ಸಂಘದ ಅಧ್ಯಕ್ಷರಾದ “ಸಹಕಾರ ರತ್ನ’’ ಶ್ರೀಯುತ ಚಿತ್ತರಂಜನ್ ಬೋಳಾರ್ ಮಾತನಾಡಿ ಸಂಘದ ಅಭಿವೃದ್ಧಿಯಲ್ಲಿ ಆಡಳಿತ ಮಂಡಳಿಯೊಂದಿಗೆ ಸಿಬ್ಬಂದಿ ವರ್ಗ, ಎಲ್ಲಾ ಸದಸ್ಯರು ಹಾಗೂ ಗ್ರಾಹಕರ ಸಹಕಾರದಿಂದ ಪ್ರತಿ ವರ್ಷದಂತೆ ಈ ವರ್ಷŒವು ಸಂಘವು ಹೆಚ್ಚಿನ ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯವಾಗಿದೆ. ಸಂಘವು 2022-23 ನೇ ಆರ್ಥಿಕ ವರ್ಷದಲ್ಲಿ ರೂ 2 ಸಾವಿರ ಕೋಟಿಗೂ ಮಿಕ್ಕಿ ವ್ಯವಹಾರ ನಡೆಸಿ ಎರಡೂವರೆ ಕೋಟಿ ಲಾಭಗಳಿಸುವಲ್ಲಿ ಸದಸ್ಯರು ಹಾಗೂ ಗ್ರಾಹಕರು ನಮ್ಮಲ್ಲಿ ವಿಶ್ವಾಸವಿಟ್ಟು ವ್ಯವಹಾರ ನಡೆಸಿರುವುದೇ ಸಾಧನೆ ಎಂದರು. ಸಂಘದಲ್ಲಿ ಲಭ್ಯವಿರುವ ಸೇವೆಗಳನ್ನು ಸದುಪಯೋಗ ಮಾಡಿಕೊಳ್ಳುವಂತೆ ಗ್ರಾಹಕರಲ್ಲಿ ವಿನಂತಿಸಿದರು. ಆತ್ಮಶಕ್ತಿ ಸಂಘವು ನೇರವಾಗಿ ಹಾಗೂ ಪರೋಕ್ಷವಾಗಿ 170 ಕ್ಕೂ ಮಿಕ್ಕಿ ಜನರಿಗೆ ಉದ್ಯೋಗವನ್ನು ಒದಗಿಸಿದೆ ಎಂದು ತಿಳಿಸಿದರು. ಸಂಘವು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಶಾಖೆಗಳನ್ನು ತೆರೆದು ಗ್ರಾಹಕರಿಗೆ ಇನ್ನೂ ಉತ್ತಮ ರೀತಿಯ ಸೇವೆಗಳನ್ನು ನೀಡುವುದಾಗಿ ತಿಳಿಸಿದರು.
ಸಂಘದ ಸದಸ್ಯರಾದ ಶ್ರೀಯುತ ಸುರೇಂದ್ರ ಕಂಬ್ಳಿ ಇವರು ಪ್ರಗತಿಯ ಪಥದಲ್ಲಿ ಸಾಗುವ ಅಡ್ಯಾರ್ ಗ್ರಾಮದಲ್ಲಿ ಶಾಖೆಯನ್ನು ತೆರೆದು ಉತ್ತಮ ಸೇವೆಯೊಂದಿಗೆ ಅತೀ ಹೆಚ್ಚಿನ ಗ್ರಾಹಕರನ್ನು ಪಡೆಯುದರ ಮೂಲಕ ಸಂಘವು ನೀಡುತ್ತಿರುವ ಸೇವೆಯನ್ನು ಶ್ಲಾಘಿಸಿದರು, ಹಾಗೂ ಸಿಬ್ಬಂದಿ ಹಾಗೂ ಗ್ರಾಹಕರ ಉತ್ತಮ ಬಾಂದವ್ಯದಿಂದ ಸಂಘವು 30 ಶಾಖೆಗಳನ್ನು ತೆರೆಯಲು ಸಹಕಾರವಾಯಿತು ಎಂದು ತಿಳಿಸಿದರು. ಹಾಗೆಯೇ ಸಂಘವು ಇನ್ನೂ ಅನೇಕ ಶಾಖೆಗಳನ್ನು ತೆರೆಯುವಂತಾಗಲಿ ಎಂದು ಶುಭ ಹಾರೈಸಿದರು.
ದಕ್ಷಿಣ ಕನ್ನಡ ಜಿಲ್ಲಾ ಬಸ್ಸ್ ಮಾಲಕರ ಸಂಘದ ಅಧ್ಯಕ್ಷರು ಹಾಗೂ ಸಂಘದ ಸದಸ್ಯರಾಗಿರುವ ಶ್ರೀಯುತ ಜಯಶೀಲ ಅಡ್ಯಂತಾಯ ರವರು ಸಂಘದ 22 ನೇ ಶಾಖೆಯು ಅಡ್ಯಾರ್ ನಲ್ಲಿ ಪ್ರಾರಂಭಗೊಂಡು ಒಂದು ವರ್ಷ ತುಂಬಿರುವ ಸಂದರ್ಭದಲ್ಲಿ ಗ್ರಾಹಕ ಸಭೆ ಕರೆದು ಗ್ರಾಹಕರು ತಮ್ಮ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಲು ಅವಕಾಶ ನೀಡಿರುವುದು ತುಂಬಾ ಸಂತೋಷದ ವಿಷಯ. ಈ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಹೇಳಿದಂತೆ 30 ಶಾಖೆಗಳು ಈಗಾಗಲೇ ತೆರೆದು ಉತ್ತಮ ಸೇವೆ ನೀಡಿರುವುದು ಪ್ರಸಂಶನೀಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಶ್ರೀ ನೇಮಿರಾಜ್ ಪಿ, ನಿರ್ದೇಶಕರಾದ ಶ್ರೀ ಗೋಪಾಲ್ ಎಮ್, ಸಹಾಯಕ ಪ್ರಬಂದಕರಾದ ಶ್ರೀ ವಿಶ್ವನಾಥ್ ,ಹಿರಿಯ ಶಾಖಾಧಿಕಾರಿ ಶ್ರೀಮತಿ ಯಶವಂತಿ ಹಾಗೂ ಮತ್ತಿತ್ತರರು ಉಪಸ್ಥಿತರಿದ್ದರು. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಡ್ಯಾರ್ ಶಾಖೆಯ ಪ್ರಭಾರ ಶಾಖಾಧಿಕಾರಿಯಾದ ಶ್ರೀಮತಿ ವೀಕ್ಷಿತಾ ಸ್ವಾಗತಿಸಿ, ಸಿಬ್ಬಂದಿಯಾದ ಶ್ರೀಮತಿ ಮಮತಾ ಬಿ ಪೂಜಾರಿ ವಂದಿಸಿದರು. ಮಾನವ ಸಂಪನ್ಮೂಲ ಅಧಿಕಾರಿ ಶ್ರೀಮತಿ ದೀಪಿಕ ಸನಿಲ್ ನಿರೂಪಿಸಿದರು.