ಅವರು ಎ. 30 ರಂದು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ 30ನೇ ಶಾಖೆಯನ್ನು ಮಾಣಿ ಕೊಡಾಜೆ ಎ.ಆರ್.ಕಾಂಪ್ಲೆಕ್ಸ್‍ನಲ್ಲಿ ಉದ್ಘಾಟಿಸಿ, ಮಾತನಾಡಿದರು.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಅಧ್ಯಕ್ಷತೆ ವಹಿಸಿ, ಸಂಘವು ನಿರ್ದೇಶಕರ ಮತ್ತು ಸದಸ್ಯರ ಸಹಕಾರದಲ್ಲಿ ಪ್ರಗತಿ ಸಾಧಿಸಿದೆ. ಸಿಬಂದಿಗಳ ಉತ್ತಮ ಸೇವೆ ಗ್ರಾಹಕರಿಗೆ ಸಂತೃಪ್ತಿಯನ್ನು ಕೊಟ್ಟಿದೆ. ನಾಲ್ಕೈದು ಗ್ರಾಮಗಳ ಸಂಗಮವಾಗಿರುವ ಮಾಣಿಯಲ್ಲಿ 30ನೇ ಶಾಖೆ ತೆರೆಯುವ ಕನಸು ನನಸಾಗಿದೆ ಎಂದು ಹೇಳಿದರು.
ಕ್ಯಾಂಪ್ಕೋ ಮಾಜಿ ಅಧ್ಯಕ್ಷರಾದ ಪದ್ಮನಾಭ ಕೊಂಕೋಡಿ ಮಾತನಾಡಿ, ಸಹಕಾರಿ ಸಂಘಗಳು ಹೊಸತನವನ್ನು ಅಳವಡಿಸಿಕೊಳ್ಳಬೇಕು. ಆತ್ಮಶಕ್ತಿ ಸಂಘದ ಅಧ್ಯಕ್ಷರ ತಂಡ ಕಾಲಕ್ಕನುಗುಣವಾಗಿ ನಾವೀನ್ಯವನ್ನು ಅಳವಡಿಸಿಕೊಂಡು ಪ್ರಗತಿಯತ್ತ ದಾಪುಗಾಲು ಹಾಕಿದೆ ಎಂದು ಶ್ಲಾಘಿಸಿದರು.
ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಆಡಳಿತ ಮೊಕ್ತೇಸರಾದ ಶ್ರೀ ಸಚಿನ್ ರೈ ಮಾಣಿಗುತ್ತು ಅವರು ಗಣಕೀಕೃತ ವ್ಯವಸ್ಥೆಯನ್ನು ಹಾಗೂ ಮಾಣಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಸಲಹಾ ಸಮಿತಿ ಅಧ್ಯಕ್ಷರಾದ ಶ್ರೀ ನಾರಾಯಣ ಸಾಲಿಯಾನ್ ಭದ್ರತಾಕೋಶ ಉದ್ಘಾಟಿಸಿದರು. ಮಾಣಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷರಾದ ಶ್ರೀ ಸುರೇಶ್, ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷರಾದ ಶ್ರೀ ರಾಜೇಶ್ ಬಿ., ಮಾಣಿ ಘಟಕ ಅಧ್ಯಕ್ಷರಾದ ಶ್ರೀ ರವಿಚಂದ್ರ ಹಾಗೂ ಶ್ರೀ ಸೋಮಪ್ಪ ಪೂಜಾರಿ,ಶ್ರೀ ದಿವಾಕರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಮ್ಯಾ ವಿಜಯ್, ಕಟ್ಟಡ ಮಾಲಕ ರಝಾಕ್, ನಿರ್ದೇಶಕರಾದ ಶ್ರೀ ಜಿ.ಪರಮೇಶ್ವರ ಪೂಜಾರಿ, ಶ್ರೀಮತಿ ರಮಾನಾಥ್ ಸನಿಲ್,ಶ್ರೀ ಗೋಪಾಲ್ ಎಂ., ಶ್ರೀಮತಿ ಚಂದ್ರಾವತಿ, ಶ್ರೀಮತಿ ಉಮಾವತಿ, ಮಾಣಿ ಶಾಖಾಧಿಕಾರಿ ಶ್ರೀಮತಿ ಅಕ್ಷತಾ ಕೆ. ಮತ್ತಿತರರು ಉಪಸ್ಥಿತರಿದ್ದರು.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಪ್ರಸ್ತಾವಿಸಿ, ಸ್ವಾಗತಿಸಿದರು. ಉಪಾಧ್ಯಕ್ಷರಾದ ಶ್ರೀ ನೇಮಿರಾಜ್ ಪಿ. ವಂದಿಸಿದರು.
ಮಾನವ ಸಂಪನ್ಮೂಲ ಅಧಿಕಾರಿ ಶ್ರೀಮತಿ ದೀಪಿಕಾ ಸನಿಲ್ ಕಾರ್ಯಕ್ರಮ ನಿರೂಪಿಸಿದರು