ಕದ್ರಿ ಶ್ರೀ ಮಂಜುನಾಥ ಕ್ಷೇತ್ರದ ತಂತ್ರಿಗಳಾದ ದೇರೆಬೈಲು ವೇದಮೂರ್ತಿ ವಿಠಲ ದಾಸ ತಂತ್ರಿಯವರು ದೀಪ ಬೆಳಗಿಸಿ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶ ಮತ್ತು ಜೀವಿತಾವಧಿಯ ಮಾರ್ಗದರ್ಶನದ ಮಾತುಗಳು ಆತ್ಮಶಕ್ತಿಗೆ ಇನ್ನಷ್ಟು ಶಕ್ತಿ ಕೊಟ್ಟಿದೆ ಎಂದರು. ಮಾಜಿ ಮೇಯರ್, ಮಾಜಿ ಮೇಯರ್ ಪಾಲಿಕೆ ಸದಸ್ಯ ಎಂ ಶಶಿಧರ ಹೆಗ್ಡೆ ಮಾತನಾಡಿ ದಕ್ಷಿಣ ಕನ್ನಡ ಜಿಲ್ಲೆ ಬ್ಯಾಂಕಿAಗ್ ಮಾತ್ರವಲ್ಲದೆ ಸಹಕಾರ ಕ್ಷೇತ್ರದ ತವರೂರು ಹೌದು. ಇಂದು ರಾಷ್ಟ್ರೀಕೃತ ಬ್ಯಾಂಕುಗಳಿಗೆ ಪೈಪೋಟಿ ನೀಡುತ್ತಾ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರ ವ್ಯಾಪಿಸುತ್ತಿದೆ. ಆತ್ಮಶಕ್ತಿ ಸಹಕಾರ ಸಂಘ ಕೇವಲ ಆರ್ಥಿಕ ಕ್ಷೇತ್ರದಲ್ಲಿ ಮಾತ್ರವಲ್ಲದೆ ಸಾಮಾಜಿಕ ಕ್ಷೇತ್ರದಲ್ಲಿಯೂ ತೊಡಗಿಸಿಕೊಳ್ಳುವ ಮೂಲಕ ಗುರುತಿಸಿಕೊಂಡಿದೆ ಎಂದರು.
ಆತ್ಮಶಕ್ತಿ ವಿವಿಧೋದ್ದೇಶ ಸಹಕರಿ ಸಂಘದ ಅಧ್ಯಕ್ಷರಾದ ಚಿತ್ತರಂಜನ್ ಬೋಳಾರ್ ಮಾತನಾಡಿ 2012ರಲ್ಲಿ ಆರಂಭವಾದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಹತ್ತು ವರ್ಷಗಳಲ್ಲಿ 26 ಶಾಖೆಗಳನ್ನು ತೆರೆದಿದ್ದು ಶೀಘ್ರದಲ್ಲಿ ಇನ್ನೂ ನಾಲ್ಕು ಶಾಖೆಗಳನ್ನು ಆರಂಭಿಸುವ ಮೂಲಕ 30 ಶಾಖೆಗಳನ್ನು ಹೊಂದಲಿದೆ. ಶೇಕಡ ೯೫ರಷ್ಟುç ಮಹಿಳಾ ಸಿಬ್ಬಂದಿಯ ಮೂಲಕ ಗ್ರಾಹಕರಿಗೆ ಯಶಸ್ವಿ ಸೇವೆ ನೀಡುತ್ತಿದೆ. ರಾಜ್ಯ ಮಾತ್ರವಲ್ಲದೆ ರಾಷ್ಟçಮಟ್ಟದಲ್ಲಿಯೂ ಅತ್ಯುತ್ತಮ ಸಹಕಾರ ಸಂಘ ಎನ್ನುವ ಹಿರಿಮೆಗೆ ಪಾತ್ರವಾಗಿದೆ ಎಂದರು.
ಪಾಲಿಕೆ ಸದಸ್ಯರಾದ ಜಯಲಕ್ಷ್ಮಿ ಶೆಟ್ಟಿ, ಕಿರಣ್ ಕುಮಾರ್ ಕೋಡಿಕಲ್, ಮಮತಾ ಎಂ, ಸಂಘದ ಉಪಾಧ್ಯಕ್ಷರಾದ ನೇಮಿರಾಜ್ ಪಿ, ನಿರ್ದೇಶಕರಾದ ಜಿ ಪರಮೇಶ್ವರ , ಆನಂದ ಎಸ್ ಕೊಂಡಣ, ಸೀತಾರಾಮ ಎನ್, ರಮನಾಥ ಸನಿಲ್, ಮುದ್ದು ಮೂಡ ಬೆಳ್ಳೆ, ದಿವಾಕರ ಬಿ ಪಿ, ಗೋಪಾಲ್ ಎಂ , ಉಮಾವತಿ, ಸಿಇಓ ಸೌಮ್ಯ ವಿಜಯ್ ,ಆತ್ಮಶಕ್ತಿ ಪತ್ರಿಕೆ ಪ್ರಧಾನ ಸಂಪಾದಕ ವಾಮನ್ ಕೆ. ಉಪಸ್ಥಿತರಿದ್ದರು. ಆತ್ಮಶಕ್ತಿ ವಿವಿಧೋದ್ದೇಶ ಸಹಕರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಸ್ವಾಗತಿಸಿ ಪ್ರಸ್ತಾವನೆಗೈದರು .