರು ವಂದಿಸಿದರು. ಹಾಗೂ ಸಂಘದ ಸಿಬ್ಬಂದಿ ಶ್ರೀ ನಿತಿನ್ ರವರು ಕಾರ್ಯಕ್ರಮ ನಿರೂಪಿಸಿದರು.