ಸಹಕಾರಿ ಸಂಸ್ಥೆಗಳು ಗುಣಮಟ್ಟದ ಸೇವೆಯಿಂದಲೇ ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಿಸಲು ಶ್ರಮಿಸುತ್ತಿದೆ. ಸಹಕಾರಿ ಸಂಸ್ಥೆಗಳು ಎದುರಿಸುತ್ತಿರುವ ಅನೇಕ ತಾಂತ್ರಿಕ ಸಮಸ್ಯೆಗಳಿಗೆ ಸರಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು ಮತ್ತು ಅವುಗಳ ಪ್ರಗತಿಗೆ ಪೂರಕ ಸಹಕಾರ ನೀಡಲು ಗಮನ ಹರಿಸಬೇಕು ಎಂದು ಮಾಜಿ ಶಾಸಕ ಕೆ ವಸಂತ ಬಂಗೇರ ಹೇಳಿದರು.

ಮಂಗಳೂರಿನ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ 27ನೇ ಶಾಖೆಯನ್ನು ಮಡಂತ್ಯಾರಿನ ಶ್ರೀ ದುರ್ಗಾ ಕಾಂಪ್ಲೆಕ್ಸ್ ನಲ್ಲಿ ಉದ್ಟಾಟಿಸಿ ಮಾತನಾಡಿದರು. ಸಂಘವು ದಶಮಾನೋತ್ಸವ ಆಚರಿಸುತ್ತಿರುವ ವೇಳೆ 27ನೇ ಶಾಖೆ ತೆರೆದು ಜನಮನ್ನಣೆ ಗಳಿಸಿದೆ. ಸಿಬ್ಬಂದಿಯ ಪ್ರಾಮಾಣಿಕ ಸೇವೆ ಗ್ರಾಹಕರಲ್ಲಿ ವಿಶ್ವಾಸ ಮೂಡಿಸುವಂತೆ ಮಾಡಿದೆ. ಭವಿಷ್ಯದಲ್ಲಿ ಇನ್ನಷ್ಟು ಶಾಖೆ ತೆರೆಯುವ ಶಕ್ತಿ ನೀಡಲಿ ಎಂದರು. ಗಣಕ ಯಂತ್ರ ಉದ್ಟಾಟಿಸಿದ ವಿಧಾನ ಪರಿಷತ್ ಸದಸ್ಯ ಕೆ ಪ್ರತಾಪ ಸಿಂಹ ನಾಯಕ್ ಮಾತನಾಡಿ, ಈ ಸಂಘವು ತನ್ನ ಸೇವಾ ತತ್ಪರತೆಯಿಂದ ಭವಿಷ್ಯದ ನಂಬಿಕಾರ್ಹ […]

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ 26ನೇ ಶಾಖೆ ಕೊಟ್ಟಾರದ ನಾರಾಯಣಗುರು ಕಾಂಪ್ಲೆಕ್ಸ್ನಲ್ಲಿ ಉದ್ಘಾಟನೆಗೊಂಡಿತು. ಮೇಯರ್ ಜಯಾನಂದ ಅಂಚನ್ ಅವರು ಕಚೇರಿ ಉದ್ಘಾಟಿಸಿ ಮಾತನಾಡಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘ ಜಿಲ್ಲೆಯಲ್ಲಿ ಮಾತ್ರವಲ್ಲದೆ ರಾಜ್ಯದಲ್ಲೂ ಹೆಸರು ಪಡೆದಿದೆ. ಸಂಘ ತನ್ನ ವ್ಯಾಪ್ತಿ ಇನ್ನಷ್ಟು ವಿಸ್ತರಿಸಿಕೊಂಡು ದೇಶದಲ್ಲಿದೆ ಹೆಸರು ಪಡೆಯುವಂತಾಗಲಿ ಎಂದು ಹಾರೈಸಿದರು.

ಕದ್ರಿ ಶ್ರೀ ಮಂಜುನಾಥ ಕ್ಷೇತ್ರದ ತಂತ್ರಿಗಳಾದ ದೇರೆಬೈಲು ವೇದಮೂರ್ತಿ ವಿಠಲ ದಾಸ ತಂತ್ರಿಯವರು ದೀಪ ಬೆಳಗಿಸಿ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶ ಮತ್ತು ಜೀವಿತಾವಧಿಯ ಮಾರ್ಗದರ್ಶನದ ಮಾತುಗಳು ಆತ್ಮಶಕ್ತಿಗೆ ಇನ್ನಷ್ಟು ಶಕ್ತಿ ಕೊಟ್ಟಿದೆ ಎಂದರು. ಮಾಜಿ ಮೇಯರ್, ಮಾಜಿ ಮೇಯರ್ ಪಾಲಿಕೆ ಸದಸ್ಯ ಎಂ ಶಶಿಧರ ಹೆಗ್ಡೆ ಮಾತನಾಡಿ ದಕ್ಷಿಣ ಕನ್ನಡ ಜಿಲ್ಲೆ ಬ್ಯಾಂಕಿAಗ್ ಮಾತ್ರವಲ್ಲದೆ ಸಹಕಾರ ಕ್ಷೇತ್ರದ ತವರೂರು ಹೌದು. ಇಂದು ರಾಷ್ಟ್ರೀಕೃತ ಬ್ಯಾಂಕುಗಳಿಗೆ ಪೈಪೋಟಿ ನೀಡುತ್ತಾ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರ ವ್ಯಾಪಿಸುತ್ತಿದೆ. ಆತ್ಮಶಕ್ತಿ […]