ಸಾಮಾಜಿಕ ಕಾರ್ಯಗಳಲ್ಲಿ ಸತತವಾಗಿ 18 ವರ್ಷಗಳಿಂದ ಗ್ರಾಮೀಣ ಪ್ರದೇಶಗಳಲ್ಲಿ ಉಚಿತ ವೈದ್ಯಕೀಯ ಶಿಬಿರ, ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಅಸಹಾಯಕರಿಗೆ ಸಹಾಯಧನ ವಿತರಣೆ ಮುಂತಾದ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು, ಈ ಬಾರಿ ಕೊರೊನಾ ಮಹಾಮಾರಿಯಿಂದ ತೊಂದರೆಗೊಳಗಾಗಿ ಚಿಕತ್ಸೆ ಪಡೆಯುತ್ತಿರುವ ಬಡ ಕುಟುಂಬಗಳಿಗೆ ಆರ್ಥಿಕ ಸಹಾಯವನ್ನು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಪ್ರಕಾಶನ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ.) ಮಂಗಳೂರು ಇದರ ವತಿಯಿಂದ ಸಹಾಯಧನ ನೀಡುವ ಕಾರ್ಯಕ್ರಮವು ನಡೆಯಿತು.


ಈ ಸಹಾಯಧನ ನೀಡಲು ಆರ್ಥಿಕ ಸಹಾಯ ನೀಡಿದ ಟ್ರಸ್ಟಿನ ಬಳಗದವರಾದ ಉದ್ಯಮಿ ಶ್ರೀ ಜಯಚಂದ್ರ ಕಜೆಕಾರ್ ಇವರಿಗೆ ದನ್ಯವಾದ ಸಲ್ಲಿಸಲಾಯಿತು. ಈ ಕಾರ್ಯಕ್ರಮವನ್ನು ಉದ್ಯಮಿ ಸುರೇಶ್ ಕೆ.ಪಿ ಹಾಗೂ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷರಾದ ಶ್ರೀ ನೇಮಿರಾಜ್ ಪಿ.ರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಟ್ರಸ್ಟ್‍ನ ಕಾರ್ಯದರ್ಶಿ ಶ್ರೀ ಗೋಪಾಲ್ ಎಮ್. ಸ್ವಾಗತಿಸಿದರು. ಆತ್ಮಶಕ್ತಿ ಪತ್ರಿಕೆಯ ಪ್ರಧಾನ ಸಂಪಾದಕರು ಹಾಗೂ ಟ್ರಸ್ಟಿನ ಸ್ಥಾಪಕ ಸದಸ್ಯರಾದ ಶ್ರೀ ವಾಮನ್ ಕೆ. ಇವರು ಪ್ರಾಸ್ತಾವಿಕ ಭಾಷಣ ಮಾಡಿದರು.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕರು ಹಾಗೂ ಟ್ರಸ್ಟಿನ ಕೋಶಾಧಿಕಾರಿ ಶ್ರೀ ಚಂದ್ರಹಾಸ ಮರೋಳಿ, ಟ್ರಸ್ಟಿ ಶ್ರೀ ಬಾಬು ಎಸ್. ಕರ್ಕೇರ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕರಾದ ಶ್ರೀ ರಮಾನಾಥ್ ಸನಿಲ್, ಟ್ರಸ್ಟಿ ಶ್ರೀ ಸದಾನಂದ ಸುವರ್ಣ ಹಾಗೂ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಸಿಬ್ಬಂದಿಗಳು ಉಪಸ್ಥಿತರಿದ್ದರು. ಫಲಾನುಬವಿಗಳ ಪರವಾಗಿ ಕಾರ್ಕಳದ ಶ್ರೀ ಗೋಪಾಲ್ ಅಂಚನ್ ವಂದಿಸಿದರು.