ಸಂಘವು ಅತ್ಯಲ್ಪ ಕಾಲದಲ್ಲಿ ಯಶಸ್ವಿ ಸಂಘವಾಗಿ ರೂಪುಗೊಂಡು, ವಿವಿಧ ಕಡೆಗಳಲ್ಲಿ ಶಾಖೆ ತೆರೆದು ಗ್ರಾಹಕರಿಗೆ ಉತ್ತಮ ಸೇವೆಯನ್ನು ಕಲ್ಪಿಸಿದೆ. ಮತ್ತಷ್ಟು ಶಾಖೆಗಳು ಗ್ರಾಹಕರಿಗೆ ಲಭಿಸುವಂತಾಗಲಿ ಎಂದು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಡ್ಯಾರ್ ಇದರ ಅಧ್ಯಕ್ಷ ಯಾದವ ಪೂಜಾರಿ ಭಂಡಾರಮನೆ ಹೇಳಿದರು. ಸಂಘದ ಅಧ್ಯಕ್ಷ, ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಅಧ್ಯಕ್ಷತೆ ವಹಿಸಿದ್ದರು. ಸಂಘವು 10 ವರ್ಷಗಳಲ್ಲಿ ದ.ಕ ಜಿಲ್ಲೆಯಲ್ಲಿ20 ಶಾಖೆ ತೆರೆದು ಸ್ವಂತ ಕಟ್ಟಡವನ್ನು ಪಡೀಲಿನ ಬೈರಾಡಿಕೆರೆ ಬಳಿ ಲೋಕಾರ್ಪಣೆಗೊಳಿಸಿದೆ. ಪ್ರಸಕ್ತ ಆರ್ಥಿಕ ಸಾಲಿನಲ್ಲಿ […]
