ಸಂಘದ ಗ್ರಾಹಕರಾದ ಶ್ರೀ ಮೊಹಮ್ಮದ್ ಶರೂನ್‌ರವರು ಮಾತನಾಡಿ ಸಂಘವು ತ್ವರಿತಗತಿಯಲ್ಲಿ ಚಿನ್ನಾಭರಣ ಸಾಲ ಸೇವೆ ನೀಡುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮತ್ತೋರ್ವ ಸಂಘದ ಗ್ರಾಹಕರು ಹಾಗೂ ತುಂಬೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಪ್ರವೀಣ್ ಬಿ ತುಂಬೆ ರವರು ಮಾತನಾಡಿ “ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಶ್ರೀ ಚಿತ್ತರಂಜನ್ ಬೋಳಾರ್‌ರವರ ದಕ್ಷ ನಾಯಕತ್ವದಲ್ಲಿ ಬಂಡೆ ಕಲ್ಲಿನಲ್ಲಿಯೂ ನೀರು ತೆಗೆಯುವಂತಹ ಸಾಹಸ ಪ್ರವೃತ್ತಿಯಿಂದ ಸಂಘವು ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಸಂಘವು ನಿರುದ್ಯೋಗಿಗಳಿಗೆ ಉದ್ಯೋಗವಕಾಶವನ್ನು ಕಲ್ಲಿಸಿಕೊಟ್ಟಿದೆ. ಸಂಘದ ಅಭಿವೃದ್ಧಿ ಹಾಗೂ ಸಿಬ್ಬಂದಿಗಳು […]
