ಶ್ರಿ ಅರಿಲ್ ಕೆ.ಎಸ್. ಮಾತನಾಡಿ ಸಂಘವು 6 ಗಂಟೆಯವರೆಗೆ ಇ -ಸ್ಟಾಂಪಿಂಗ್ ಸೇವೆಯನ್ನು ನೀಡುತ್ತಿರುವುದರಿಂದ ನ್ಯಾಯವಾದಿಗಳಿಗೆ ಅನುಕೂಲವಾಗಿದೆ ಎಂದರು. ಮತ್ತೋರ್ವ ಗ್ರಾಹಕ ಶ್ರೀ ದಯಾನಂದ ಅರ್.ಕೆ. ಮಾತನಾಡಿ ಸಂಘವು ಪಿಗ್ಮಿ ಮೊಬೈಲ್ ಆಪ್ ಮೂಲಕ ಪಿಗ್ಮಿ ಹಣ ಸಂಗ್ರಹಣೆ ಮಾಡುವ ಸೇವೆಯನ್ನು ಆರಂಬಿಸಿದ್ದು ಪಿಗ್ಮಿ ಹಣ ಪಾವತಿಯ ಸಂದೇಶವು ನೇರವಾಗಿ ಪಿಗ್ಮಿ ಖಾತೆದಾರರ ಮೊಬೈಲ್‍ಗೆ ಸಂದೇಶ ರವಾನೆಯಾಗುವುದು ಗ್ರಾಹಕರಿಗೆ ಉತ್ತಮ ಸೇವೆಯಾಗಿದೆ ಎಂದರು.
“ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ಮಾತನಾಡಿ ಸಂಘವು ಸಣ್ಣ ವ್ಯಾಪಾರಸ್ಥರಿಗೆ ಪರಿಚಯಿಸಿದ ಮೈಕ್ರೋ ಸಾಲವು ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದ್ದು, ಇನ್ನೂ ಹೆಚ್ಚಿನ ವ್ಯಾಪಾರಸ್ಥರು ಇದರ ಸದುಪಯೋಗ ಪಡೆದುಕೊಳ್ಳಬೇಕು ಹಾಗೂ ಈ ತಿಂಗಳ ಅಂತ್ಯದಲ್ಲಿ ನೀರುಮಾರ್ಗದಲ್ಲಿ 22 ನೇ ಶಾಖೆಯು ಆರಂಭಗೊಳ್ಳಲಿದೆ ಎಂದರು.
ಸಹಕಾರ ರತ್ನ” ಪ್ರಶಸ್ತಿ ಪುರಸ್ಕೃತ ಶ್ರೀ ಚಿತ್ತರಂಜನ್ ಬೋಳಾರ್ ಇವರನ್ನು ಗ್ರಾಹಕರ ಪರವಾಗಿ ಕರಂಗಲ್ಪಾಡಿ ಶಾಖೆಯ ಪಿಗ್ಮಿ ಸಂಗ್ರಾಹಕರು ಸನ್ಮಾನಿಸಿದರು
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಶ್ರೀ ಬಿ.ಪಿ. ದಿವಾಕರ್ ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸೌಮ್ಯ ವಿಜಯ್ ಸ್ವಾಗತಿಸಿ, ಶಾಖಾಧಿಕಾರಿ ಶ್ರೀಮತಿ ಪೂಜಾ ನಿರೂಪಿಸಿದರು. ಉಪಾಧ್ಯಕ್ಷರಾದ ಶ್ರೀ ನೇಮಿರಾಜ್ ಪಿ. ವಂದಿಸಿದರು.