ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾತಾ ಅಮೃತಾನಂದಮಯಿ ಮಠದ ಶಿಬಿರ ಸಂಯೋಜನಾಧಿಕಾರಿ ಡಾ. ಸುಚಿತ್ರ ಕೆ. ರಾವ್ ರವರು ಮಾತನಾಡಿ “ಸ್ವಾಮಿಯವರ ತತ್ವ ಸಂದೇಶಗಳು ಅಜ್ಞಾನಿಗಳಿಗೆ ಜ್ಞಾನ ದೀಪವಾಗಿದೆ. ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಗಳು ಜಾಗತೀಕವಾಗಿ ಸ್ವೀಕರಿಸಲ್ಪಟ್ಟಿದೆ. ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂದು ಅವರು ಭೋಧಿಸಿದ ಉದಾತ್ತ ತತ್ವಗಳು ಜಾತಿ ಮತ ಭೇದವನ್ನು ತೊಡೆದು ಹಾಕುವಲ್ಲಿ ಸಹಾಯಕವಾಗಿದೆ” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ಇವರು ಮಾತನಾಡಿ “ಪ್ರತೀ ವರ್ಷವು ನಾರಾಯಣ ಗುರುಗಳ ಜನ್ಮ ದಿನದಂದು ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಉಚಿತ ವೈದ್ಯಕೀಯ ಶಿಬಿರಗಳನ್ನು ಏರ್ಪಡಿಸಿಕೊಂಡು ಬರುತ್ತಾ ಇದ್ದೇವೆ. ಈ ವರ್ಷವು ವೈದ್ಯಕೀಯ ಶಿಬಿರವನ್ನು ಆಯೋಜನೆ ಮಾಡಿಕೊಂಡು ಈ ಪರಿಸರದ ಎಲ್ಲಾ ಜನರು ಇದರ ಸದುಪಯೋಗವನ್ನು ಪಡೆದುಕೊಂಡು ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಬೇಕು ಹಾಗೂ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಸದಾ ಜನಪರ ಕಾಳಜಿಯೊಂದಿಗೆ ಜನರೊಂದಿಗೆ ಇರುತ್ತದೆ” ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಕೆ.ಎಮ್.ಸಿ. ಆಸ್ಪತ್ರೆಯ ತಜ್ಞ ವೈದ್ಯರಾದ ಡಾ. ಅಶೋಕ್ ಶೆಣೈ, ಪ್ರಸಾದ್ ನೇತ್ರಾಲಯದ ಕಣ್ಣಿನ ತಜ್ಞರಾದ ಡಾ ಅರ್ಚನ, ಪ್ರಸಾದ್ ನೇತ್ರಾಲಯದ ಶಿಬಿರ ಸಂಯೋಜಕರಾದ ಶ್ರೀ ಸೈಯದ್ , ಕಿಯೋನಿಕ್ಸ್ ಸಂಸ್ಥೆಯ ನಿಕಟ ಪೆÇರ್ವ ಅದ್ಯಕ್ಷರು ಶ್ರೀ ಹರಿಕೃಷ್ಣ ಬಂಟ್ವಾಳ, ಅಳಪೆ ವಾರ್ಡಿನ Corporater ಶ್ರೀಮತಿ ರೂಪಶ್ರೀ ಪೂಜಾರಿ , ಬಿಲ್ಲವ ಸಂಘ ಮಂಗಳಾದೇವಿ ಇದರ ಅದ್ಯಕ್ಷರಾದ ಶ್ರೀ ಕೃಷ್ಣಪ್ಪ ಪೂಜಾರಿ, ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಪ್ರಕಾಶನ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ.) ಅದ್ಯಕ್ಷರಾದ ಶ್ರೀ ವಾಮನ ಕೆ. , ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷರಾದ ಶ್ರೀ ನೇವಿರಾಜ್ ಪಿ., ನಿರ್ದೇಶಕರುಗಳಾದ ಶ್ರೀ ಚಂದ್ರಹಾಸ ಮರೋಳಿ , ಶ್ರೀ ಗೋಪಾಲ್ ಎಮ್. ಮತ್ತಿತ್ತರರು ಉಪಸ್ಥಿತರಿದ್ದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸೌಮ್ಯ ವಿಜಯ್ ರವರು ಸ್ವಾಗತಿಸಿ, ಸಹಾಯಕ ಪ್ರಬಂಧಕ ಶ್ರೀ ವಿಶ್ವನಾಥ್ರವರು ವಂದಿಸಿದರು. ಮಾನವ ಸಂಪನ್ಮೂಲಾಧಿಕಾರಿ ಶ್ರೀಮತಿ ದೀಪಿಕಾ ಸನಿಲ್ ಹಾಗೂ ಹಿರಿಯ ಶಾಖಾಧಿಕಾರಿ ಶ್ರೀಮತಿ ಹರಿಣಾಕ್ಷಿಯವರು ಕಾರ್ಯಕ್ರಮವನ್ನು ನಿರೂಪಿಸಿದರು.