ಆತ್ಮಶಕ್ತಿ ಕರಾವಳಿಯಲ್ಲಿ ಮಾತ್ರವಲ್ಲದೆ ಇಡೀ ದೇಶದಲ್ಲಿ ಒಂದು ಮಾದರಿ ಸಂಸ್ಥೆ. ಆದ್ದರಿಂದ ಸಂಸ್ಥೆಯ ಬಗ್ಗೆ ಆರಂಭದಿಂದಲೂ ಗೌರವ ಭಾವನೆಯಿದೆ. ಮುಂದಿನ ದಿನಗಳಲ್ಲಿಯೂ ಉತ್ತಮ ಕೆಲಸಗಳನ್ನು ಮುಂದುವರಿಸಬೇಕು ಎಂದು ಕೇಂದ್ರದ ಮಾಜಿ ವಿತ್ತ ಸಚಿವ ಶ್ರೀ ಬಿ. ಜನಾರ್ಧನ ಪೂಜಾರಿ ಹೇಳಿದರು.


ಪಡೀಲ್‍ನ ಆತ್ಮಶಕ್ತಿ ಸೌಧÀದಲ್ಲಿ ರವಿವಾರ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ದಶ ಸಂಭ್ರಮದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಆತ್ಮಶಕ್ತಿಯಿದ್ದರೆ ಮಾತ್ರ ಮನುಷ್ಯ ಜೀವನದಲ್ಲಿ ಮುಂದೆ ಬರಲು ಸಾಧ್ಯ ಆದ್ದರಿಂದ ಹೆಸರಿಗೆ ಪೂರಕವಾಗಿ ಸಂಸ್ಥೆ ಜನರ ಪಾಲಿಗೂ ಆತ್ಮಶಕ್ತಿಯಾಗಿದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರು ಸಂಸ್ಥೆ ವತಿಯಿಂದ ಪಡೀಲ್‍ನಲ್ಲಿ ನೂತನವಾಗಿ ನಿರ್ಮಿಸಲಾದ ಬಸ್ ತಂಗುದಾಣ ಉದ್ಘಾಟಿಸಿದರು.
ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದ ಅಧ್ಯಕ್ಷರಾದ ಶ್ರೀ ಚಿತ್ತರಂಜನ್ ಕೆ. ಅವರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಸಂಘದ ವತಿಯಿಂದ ನೀರುಮಾರ್ಗದಲ್ಲಿ ಪುನರ್ ನಿರ್ಮಿತ ಮನೆಯ ಕೀಲಿಕೈ ಹಸ್ತಾಂತರಿಸಿ ಮಾತನಾಡಿ, ಆತ್ಮಶಕ್ತಿಯು ಯಶಸ್ವಿಯಾಗಿ ಮುನ್ನಡೆಯುವಲ್ಲಿ ಮೂಲ ಕಾರಣೀಕರ್ತರು ಸಂಸ್ಥೆಯ ಪದಾಧಿಕಾರಿಗಳು. ಅಧ್ಯಕ್ಷರಾದ ಚಿತ್ತರಂಜನ್ ಬೋಳಾರ್ ಅವರು ಎಲ್ಲರನ್ನೂ ಒಟ್ಟು ಸೇರಿಸಿ ಸಂಸ್ಥೆಯನ್ನು ಬೆಳೆಸಿದ್ದಾರೆ. ಸಂಸ್ಥೆ ಶೀಘ್ರ 50 ಶಾಖೆಗಳನ್ನು ಆರಂಭಿಸುವಂತಾಗಲಿ ಎಂದರು.
ಅಶಕ್ತರಿಗೆ ಸಹಾಯಧನ ವಿತರಣೆ ಮಾಡಿದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿಯಾದ ಶ್ರೀ ಪದ್ಮರಾಜ್ ಆರ್. ಮಾತನಾಡಿ, ಕಳೆದ ಹತ್ತು ವರ್ಷಗಳಲ್ಲಿ ಸಂಸ್ಥೆ ಬೆಳೆದು ಬಂದ ಹಾದಿ ಇತರರಿಗೆ ಪ್ರೇರಣೆಯಾಗಿದೆ. ಪ್ರಸ್ತುತ ಮುಖ್ಯವಾಹಿನಿಯಲ್ಲಿರುವ ಬಿಲ್ಲವ ಸಂಸ್ಥೆಗಳ ಸಾಲಿಗೆ ಆತ್ಮಶಕ್ತಿಯೂ ಸೇರ್ಪಡೆಯಾಗಿದೆ. ಸಂಸ್ಥೆಯ ಯಶಸ್ವಿನ ವೇಗ ನಾಗಾಲೋಟದಲ್ಲಿ ಮುಂದುವರಿಯಲಿ ಎಂದರು.
ಈ ದಶ ಸಂಭ್ರಮದ ಕಾರ್ಯಕ್ರಮದಲ್ಲಿ ವಿಶೇಷವಾಗಿ ಸಂಘದ ಸಿಬ್ಬಂಧಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ‘ದೇಯಿ ಬೈದೆತಿ’ ನಾಟ್ಯರೂಪಕ, ಉಭಯ ಜಿಲ್ಲೆಯ ಸಹಕಾರಿ ಸಂಘದ ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂಧಿ ವರ್ಗದವರಿಗೆ ನಲಿಪು-ತೆಲಿಪು 2023, ಸಾಂಸ್ಕøತಿಕ ಸ್ಪರ್ಧೆ ಹಾಗೂ ಯಕ್ಷಗಾನದ ಖ್ಯಾತ ಭಾಗವತರಾದ ರವಿಚಂದ್ರ ಕನ್ನಡಿಕಟ್ಟೆ ಬಳಗದವರಿಂದ ಯಕ್ಷಗಾನ-ನಾಟ್ಯ ವೈಭವ ಕಾರ್ಯಕ್ರಮವು ಜರುಗಿತು.
ದಶ ಸಂಭ್ರಮದ ಆತ್ಮಾಭಿವಂದನೆ ಸಮಾರಂಭದಲ್ಲಿ ತುಳುನಾಡಿನ ಖ್ಯಾತ ಕಲಾವಿದರಾದ ರಾಜಶೇಖರ್ ಕೋಟ್ಯಾನ್, ಚಲನಚಿತ್ರ ನಟ, ರಿಚರ್ಡ್ ಕ್ಯಾಸ್ಟಲಿನೋ, ಚಲನಚಿತ್ರ ನಟರು, ಶ್ರೀಮತಿ ರೋಹಿನಿ ಜಗರಾಮ್, ಚಲನಚಿತ್ರ ನಟಿ, ಶ್ರೀಮತಿ ಜಯಂತಿ ಜೆ. ಯಾನೆ ಜಯಶೀಲ, ಚಲನಚಿತ್ರ ನಟಿ, ಲಕ್ಷ್ಮಣ್‍ಕುಮಾರ್ ಮಲ್ಲೂರು, ಚಲನಚಿತ್ರ ನಟರು, ಪುಷ್ಕಳ್ ಕುಮಾರ್ ತೋನ್ಸೆ ಸಂಗೀತ ಕಲಾವಿದರು-ಹರಿದಾಸರು, ಸೀತಾರಾಮ್ ಕುಮಾರ್ ಕಟೀಲ್,ಯಕ್ಷಗಾನ ಕಲಾವಿದರು, ನವೀನ್. ಡಿ. ಪಡೀಲ್, ಚಲನಚಿತ್ರ ನಟ ಹಾಗೂ ರಂಗಭೂಮಿ ಕಲಾವಿದರು, ರವಿಚಂದ್ರ ಕನ್ನಡಿಕಟ್ಟೆ ಯಕ್ಷಗಾನ ಭಾಗವತರು ಇವರಿಗೆ ಆತ್ಮಾಭಿವಂದನೆ ಗೌರವ ಮತ್ತು ಎಚ್.ಡಿ.ಸಿ.ಎಂ. 36ನೇ ಅಧಿವೇಶನದ ರ್ಯಾಂಕ್ ವಿಜೇತರಿಗೆ ಚಿನ್ನ ಮತ್ತು ಬೆಳ್ಳಿಯ ಪದಕ ಪ್ರಧಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಚಿತ್ರರಂಗದ ಮಹಾಸಾಧಕ, ಕಲಾತಪಸ್ವಿ ಹಾಗೂ ಬಹುಭಾಷಾ ಚಲನಚಿತ್ರ ನಟರಾದ ಸುಮನ್ ತಲ್ವಾರ್ ಇವರನ್ನು ಸಂಘದ ವತಿಯಿಂದ ಸನ್ಮಾನಿಸುವ ಮೂಲಕ ಗೌರವಿಸಲಾಯಿತು.
ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಿ. ವೇದವ್ಯಾಸ್ ಕಾಮತ್, ಉತ್ತರ ಉಪವಿಭಾಗದ ಪೋಲೀಸ್ ಸಹಾಯಕ ಆಯುಕ್ತರಾದ ಎಸ್. ಮಹೇಶ್ ಕುಮಾರ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷರಾದ ದಯಾನಂದ್ ಕತ್ತಲ್‍ಸಾರ್, ತುಳು ಚಲನಚಿತ್ರ ನಟ ರಾಹುಲ್‍ಅಮೀನ್, ಮ.ನ.ಪಾ ಸದಸ್ಯೆ ರೂಪಶ್ರೀ ಪೂಜಾರಿ, ನೀರುಮಾರ್ಗ ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಸತೀಶ್ ಅಂಚನ್, ಕಂಕನಾಡಿ ಬಿಲ್ಲವ ಸೇವಾ ಸಮಾಜ ಸಂಘದ ಅಧ್ಯಕ್ಷ ಭರತೇಶ್ ಅಮೀನ್, ಪ್ರೀಮಿಯರ್ ಅಪಾರ್ಟ್‍ಮೆಂಟ್ ಅಸೋಶಿಯೇಶನ್‍ನ ಅಧ್ಯಕ್ಷರಾದ ಸದಾಶಿವ ಭಂಡಾರಿ, ಸಿಇಒ ಸೌಮ್ಯಾ ವಿಜಯ್ ಉಪಸ್ಥಿತರಿದ್ದರು.
ನಿರ್ದೇಶಕರಾದ ಜಿ. ಪರಮೇಶ್ವರ ಪೂಜಾರಿ, ಆನಂದ ಎಸ್. ಕೊಂಡಾಣ, ಸೀತಾರಾಮ್ ಎನ್., ರಮನಾಥ್ ಸನಿಲ್, ಚಂದ್ರಹಾಸ್ ಮರೋಳಿ, ಮುದ್ದು ಮೂಡುಬೆಳ್ಳೆ, ದಿವಾಕರ ಪಿ. ಬಿ., ಗೋಪಾಲ ಎಂ., ಚಂದ್ರಾವತಿ, ಉಮಾವತಿ ಭಾಗವಹಿಸಿದ್ದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಸ್ವಾಗತಿಸಿದರು. ಬ್ರಹ್ಮಶ್ರೀ ನಾರಾಯಣಗುರು ಪ್ರಕಾಶನ ಮತ್ತು ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ವಾಮನ್ ಕೆ. ಪ್ರಾಸ್ತಾವಿಸಿದರು. ಉಪಾಧ್ಯಕ್ಷ ನೇಮಿರಾಜ್ ಪಿ. ವಂದಿಸಿದರು. ದಿನೇಶ್ ಸುವರ್ಣರಾಯಿ ಕಾರ್ಯಕ್ರಮವನ್ನು ನಿರೂಪಿಸಿದರು.