ಆರೋಗ್ಯ ಶಿಬಿರದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ಸ್ಥಾನವನ್ನು ವಹಿಸಿದ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀಚಿತ್ತರಂಜನ್ ಬೋಳಾರ್ ರವರು ಮಾತಾಡಿ ಆರೋಗ್ಯವೇ ಭಾಗ್ಯ ಈ ನಿಟ್ಟಿನಲ್ಲಿ ಸಂಘವು ಹನ್ನೊಂದನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು ಸಂಘವು ತನ್ನ ಶಾಖೆಯ ವಾರ್ಷಿಕೋತ್ಸವದ ಪ್ರಯುಕ್ತ ನಿರಂತರವಾಗಿ ಉಚಿತ ಆರೋಗ್ಯ ಶಿಬಿರವನ್ನು ಏರ್ಪಡಿಸುತ್ತಾ ಬಂದಿದೆ. 51 ನೆ ೀ ಉಚಿತ ಆರೋಗ್ಯ ಶಿಬಿರವು ಇದಾಗಿದ್ದು ಉಳ್ಳಾಲದಲ್ಲಿ ಸತತ 7 ವರ್ಷಗಳಿಂದ ಆರೋಗ್ಯ ಶಿಬಿರವನ್ನು ನಡೆಸುತ್ತಾ ಬಂದಿರುತ್ತದೆ. ನಮ್ಮ ಸಹಕಾರ ಸಂಘದ ಮೂಲಕ ಏರ್ಪಡಿಸಿದ ಆರೋಗ್ಯ ಶಿಬಿರಗಳ ಪ್ರಯೋಜನವನ್ನು ಈಗಾಗಲೇ ಸುಮಾರು 15000 ಕ್ಕೂ ಮಿಕ್ಕಿ ಜನರು ಪಡೆದಿರುತ್ತಾರೆ. ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆಯನ್ನು 400 ಕ್ಕೂ ಮಿಕ್ಕಿ ಜನರಿಗೆ ಮಾಡಲಾಗಿದೆ. ಈಗಾಗಲೇ ಸಂಘವು ಸುಮಾರು 10000 ಜನರಿಗೆ ಉಚಿತ ಕನ್ನಡಕವನ್ನು ವಿತರಿಸುತ್ತಾ ಬಂದಿರುತ್ತದೆ.
ಶಿಬಿರದ ಉದ್ಘಾಟನೆಯಲ್ಲಿ ಭಾಗವಹಿಸಿದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಪ್ರಕಾಶನ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ.) ಇದರ ಅಧ್ಯಕ್ಷರಾದ ಶ್ರೀ ವಾಮನ್ ಕೆ. ಯವರು ಮಾತಾಡಿ ಆರ್ಥಿಕ ಸೇವೆಯ ಜೊತೆಗೆ ಸಾಮಾಜಿಕ ಸೇವೆಯನ್ನು ಸಂಘ ನೀಡುತ್ತಿದ್ದು ಮುಂದೆಯು ಇಂತಹ ಕಾರ್ಯಕ್ರಮ ಮಾಡುವಂತೆ ಪೆÇ್ರೀತ್ಸಾಹಿಸಿದರು. ವಿದ್ಯಾರಣ್ಯ ಯುವಕ ವೃಂದದ ಅಧ್ಯಕ್ಷರಾದ ಶ್ರೀ ವಿಜಯ್ ಕುಮಾರ್ ರವರು ಮಾತಾಡಿ ಆರೋಗ್ಯವು ಎಲ್ಲರಿಗೂ ಅಗತ್ಯವಾದ ಒಂದು ಆಂಶ, ಎಲ್ಲರೂ ಇದರ ಸದುಪಯೋಗಪಡೆದುಕೊಳ್ಳಿ ಹಾಗೂ ಇಂತಹ ಸಮಾಜ ಸೇವಾ ಕಾರ್ಯಕ್ರಮŒವನ್ನು ಆಯೋಜನೆ ಮಾಡುವ ಸಂಘದ ಕಾರ್ಯವನ್ನು ಶ್ಲಾಘಿಸಿದರು.
ಯೆನೆಪೆÇೀಯ ದಂತ ಕಾಲೇಜು ಮತ್ತು ಆಸ್ಪತ್ರೆ, ದೇರಳಕಟ್ಟೆ ಇಲ್ಲಿಯ ಅಸಿಸ್ಟೆಂಟ್ ಪೆÇ್ರಫೆಸರ್ ಆದ ಡಾ†† ಸುಪ್ರೀಯ ಎ. ರವರು ಮಾತಾಡಿ ದಂತ ಚಿಕಿತ್ಸೆಯ ಪ್ರಾಮುಖ್ಯತೆಯ ಬಗ್ಗೆ ವಿವರಿಸಿ ಮತ್ತು ಅದರ ಪ್ರಯೋಜನವನ್ನು ಪಡೆದುಕೊಳ್ಳುದಾಗಿ ತಿಳಿಸಿದರು.
ಉಳ್ಳಾಲ ಪೆÇೀಲಿಸ್ ಠಾಣೆಯ ಎಸ್. ಐ ಆದ ಶ್ರೀ ರೇವಣ್ಣ ಸಿದ್ದಪ್ಪ ರವರು ಮಾತಾಡಿ ಉಚಿತ ಆರೋಗ್ಯ ಶಿಬಿರದ ಸದುಪಯೋಗವನ್ನು ಉಳ್ಳಾಲದ ಜನತೆ ಪಡೆಯಿರಿ ಹಾಗೂ ಶಿಬಿರಕ್ಕೆ ಶುಭವನ್ನು ಹಾರೈಸಿದರು
ಅವಿನಾಶ್ ಗ್ಯಾಸ್ ಎಜೆನ್ಸಿ ಮಾಲಿಕರಾದ ಶ್ರೀ ಬಿ. ಡಿ ಗೋಪಾಲ್ ರವರಿಂದ ಅಗತ್ಯವುಳ್ಳ ಶಿಬಿರಾರ್ಥಿಗಳಿಗೆ ಕನ್ನಡಕ ಪ್ರಾಯೋಜಕತ್ವ ನೀಡಿದರು.
ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷರಾದ ಶ್ರೀ ನೇಮಿರಾಜ್. ಪಿ, ನಿರ್ದೇಶಕರುಗಳಾದ ಶ್ರೀ ಆನಂದ ಎಸ್.ಕೊಂಡಾಣ,ಶ್ರೀ ಗೋಪಾಲ್ ಎಮ್, ಮುಖ್ಯಕಾರ್ಯನಿರ್ವಹಣಾಧಿಕಾರಿಯಾದ ಶ್ರೀಮತಿ ಸೌಮ್ಯ ವಿಜಯ್, ಶಿವಶಕ್ತಿ ಯುವಕ ಮಂಡಲ (ರಿ.) , ಉಳ್ಳಾಲ ಇದರ ಅಧ್ಯಕ್ಷರಾದ ಶ್ರೀ ವಿನೋದ್ ಮಲ್ಯ ಉಳ್ಳಾಲ್, ವಿದ್ಯಾರಣ್ಯ ಕಲಾವೃಂದ , ಉಳ್ಳಾಲ ಇದರ ಅಧ್ಯಕ್ಷರಾದ ಶ್ರೀ ಜಯ ಉಳ್ಳಾಲ್, ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಅಭಿವೃದ್ದಿ ಕೇಂದ್ರ , ಯೆನೆಪೆÇೀಯ ಇಲ್ಲಿಯ ವೈದ್ಯಕೀಯ ಅಧಿಕಾರಿ ಡಾ†† ಹನ್ನ ಹಾಗೂ ಮತ್ತಿತರರು ಉಪಸ್ಥಿತರಿದ್ದರು.ಶಿಬಿರದಲ್ಲಿ ಸುಮಾರು 250 ಕ್ಕೂ ಮಿಕ್ಕಿ ಶಿಬಿರಾರ್ಥಿಗಳು ಪಾಲ್ಗೊಂಡು ಶಿಬಿರ ದ ಪ್ರಾಯೋಜನವನ್ನು ಪಡೆದುಕೊಂಡರು.
ಉಳ್ಳಾಲ ಶಾಖೆಯ ಶಾಖಾಧಿಕಾರಿಯಾದ ಕುಮಾರಿ ನಿಶ್ಮಿತಾ ಆರ್. ರವರು ಸ್ವಾಗತಿಸಿ, ಗುಮಾಸ್ತೆಯಾದ ಕುಮಾರಿ ವೈಷ್ಣವಿ ಎಸ್. ಸುವರ್ಣ ರವರು ವಂದಿಸಿದರು.ಸಂಘದ ಸಿಬ್ಬಂದಿಯಾದ ಕುಮಾರಿ ಕೌಶಲ್ಯ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಉಚಿತ ನೇತ್ರ ತಪಾಸಣಾ, ದಂತ ಚಿಕಿತ್ಸಾ ಮತ್ತು ಸಾಮಾನ್ಯ ವೈದ್ಯಕೀಯ ಶಿಬಿರ ದ ಸಂಯೋಜನೆಯನ್ನು ಹಿರಿಯ ಶಾಖಾಧಿಕಾರಿಗಳಾದ ಶ್ರೀಮತಿ ಹರಿಣಾಕ್ಷಿ ಹಾಗೂ ಶ್ರೀಮತಿ ಸ್ವಾತಿ ರವರು ನಡೆಸಿದರು.