ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಪ್ರಕಾಶನ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ.) ನ ಅಧ್ಯಕ್ಷರಾದ ಶ್ರೀ ವಾಮನ್ ಕೆ. ಕಾರ್ಯಕ್ರಮವನ್ನು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿ ಮಾತನಾಡಿ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಬ್ಯಾಂಕಿಂಗ್ ಸೇವೆಯೊಂದಿಗೆ ವೈದ್ಯಕೀಯ ಸೇವೆಯನ್ನು ಮಾಡುತ್ತಿರುವುದು ತುಂಬಾ ಒಳ್ಳೆಯ ಕೆಲಸವಾಗಿದೆ. ಜನರು ಇನ್ನಷ್ಟು ಹೆಚ್ಚಿನ ಪ್ರಯೋಜನವನ್ನು ಪಡೆಯುವಂತಾಗಲಿ ಎಂದು ಶುಭ ಹಾರೈಸಿದರು. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ಇವರು ಮಾತನಾಡಿ ಸಂಘವು ಹಣಕಾಸಿನ ವ್ಯವಹಾರದೊಂದಿಗೆ ಸಾಮಾಜಿಕ ಸೇವೆಗೂ […]
Month: February 2023
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಮಂಗಳೂರು ಇದರ ದಶಮಾನೋತ್ಸವದ ಅಂಗವಾಗಿ ನಡೆದ ಗ್ರಾಹಕ ಸಭೆ ಹಾಗೂ ಸಿಬ್ಬಂದಿಗಳಿಗೆ ಸಾಧನಾ ಪ್ರಶಸ್ತಿ ವಿತರಣೆ ಕಾರ್ಯಕ್ರಮವು ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ರವರ ಅಧ್ಯಕ್ಷತೆಯಲ್ಲಿ ಸಂಘದ ಕೇಂದ್ರ ಕಛೇರಿ ಪಡೀಲ್ ಮಂಗಳೂರು ಇಲ್ಲಿ ಜರಗಿತು. ಕಾರ್ಯಕ್ರಮವನ್ನು ಸಂಘದ ಸದಸ್ಯರುಗಳಾದ ಶ್ರೀ ಮಾಧವ ಸುವರ್ಣ, ಶ್ರೀ ಕೃಷ್ಣಪ್ಪ ಗೌಡ ಪಡ್ಡಂಬೈಲ್, ಶ್ರೀ ಯಶವಂತ ಪೂಜಾರಿ, ಶ್ರೀ ಕೃಷ್ಣಪ್ಪ ಪೂಜಾರಿ ಎಮ್ ಹಾಗೂ ಶ್ರೀ ಗೋಪಾಲ ಇವರುಗಳು ದ್ವೀಪ ಪ್ರಜ್ವಲನೆ ಮಾಡುವುದರ ಮೂಲಕ ಚಾಲನೆ ನೀಡಿದರು.
ಸಂಘದ ಹಿರಿಯ ಸದಸ್ಯರಾದ ಶ್ರೀ ಕೃಷ್ಣಪ್ಪ ಪೂಜಾರಿ ಎಮ್. ಹಾಗೂ ಶ್ರೀ ಟಿಪೇಶ್ ಇವರು ಮಾತನಾಡಿ ಸಂಘದ ವ್ಯವಹಾರದ ಪ್ರಗತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸಂಘವು ಇನ್ನೂ ಹೆಚ್ಚು ವ್ಯವಹಾರವನ್ನು ವಿಸ್ತಾರ ಮಾಡಿ ಹೆಚ್ಚಿನ ಶಾಖೆಗಳನ್ನು ತೆರೆದು ಅಭಿವೃದ್ಧಿ ಹೊಂದುವಂತಾಗಲಿ ಹಾಗೂ ಸಂಘದ ಸಿಬ್ಬಂದಿ ವರ್ಗದ ಉತ್ತಮ ಸೇವೆಯನ್ನು ಹಾಗೂ ನಿರ್ದೇಶಕ ಮಂಡಳಿಯ ಕಾರ್ಯವೈಖರಿಯನ್ನು ಶ್ಲಾಘಿಸಿ ಶುಭ ಹಾರೈಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್‍ರವರು ಸಂಘದ ಬೆಳವಣಿಗೆಗೆ ಸಹಕಾರ […]
ಆತ್ಮಶಕ್ತಿ ಕರಾವಳಿಯಲ್ಲಿ ಮಾತ್ರವಲ್ಲದೆ ಇಡೀ ದೇಶದಲ್ಲಿ ಒಂದು ಮಾದರಿ ಸಂಸ್ಥೆ. ಆದ್ದರಿಂದ ಸಂಸ್ಥೆಯ ಬಗ್ಗೆ ಆರಂಭದಿಂದಲೂ ಗೌರವ ಭಾವನೆಯಿದೆ. ಮುಂದಿನ ದಿನಗಳಲ್ಲಿಯೂ ಉತ್ತಮ ಕೆಲಸಗಳನ್ನು ಮುಂದುವರಿಸಬೇಕು ಎಂದು ಕೇಂದ್ರದ ಮಾಜಿ ವಿತ್ತ ಸಚಿವ ಶ್ರೀ ಬಿ. ಜನಾರ್ಧನ ಪೂಜಾರಿ ಹೇಳಿದರು.
ಪಡೀಲ್‍ನ ಆತ್ಮಶಕ್ತಿ ಸೌಧÀದಲ್ಲಿ ರವಿವಾರ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ದಶ ಸಂಭ್ರಮದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಆತ್ಮಶಕ್ತಿಯಿದ್ದರೆ ಮಾತ್ರ ಮನುಷ್ಯ ಜೀವನದಲ್ಲಿ ಮುಂದೆ ಬರಲು ಸಾಧ್ಯ ಆದ್ದರಿಂದ ಹೆಸರಿಗೆ ಪೂರಕವಾಗಿ ಸಂಸ್ಥೆ ಜನರ ಪಾಲಿಗೂ ಆತ್ಮಶಕ್ತಿಯಾಗಿದೆ ಎಂದು ಹೇಳಿದರು. ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರು ಸಂಸ್ಥೆ ವತಿಯಿಂದ ಪಡೀಲ್‍ನಲ್ಲಿ ನೂತನವಾಗಿ ನಿರ್ಮಿಸಲಾದ ಬಸ್ ತಂಗುದಾಣ ಉದ್ಘಾಟಿಸಿದರು. ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದ ಅಧ್ಯಕ್ಷರಾದ ಶ್ರೀ ಚಿತ್ತರಂಜನ್ ಕೆ. […]
ಗ್ರಾಮೀಣ ಪ್ರದೇಶಗಳು ಈಗ ಬೃಹತ್ ವೇಗದಲ್ಲಿ ಮತ್ತು ಪ್ರತಿಯೊಂದು ಅಂಶದಲ್ಲೂ ಅಭಿವೃದ್ಧಿ ಹೊಂದುತ್ತಿವೆ. ಸಹಕಾರಿ ಸಂಘಗಳು ಇದರಲ್ಲಿ ಮಹತ್ತರ ಪಾತ್ರ ವಹಿಸುತ್ತಿವೆ. ಗ್ರಾಮೀಣ ಅಭಿವೃದ್ಧಿಯನ್ನು ಬೆಂಬಲಿಸಲು, ಗ್ರಾಮೀಣ ಪ್ರದೇಶದಲ್ಲಿ ಸಹಕಾರ ಸಂಘವು ಪರಸ್ಪರ ಸಹಾಯ ಮತ್ತು ಸ್ವ-ಸಹಾಯದ ಕಲ್ಪನೆಯನ್ನು ಅನುಸರಿಸುತ್ತದೆ. ಆತ್ಮಶಕ್ತಿ ಸಹಕಾರಿ ಸಂಘದ ಸೇವೆ ಬ್ಯಾಂಕಿಗೆ ಮಾತ್ರ ಸೀಮಿತವಲ್ಲದೇ ಸಾಮಾಜಿಕವಾಗಿ ಮುಂದುವರಿದಿದೆ ಎಂದು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಹೇಳಿದರು.
ಅವರು ಅಳದಂಗಡಿಯಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ 28 ನೇ ನೂತನ ಶಾಖೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು 2012 ರ ಜನವರಿ 30 ರಂದು ನಮ್ಮ ಸಂಘದ ಪ್ರಥಮ ಶಾಖೆಯನ್ನು ಮಾಜಿ ಕೇಂದ್ರ ಸಚಿವರು, ಹಿರಿಯರಾದ ಜನಾರ್ದನ ಪೂಜಾರಿಯವರು ಉದ್ಘಾಟಿಸಿ ಇಂದು ಅಲ್ಪಾವಧಿಯಲ್ಲೇ ಉಭಯ ಜಿಲ್ಲೆಯಲ್ಲಿ ಜನ ಉಪಯೋಗಕ್ಕಾಗಿ 28 ಶಾಖೆಗಳನ್ನು ಆರಂಭಿಸಿದ್ದೇವೆ. ಇದೆಲ್ಲಾ ಪ್ರತಿಯೋರ್ವರ ಶ್ರಮದಿಂದ ನಡೆದಿದೆ ಎಂದರು. ನೂತನ ಶಾಖೆಯನ್ನು ಅಳದಂಗಡಿ ಗ್ರಾ.ಪಂ ಅಧ್ಯಕ್ಷೆ ಸೌಮ್ಯ ಹರಿಪ್ರಸಾದ್ ಉದ್ಘಾಟಿಸಿ ಮಾತನಾಡಿ ನಮ್ಮ […]