ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಪ್ರಧಾನ ಕಚೇರಿಯಲ್ಲಿ “ಆತ್ಮಶಕ್ತಿ ಮುಂಗಾರು ವಿಶೇಷ ಚಿನ್ನಾಭರಣ ಸಾಲ” ಯೋಜನೆಗೆ ಚಾಲನೆ ನೀಡಲಾಯಿತು. ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸೌಮ್ಯ ವಿಜಯ್ ಇವರು ಈ ಸಾಲ ಯೋಜನೆಯ ವಿಶೇಷ ಕೊಡುಗೆಯನ್ನು ಗ್ರಾಹಕರಾದ ಶ್ರೀ ಮನೋಜ್ ಇವರಿಗೆ ಹಸ್ತಾಂತರಿಸಿದರು.


ಈ ಸಂದರ್ಭದಲ್ಲಿ ಪಡೀಲ್ ಶಾಖೆಯ ಶಾಖಾಧಿಕಾರಿ ಸಚಿನ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸಂಘವು ಗ್ರಾಹಕರ ಮಳೆಗಾಲದ ಆರ್ಥಿಕ ಅವಶ್ಯಕತೆಯನ್ನು ನಿಭಾಯಿಸಲು ವಿಶೇಷ ಬಡ್ಡಿದರದಲ್ಲಿ ಚಿನ್ನಾಭರಣ ಸಾಲವನ್ನು ನೀಡುವುದರ ಜೊತೆಗೆ ವಿಶೇಷ ಕೊಡುಗೆಯನ್ನು ನೀಡುತ್ತಿದೆ. ಸಂಘವು ಕಳೆದ ಎರಡು ವರ್ಷದಲ್ಲಿ ಕೋವಿಡ್ ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ 4% ಬಡ್ಡಿದರದಲ್ಲಿ ಚಿನ್ನಾಭರಣ ಸಾಲ ನೀಡಿ ಗ್ರಾಹಕರ ಮುಚ್ಚುಗೆ ಪಡೆದಿರುತ್ತದೆ.