ಸಂಘದ 2022-23ನೇ ಸಾಲಿನ ವಾರ್ಷಿಕ ವರದಿ ಲೆಕ್ಕಪತ್ರವನ್ನು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಶ್ರೀಮತಿ ಸೌಮ್ಯ ವಿಜಯ್ರವರು ಸಭೆಯಲ್ಲಿ ಮಂಡಿಸಿದರು. ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ರವರು ಮಾತನಾಡಿ ಸಂಘವು ಪ್ರಸ್ತುತ ಅವಿಭಜಿತ ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ಒಟ್ಟು 30 ಶಾಖೆಗಳನ್ನು ಹೊಂದಿದ್ದು, 2023-24ನೇ ಸಾಲಿನಲ್ಲಿ ಸಂಘದ ಕಾರ್ಯವ್ಯಾಪ್ತಿಯಲ್ಲಿ ಇನ್ನೂ ಹೆಚ್ಚಿನ ಹೊಸ ಶಾಖೆಗಳನ್ನು ತೆರೆದು, ವಿವಿಧ ಯೋಜನೆಗಳ ಮೂಲಕ ಸದಸ್ಯರಿಂದ ರೂ. 250 ಕೋಟಿಗೂ ಮಿಕ್ಕಿ ಠೇವಣಿಗಳನ್ನು ಸಂಗ್ರಹಿಸಿ, ರೂ.200 ಕೋಟಿಗೂ ಮಿಕ್ಕಿ ಸಾಲ ನೀಡುವ ಗುರಿಯನ್ನು ಹೊಂದಿದೆ ಎಂದರು.
ಸಂಘವು ವರದಿ ಸಾಲಿಗೆ ವಾರ್ಷಿಕ ವಹಿವಾಟು ರೂ. 2000 ಕೋಟಿಗೂ ಮೀರಿ ವ್ಯವಹಾರ ನಡೆಸಿದೆ. ವರದಿ ಸಾಲಿನಲ್ಲಿ ಸದಸ್ಯರಿಂದ ಒಟ್ಟು ರೂ.129.21 ಲಕ್ಷ ಷೇರು ಬಂಡವಾಳ, ರೂ. 21,237.00 ಲಕ್ಷ ಠೇವಣಿಯನ್ನು ಸಂಗ್ರಹಿಸಿದೆ. ವರ್ಷಾಂತ್ಯಕ್ಕೆ ರೂ.14,924.86 ಲಕ್ಷ ಸಾಲ ನೀಡಲಾಗಿದೆ.. ಸಂಘದ ದುಡಿಯುವ ಬಂಡವಾಳ ರೂ.22,117.49 ಲಕ್ಷ ಹೊಂದಿದೆ. ವರದಿ ವರ್ಷಕ್ಕೆ ಸಂಘವು ರೂ. 235.93 ಲಕ್ಷ ನಿವ್ವಳ ಲಾಭಗಳಿಸಿರುವುದು ಸಂಘದ ಹೆಗ್ಗಳಿಕೆಯಾಗಿದೆ. ಸಂಘದ ಸದಸ್ಯರಿಗೆ ವರದಿ ಸಾಲಿನಲ್ಲಿ ಶೇ. 11 ಡಿವಿಡೆಂಡ್ ಘೋಷಿಸಲಾಯಿತು.
ಪ್ರಸ್ತುತ ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ (ನಿ.) ಬೆಂಗಳೂರು ಇವರಿಂದ 2022-23 ನೇ ಸಾಲಿನಲ್ಲಿ ಅತೀ ಹೆಚ್ಚು ಮೊತ್ತದ ಇ-ಸ್ಟಾಂಪಿAಗ್ ಮುದ್ರಿಸುವ ಪ್ರಶಸ್ತಿಯನ್ನು ಸಂಘ ಪಡೆದಿರುತ್ತದೆ. ಸದಸ್ಯರ ಬೇಡಿಕೆಗಳನ್ನು ಸಮರ್ಪಕವಾಗಿ ಪೂರೈಸುವುದರ ಜೊತೆಗೆ ಸಂಘದ ಕಾರ್ಯವೈಖರಿಯನ್ನು ಗುರುತಿಸಿ ಸತತ 8 ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಾಧನಾ ಪ್ರಶಸ್ತಿಯನ್ನು ನೀಡಿ ಗೌರವಿಸಿರುವುದಕ್ಕೆ ಸಭೆಯಲ್ಲಿ ಸದಸ್ಯರು ಹರ್ಷ ವ್ಯಕ್ತಪಡಿಸಿದರು.
ಇಂದು ನಮ್ಮ ಸಂಘದ ಪ್ರಗತಿಗೆ ಸದಸ್ಯರಾದ ತಾವುಗಳು ಕಾರಣ ನಿಮ್ಮ ಸಂಪೂರ್ಣ ಸಹಕಾರಕ್ಕೆ ನಾವುಗಳು ಸದಾ ಋಣಿಯಾಗಿ ಇರುತ್ತೇವೆ. ಅದೇ ರೀತಿ ಸಂಸ್ಥೆಯ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದ ಎಲ್ಲಾ ಸಿಬ್ಬಂದಿವರ್ಗದ ಕೊಡುಗೆಯನ್ನು ಮುಕ್ತ ಕಂಠದಿAದ ಶ್ಲಾಘನೆ ಮಾಡಿದರು. ಸಮಾಜದ ಅತ್ಯಂತ ಬಡವರ್ಗದ ವಿದ್ಯಾರ್ಥಿಗಳಿಗೆ ಬಡ್ಡಿರಹಿತ ಶೈಕ್ಷಣಿಕ ಸಾಲ ಕೊಡುವ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.ಮುಂದಕ್ಕೆ ಸಂಘವು ಹಾಕಿಕೊಂಡಿರುವ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಎಲ್ಲಾ ಸದಸ್ಯರ ಸಹಕಾರ ಕೋರಿದರು. ಸಂಘದ ಅಭೂತಪೂರ್ವ ಪ್ರಗತಿಗೆ ಸಹಕಾರ ನೀಡಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.
ಪ್ರತಿಭಾ ಪುರಸ್ಕಾರ:
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಾಗೂ ಗೌರವಾನ್ವಿತ ಸ್ಥಾನ ಅಲಂಕರಿಸಿದ ಸಂಘದ ಸದಸ್ಯರಾದ ಶ್ರೀ ಎಸ್ ಶೀನ ಪೂಜಾರಿ, ,ಶ್ರೀ ಗೋಕುಲ್ ಕದ್ರಿ, ಶ್ರೀ ಯೋಗಿಶ್ ಪೂಜಾರಿ ಕಡ್ತಿಲ,ಶ್ರೀ ಹರೀಶ್ ಮುಂಡೋಳಿ,ಶ್ರೀ ಭಾಸ್ಕರ್ ಕೋಟ್ಯಾನ್,ಶ್ರೀ ರಾಕೇಶ್ ಕುಂಜೂರು, ಶ್ರೀ ವಸಂತ ಕಾರಂದೂರು,ಶ್ರೀ ದಿನೇಶ್ ಆಂಚನ್ ಹಾಗೂ ಶ್ರೀ ಚಂದ್ರಹಾಸ ಕಟ್ಟಪುಣಿ ರವರನ್ನು ಸಂಘದ ಪರವಾಗಿ ಗೌರವಿಸಲಾಯಿತು.
ವಿವಿಧ ಕ್ಷೇತ್ರಗಳಲ್ಲಿಸಾಧನೆ ಮಾಡಿದ ಬಹುಮುಖ ಪ್ರತಿಭೆಯಾಗಿರುವ ಸಂಘ ದ ಸದಸ್ಯರ ಮಕ್ಕಳಾದ ಡಾ ನೇಹಲ್ ನೇಮಿರಾಜ್,ಮಾಸ್ಟರ್ ತನ್ಮಯ್ ಸುಮನ್,ಕುಮಾರಿ ವೈಭವಿ ವಿ.ಎಸ್, ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸಾಧನೆಗೈದ ಸಂಘದ ಸದಸ್ಯರ ಮಕ್ಕಳಾದ ಕುಮಾರಿ ಆತ್ಮಿ ಕೆ, ಮಾಸ್ಟರ್ ಭಗತ್ ಸುವರ್ಣ ,ಕುಮಾರಿ ಲಹರಿ ಎಮ್.ರಾಯಿ ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ ಸಾಧನೆಗೈದ ಕುಮಾರಿ ಡ್ಯಾಫ್ನಿ ಮೆಲೋರಾ ಡಿಸೋಜ, ಮಾಸ್ಟರ್ ಮೆಲ್ ಗ್ಲಿಸ್ಟನ್ ಕಾರ್ಯಪ್ಪ ಹಾಗೂ ಕುಮಾರಿ ಯತೀಕ್ಷ ರವರನ್ನು ಈ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು.
ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸಂಘದ ನಿರ್ದೇಶಕರಾದ ಶ್ರೀ ಜಿ.ಪರಮೇಶ್ವರ ಪೂಜಾರಿ ಶ್ರೀ ಆನಂದ್ ಎಸ್ ಕೊಂಡಾಣ, ಶ್ರೀ ಸೀತಾರಾಮ್ ಎನ್, ಶ್ರೀ ರಮಾನಾಥ್ ಸನಿಲ್, ಶ್ರೀ ಮುದ್ದು ಮೂಡುಬೆಳ್ಳೆ, ಶ್ರೀ ಬಿ.ಪಿ. ದಿವಾಕರ್, ಶ್ರೀ ಗೋಪಾಲ್ ಎಮ್. ಶ್ರೀಮತಿ ಚಂದ್ರಾವತಿ ಮತ್ತು ಶ್ರೀಮತಿ ಉಮಾವತಿ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ರವರು ಸ್ವಾಗತಿಸಿ ಉಪಾಧ್ಯಕ್ಷರಾದ ಶ್ರೀ ನೇಮಿರಾಜ್ ಪಿ. ವಂದಿಸಿದರು. ಅಭಿನಂದನ ಪುರಸ್ಕಾರ ಕಾರ್ಯಕ್ರಮವನ್ನು ಮಾನವ ಸಂಪನ್ಮೂಲ ಅಧಿಕಾರಿ ಶ್ರೀಮತಿ ದೀಪಿಕ ಸನಿಲ್ ಹಾಗೂ ಗುಮಾಸ್ತೆ ಕುಮಾರಿ ಹರ್ಷಿತ ರವರು ನಿರೂಪಿಸಿದರು.