ಮಾಜಿ ಸಚಿವ ವಿನಯಕುಮಾರ್ ಸೊರಕೆ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ, ಅತೀ ಕಡಿಮೆ ಅವಧಿಯಲ್ಲಿ 23 ಶಾಖೆಗಳನ್ನು ಹೊಂದುವ ಮೂಲಕ ಬಲಿಷ್ಠಗೊಂಡ ಸಂಸ್ಥೆಯು ಅತೀ ಶೀಘ್ರವಾಗಿ 100 ಶಾಖೆಗಳನ್ನು ಹೊಂದುವಂತಾಗಲಿ ಎಂದರು. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ , ದಶಮಾನೋತ್ಸವ ಸಂಭ್ರಮದಲ್ಲಿರುವ ಆತ್ಮಶಕ್ತಿ ಸಂಘವು ಅತೀ ಶೀಘ್ರದಲ್ಲಿ ಸಂಘದ 24ನೇ ಶಾಖೆ ಗಂಜಿಮಠದಲ್ಲಿ ಮತ್ತು 25ನೇ ಶಾಖೆ ಕಾಪುವಿನಲ್ಲಿ ಆರಂಭಿಸಲಿದೆ ಎಂದರು. ಪಡುಬಿದ್ರಿ ಸಹಕಾರಿ ವ್ಯವಸಾಯಿಕ […]
