ತದನಂತರ ಮಾತಾನಾಡಿದ ಸಂಘದ ಅಧ್ಯಕ್ಷರು ಯೋಗ ದಿನಾಚರಣೆಯ ಮಹತ್ವದ ಬಗ್ಗೆ ಸಂಘದ ಸಿಬ್ಬಂದಿಗಳಿಗೆ ಮಾಹಿತಿ ನೀಡಿದರು. ಸಂಘದ ನಿರ್ದೇಶಕರಾದ ಹಾಗೂ ಯೋಗ ಶಿಕ್ಷಕರಾದ ಶ್ರೀಯುತ ಜಿ.ಪರಮೇಶ್ವರ ಪೂಜಾರಿ , ಶ್ರೀ ಪತಾಂಜಲಿ ಯೋಗ ಶಿಕ್ಷಣ ಸಮಿತಿ ಇದರ ಶಿಕ್ಷಕರಾದ ಶ್ರೀಮತಿ ರಮಣಿ ಹಾಗೂ ಶ್ರೀ ಗೋಪಾಲ್ ಪೂಜಾರಿರವರು ಸಂಘದ ಸಿಬ್ಬಂದಿಗಳಿಗೆ ಯೋಗಾಸನ ಮಾಡಿಸುವ ಮೂಲಕ ಯೋಗ ದಿನಾಚರಣೆಯನ್ನು ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಶ್ರೀ ಪತಾಂಜಲಿ ಯೋಗ ಶಿಕ್ಷಣ ಪ್ರತಿಷ್ಠಾನ (ರಿ.) ಇದರ ಪ್ರಸ್ತುತ ಉಪಾಧ್ಯಕ್ಷರು , ಯೋಗ ಶಿಕ್ಷಕರು ಹಾಗೂ ಸಂಘದ ನಿರ್ದೇಶಕರಾದ ಶ್ರೀಯುತ ಜಿ.ಪರಮೇಶ್ವರ ಪೂಜಾರಿ ರವರು ಸುಮಾರು 40 ವರ್ಷದಿಂದ ಯೋಗ ಅಭ್ಯಾಸವನ್ನು ಮಾಡುತ್ತಿದ್ದು 2007 ರಿಂದ ಹಲವಾರು ಯೋಗ ತರಬೇತಿಗಳನ್ನು ನೀಡುತ್ತಾ ಬಂದಿದ್ದು ಇವರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸಂಘದ ಉಪಾಧ್ಯಕ್ಷರಾದ ಶ್ರೀ ನೇಮಿರಾಜ್. ಪಿ ,ನಿರ್ದೇಶಕರಾದ ಶ್ರೀ ರಮಾನಾಥ್ ಸನಿಲ್, ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸೌಮ್ಯ ವಿಜಯ್ ಹಾಗೂ ಸಂಘದ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.