ಸಂಘದ ಅಧ್ಯಕ್ಷರು ಮಾತನಾಡಿ 10 ವರ್ಷದ ಮೊದಲು ಇ-ಸ್ಟಾಂಪಿಂಗ್ ಗಾಗಿ ಆರಂಭವಾದ ಈ ಶಾಖೆಯು ಈಗ ಬ್ಯಾಂಕಿಂಗ್ ಸೇವೆಯಲ್ಲೂ ಅಗ್ರಸ್ಥಾನಿ ಯಾಗಿ ಹೊರಹೊಮ್ಮಿದೆ. ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಶಾಖೆ ಯನ್ನು ತೆರೆಯುವ ಉದ್ದೇಶದೊಂದಿಗೆ , ಬ್ಯಾಂಕಿಂಗ್ ಸೇವೆಯನ್ನು ಆಧುನೀಕರಣಗೊಳಿಸುವ ಇಚ್ಚೆಯನ್ನು ವ್ಯಕ್ತಪಡಿಸಿದರು. ಸಂಘದ ಸರ್ವತೋಮುಖ ಅಭಿವೃದ್ದಿಗೆ ಸಹಕರಿಸಿದ ಸಂಘದ ಆಡಳಿತ ಮಂಡಳಿ, ಹಾಗೂ ಸಿಬ್ಬಂದಿ ವರ್ಗವನ್ನು ಪ್ರಶಂಶಿಸಿದರು. ಸಂಘದ ಗ್ರಾಹಕರಾದ ಶ್ರೀಯುತ ಗಿರಿಯಪ್ಪ ಕುಲಾಯಿ ಇವರು ಇ-ಸ್ಟಾಂಪಿಂಗ್ ವಿತರಣೆಯಲ್ಲಿ ಸಂಘದ ಸಾಧನೆಯನ್ನು ಶ್ಲಾಘಿಸಿದರು. ಹಾಗೂ ಸದಸ್ಯರಾದ […]
Month: November 2022
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ 2021-22ನೇ ಸಾಲಿನ ಸಹಕಾರ ಶಿಕ್ಷಣ ನಿಧಿಯನ್ನು ರಾಜ್ಯ ಸರಕಾರಕ್ಕೆ ನೀಡಲು ರೂ. 2,24,174/- ಮೊತ್ತದ ಚೆಕ್ಕನ್ನು ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ರವರು, ದ.ಕ ಜಿಲ್ಲಾ ಸಹಕಾರಿ ಯೂನಿಯನ್ (ಲಿ.), ಮಂಗಳೂರು ಇದರ ವ್ಯವಸ್ಥಾಪಕರಾದ ಶ್ರೀ ನಾಗಪ್ರಸಾದ್ ಬಿ.ಆರ್ ಇವರ ಮೂಲಕ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಕ್ಕೆ ಸಂಘದ ಪ್ರಧಾನ ಕಛೇರಿಯಲ್ಲಿ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಾದ ಶ್ರೀಮತಿ ಸೌಮ್ಯ ವಿಜಯ್ ಹಾಗೂ ಸಹಾಯಕ ಪ್ರಬಂದಕರಾದ ಶ್ರೀ ವಿಶ್ವನಾಥ್ ಉಪಸ್ಥಿತರಿದ್ದರು.
ಎಸ್. ಪಿ. ವೈ.ಎಸ್. ಎಸ್. – ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ) ಕರ್ನಾಟಕ ಹಾಗೂ ಆತ್ಮ ಶಕ್ತಿ ವಿವಿದೋದ್ದೇಶ ಸಹಕಾರಿ ಸಂಘ ಪಡೀಲ್, ಮಂಗಳೂರು ಇದರ ಸಹಯೋಗದೊಂದಿಗೆ , ನಗರದ ಪಡೀಲ್ ನ ಆತ್ಮ ಶಕ್ತಿ ಸೌಧದಲ್ಲಿ 48 ದಿನಗಳ ಉಚಿತ ಯೋಗ ಶಿಕ್ಷಣ ತರಗತಿಯ ಉದ್ಘಾಟನಾ ಕಾರ್ಯಕ್ರಮ ಜರುಗಿತು.
ಹಿರಿಯ ಶಿಕ್ಷಕರಾದ ಶ್ರೀಮತಿ ಪ್ರಸೀತ ಪ್ರದೀಪ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ನೇತ್ರಾವತಿ ವಲಯ ಸಂಯೋಜಕರಾದ ಶ್ರೀಯುತ ಅಶೋಕ ಕುಮಾರ್ ಜೈನ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮುಖ್ಯ ಅತಿಥಿಗಳಾಗಿ ಆತ್ಮ ಶಕ್ತಿ ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀಯುತ ಚಿತ್ತರಂಜನ್ ಬೋಳಾರ್ ತರಗತಿಯನ್ನು ಉದ್ಘಾಟಿಸಿದರು. ಕಂಕನಾಡಿ ನಗರದ ಸಂಚಾಲಕರಾದ ಈಶ್ವರ್ ಎನ್ ಕೊಟ್ಟಾರಿ ಹಾಗೂ ಇತರ ಪ್ರಮುಖರು ಉಪಸ್ಥಿತರಿದ್ದರು ಶ್ರೀಮತಿ ಮೋಹಿನಿಯವರು ಸ್ವಾಗತಿಸಿದರು. ಶ್ರೀಮತಿ ಲತಾ ಎಸ್ ಹೆಗ್ಡೆಯವರು ನಿರೂಪಣೆ ಮಾಡಿದರು, ಕಂಕನಾಡಿ ನಗರದ ಯೋಗಬಂಧುಗಳು ತಮ್ಮ […]
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಸ್ಟೇಟ್‍ಬ್ಯಾಂಕ್ ಶಾಖೆಯ 7ನೇ ವಾರ್ಷಿಕೋತ್ಸವ ಹಾಗೂ ಗ್ರಾಹಕರ ಸಭೆಯು ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ರವರ ಅಧ್ಯಕ್ಷತೆಯಲ್ಲಿ ಜರುಗಿತು. ಈ ಕಾರ್ಯಕ್ರಮವನ್ನು ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ರವರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.
ಉದ್ಘಾಟನೆ ಮಾತುಗಳನ್ನಾಡಿದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ರವರು ಸಂಘದ ಬೆಳವಣಿಗೆ ಹಾಗೂ ಉತ್ತಮ ಸೇವೆಯಿಂದ ಇಂದು ಆತ್ಮಶಕ್ತಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಸಂಘದ ಅಧ್ಯಕ್ಷರಾದ ಶ್ರೀ ಚಿತ್ತರಂಜನ್ ಬೋಳಾರ್ ರವರು ಮಾತನಾಡಿ ಸಂಘದ ಸರ್ವತೋಮುಖ ಬೆಳವಣಿಗೆಯಲ್ಲಿ ಸಂಘದ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ ಮತ್ತು ಎಲ್ಲಾ ಸದಸ್ಯರ ಸಹಕಾರದೊಂದಿಗೆ ಸತತವಾಗಿ ಸಂಘವು ಹೆಚ್ಚಿನ ಲಾಭಗಳಿಸಿ ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯವಾಗಿದೆ, ಸದರಿ ಶಾಖೆಯಲ್ಲಿ ಇ-ಸ್ಟಾಂಪ್ ಸೇವೆಯು ಸಂಜೆ 7 ಗಂಟೆಯವರೆಗೆ ಲಭ್ಯವಿದ್ದು, ಸದಸ್ಯರು […]