ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಂಗಳೂರು ಇನ್‍ಸ್ಟಿಟ್ಯೂಟ್ ಆಪ್ ಆಂಕೊಲಾಜಿಯ ನಿರ್ದೇಶಕರು ಹಾಗೂ ಸೀನಿಯರ್ ಮೆಡಿಕಲ್ ಆಂಕೊಲಾಜಿಸ್ಟ್ ಡಾ. ಕೃಷ್ಣಪ್ರಸಾದ್‍ರವರು ಕ್ಯಾನ್ಸರ್ ರೋಗ ಬರಲು ಕಾರಣ, ಅದನ್ನು ತಡೆಗಟ್ಟುವಿಕೆ ಹಾಗೂ ನಿವಾರಣೆಯ ಬಗ್ಗೆ ಅತ್ಯುತ್ತಮ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಡಾ. ಕೃಷ್ಣಪ್ರಸಾದ್‍ರವರನ್ನು ಸಂಘದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್, ನಿರ್ದೇಶಕರುಗಳಾದ ಶ್ರೀ ಚಂದ್ರಹಾಸ ಮರೋಳಿ , ಶ್ರೀ ಗೋಪಾಲ್ ಎಮ್. ಶ್ರೀಮತಿ ಉಮಾವತಿ, ಸಂಘದ […]
Month: October 2022
ಶ್ರೀ ಅಂಬಲಪಾಡಿ ದೇವಾಲಯದ ಆಶ್ರಯದಲ್ಲಿ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯ ವತಿಯಿಂದ ಕನ್ನಡ ಸೇವಾ ಸಂಘ ಪಾವಾಯಿ ಇದರ ಬೆಳ್ಳಿ ಹಬ್ಬ ಹಾಗೂ ಉಡುಪಿ ಜಿಲ್ಲೆಯ ರಜತ ಮಹೋತ್ಸವದ ಗೌರವಾರ್ಥ ಪ್ರಪ್ರಥಮ ಮುಂಬೈ ವಾಪಸಿಗರ ಸಮ್ಮಿಲನ ಕಾರ್ಯಕ್ರಮದಲ್ಲಿ “ತುಳುನಾಡ ರಜತ ಸಿರಿ ರಾಜ್ಯ ಪ್ರಶಸ್ತಿ” ಹಾಗೂ “ತುಳುನಾಡ ರಜತ ಸಂಘ ಸಿರಿ” ಗೌರವ ಪ್ರಶಸ್ತಿ ಪ್ರಧಾನ ಸಮಾರಂಭವು ಶ್ರೀ ಮಹಾಕಾಳಿ ಮತ್ತು ಜನಾರ್ದನ ದೇವಸ್ಥಾನದ ಭವಾನಿ ಮಂಟಪದಲ್ಲಿ ಜರುಗಿತು.
ಈ ಕಾರ್ಯಕ್ರಮದಲ್ಲಿ ಸಹಕಾರ ಕ್ಷೇತ್ರದಲ್ಲಿ ಸಲ್ಲಿಸಿರುವ ವಿಶೇಷ ಸಾಧನೆಗಾಗಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘಕ್ಕೆ “ತುಳುನಾಡ ರಜತ ಸಂಘ ಸಿರಿ” ಗೌರವ ಪ್ರಶಸ್ತಿಯನ್ನು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್‍ರವರಿಗೆ ನೀಡಿ ಗೌರವಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸೇವಾ ಸಂಘ ಪಾವಾಯಿ ಇದರ ಸ್ಥಾಪಕಾಧ್ಯಕ್ಷರಾದ ಡಾ. ಶೇಖರ ಅಜೆಕಾರುರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಮಹಾಕಾಳಿ ಮತ್ತು ಜನಾರ್ದನ ದೇವಾಲಯದ ಆಡಳಿತ ಮೊಕ್ತೇಸರರಾದ ಡಾ. ನಿ. ಬೀ. ವಿಜಯ […]
ಆತ್ಮಶಕ್ತಿ ವಿವಿದೋಧ್ಧೇಶ ಸಹಕಾರಿ ಸಂಘದ 24 ನೇ ಗಂಜಿಮಠ ಶಾಖೆಯು ಗ್ರಾಮ ಪಂಚಾಯತ್ ಕಟ್ಟಡದ ಮೊದಲ ಮಹಡಿಯಲ್ಲಿ 05.10.2022 ಬುಧವಾರ ನೆರವೇರಿತು.
ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದ ಮಂಗಳೂರು ನಗರ ಉತ್ತರ ಕ್ಷೇತ್ರದ ಶಾಸಕ ಡಾ|ಭರತ್ ಶೆಟ್ಟಿ ಮಾತನಾಡಿ , ಆತ್ಮಶಕ್ತಿ ವಿವಿದೋಧ್ಧೇಶ ಸಹಕಾರಿ ಸಂಘ ಮುಂಚೂಣಿಯಲ್ಲಿ ಇದ್ದು ದ.ಕ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಶಾಖೆಗಳನ್ನು ಹೊಂದಿದೆ ಹಾಗೂ ಸಂಘದ ಸಿಬ್ಬಂದಿಗಳ ಸರಳತೆ ಹಾಗೂ ಶಿಸ್ತಿನ ಬಗ್ಗೆ ಶ್ಲಾಘನೆ ಮಾಡಿದರು .ಮುಂದುವರಿದು ಮಾತನಾಡುತ್ತಾ ಸಾಲ ನೀಡುವಿಕೆಯಲ್ಲಿ ಇತರ ಬ್ಯಾಂಕುಗಳಿಗೆ ಹೋಲಿಸಿದರೆ ಸಹಕಾರಿ ಸಂಘಗಳಲ್ಲಿ ಸ್ಪರ್ಧಾತ್ಮಕ ಬೆಳವಣಿಗೆ ಕಾಣಬಹುದು ಎಂದರು. ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ […]