

ರಾಷ್ಟ ಪ್ರೇಮದ ಸಂಕೇತವಾದ ರಾಷ್ಟಧ್ವಜವನ್ನು ಸಂಘದ ಸದಸ್ಯರು, ಗ್ರಾಹಕರು ಹಾಗೂ ಸಾರ್ವಜನಿಕರು ಮನೆ ಮನೆಯಲ್ಲೂ ಹಾರಿಸಲು ಅನುಕೂಲವಾಗಲು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದಿAದ ರಾಷ್ಟಧ್ವಜವನ್ನು ವಿತರಿಸಲಾಗುವುದು. ಸಂಘದ ೨೩ ಶಾಖೆಗಳಲ್ಲಿಯೂ ರಾಷ್ಟಧ್ವಜ ಲಭ್ಯವಿದ್ದು ಧ್ವಜವೊಂದಕ್ಕೆ ಸರಕಾರ ನಿಗದಿ ಪಡಿಸಿದ ದರ ರೂ.22ರಂತೆ ಮಾರಾಟ ಮಾಡಲಾಗುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಶ್ರೀ ನೇಮಿರಾಜ್ ಪಿ., ಲೆಕ್ಕಿಗ ಶ್ರೀ ವಿಶ್ವನಾಥ್ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.