ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಗಂಜಿಮಠ ಶಾಖೆಯ ಪ್ರಥಮ ವಾರ್ಷಿಕೋತ್ಸವದ ಪ್ರಯುಕ್ತ ಗ್ರಾಹಕರ ಸಭೆಯು ಸಂಘದ ಅಧ್ಯಕ್ಷರಾದ “ಸಹಕಾರ ರತ್ನ’’ ಶ್ರೀಯುತ ಚಿತ್ತರಂಜನ್ ಬೋಳಾರ್ ರವರ ಅಧ್ಯಕ್ಷತೆಯಲ್ಲಿ ಗಂಜಿಮಠ ಶಾಖೆಯಲ್ಲಿ ಜರಗಿತು. ಈ ಕಾರ್ಯಕ್ರಮವನ್ನು ಸಂಘದ ಸದಸ್ಯರುಗಳಾದ ಶ್ರೀ ಕೃಷ್ಣ ಕೆ. ಅಮೀನ್, ಕೆ.ನಾರಾಯಣ ಕಾರಂತ್ , ಶ್ರೀ ಸೋಹನ್ ಅತಿಕಾರಿ, ಶ್ರೀ ದಯಾನಂದ್, ಶ್ರೀ ಸುನೀಲ್ ಮನೋಜ್ ಫೆರ್ನಾಂಡಿಸ್ ರವರು ದೀಪ ಪ್ರಜ್ವಲನೆ ಮಾಡುವುದರ ಮೂಲಕ ಉದ್ಘಾಟಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಘದ ಅಧ್ಯಕ್ಷರಾದ “ಸಹಕಾರ ರತ್ನ’’ ಶ್ರೀಯುತ ಚಿತ್ತರಂಜನ್ ಬೋಳಾರ್ ರವರು ಮಾತನಾಡಿ ಸಂಘದ ಅಭಿವೃದ್ಧಿಯಲ್ಲಿ ಆಡಳಿತ ಮಂಡಳಿಯೊoದಿಗೆ ಸಿಬ್ಬಂದಿ ವರ್ಗ ಹಾಗೂ ಎಲ್ಲಾ ಗ್ರಾಹಕರ ಸಹಕಾರದಿಂದ ಪ್ರತಿ ವರ್ಷದಂತೆ ಈ ವರ್ಷವು ಸಂಘವು ಹೆಚ್ಚಿನ ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯವಾಗಿದೆ. ಸಂಘವು ಇ-ಸ್ಟಾಂಪಿAಗ್ ಸೇವೆಗೆ ಕಳೆದ 9 ವರ್ಷಗಳಿಂದ ನಿರಂತರವಾಗಿ ಪ್ರಶಸ್ತಿಯನ್ನು ಪಡೆಯುದರೊಂದಿಗೆ ಉತ್ತಮ ಸಹಕಾರಿ ಸಂಘ ಪ್ರಶಸ್ತಿಯನ್ನು ಪಡೆದುಕೊಂಡ ಹೆಮ್ಮೆ ನಮ್ಮದಾಗಿದೆ. ಇ–ಸ್ಟಾಂಪಿoಗ್ ಸೇವೆಯು ಬೆಳಿಗ್ಗೆ 9 ಗಂಟೆಯಿoದ ಸಂಜೆ 6 ಗಂಟೆಯವರೆಗೆ ಎಲ್ಲಾ ಶಾಖೆಗಳಲ್ಲಿ ಹಾಗೂ ಡಿ.ಸಿ ಆಫೀಸಿನ ಬಳಿ ಇರುವ ಶಾಖೆಯಲ್ಲಿ ಸಂಜೆ 7 ಗಂಟೆಯವರೆಗೆ ಲಭ್ಯವಿರುತ್ತದೆ.
ಸಂಘದ ಪ್ರತಿ ಶಾಖೆಗಳಲ್ಲೂ ವಾರ್ಷಿಕೋತ್ಸವದ ಪ್ರಯುಕ್ತ ಉಚಿತ ವೈದ್ಯಕೀಯ ಶಿಬಿರವನ್ನು ಆಯೋಜಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಗಂಜಿಮಠ ಪರಿಸರದಲ್ಲೂ ಉಚಿತ ವೈದ್ಯಕೀಯ ಶಿಬಿರವನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು. ಠೇವಣಿಗಳ ಮೇಲೆ ಆಕರ್ಷಕ ಬಡ್ಡಿದರ ಹಾಗೂ ವಿವಿಧ ರೀತಿಯ ಸಾಲಗಳನ್ನು ನೀಡುವ ಮೂಲಕ ಗ್ರಾಹಕ ಸ್ನೇಹಿ ಸಹಕಾರಿ ಸಂಘವಾಗಿ ಗುರುತಿಸಿ ಕೊಂಡಿದೆ ಎಂದರು. ಗ್ರಾಹಕರ ಸಲಹೆ ಸಹಕಾರವನ್ನು ಸದಾ ಬಯಸುತ್ತಾ ಸಂಘದಲ್ಲಿ ಲಭ್ಯವಿರುವ ಸೇವೆಗಳನ್ನು ಸದುಪಯೋಗ ಮಾಡಿಕೊಳ್ಳುವಂತೆ ಗ್ರಾಹಕರಲ್ಲಿ ವಿನಂತಿಸಿದರು.
ಸAಘದ ಸದಸ್ಯರಾದ ಶ್ರೀ ಕೃಷ್ಣ ಕೆ. ಅಮೀನ್ ರವರು ಮಾತನಾಡಿ ರಾಷ್ಟಿಕೃತ ಬ್ಯಾಂಕುಗಳಲ್ಲಿ ಜನರಿಗೆ ತುಂಬಾ ಅನಾನುಕೂಲತೆ ಇದ್ದು ಈ ನಿಟ್ಟಿನಲ್ಲಿ ಆತ್ಮಶಕ್ತಿ ಸಂಘವು ಜನರಿಗೆ ಒಳ್ಳೆಯ ಸೇವೆಯನ್ನು ನೀಡುತ್ತಿದ್ದು ಇನ್ನು ಮುಂದೆಯೂ ಜನರಿಗೆ ಉತ್ತಮ ಸೇವೆಯನ್ನು ನೀಡುವಂತಾಗಲಿ ಹಾಗೂ ಉತ್ತಮ ಭಾಂಧವ್ಯವನ್ನು ಹೊಂದುವ ಮೂಲಕ ಸಂಘವು ಇನ್ನಷ್ಟು ಉತ್ತುಂಗಕ್ಕೆ ಏರಲಿ ಎಂದು ಹಾರೈಸಿದರು.
ಸಂಘದ ಸದಸ್ಯರಾದ ಶ್ರೀ ಸುನೀಲ್ ಮನೋಜ್ ಫೆರ್ನಾಂಡಿಸ್ ರವರು ಸಂಘದ ವಾರ್ಷಿಕೋತ್ಸವಕ್ಕೆ ಶುಭವನ್ನು ಹಾರೈಸಿ, ಸಂಘವು ಅತೀ ಹೆಚ್ಚಿನ ಮಹಿಳಾ ಸಿಬ್ಬಂದಿಗಳನ್ನು ನೇಮಿಸಿದ್ದು ಮಹಿಳಾ ಸಬಲೀಕರಣ ಕ್ಕೆ ಸಂಘದ ಪಾತ್ರ ಅನನ್ಯ. ಸಂಘವು ಇನ್ನಷ್ಟು ಉತ್ತುಂಗಕ್ಕೆ ಏರಿ ಹಲವಾರು ಶಾಖೆಗಳನ್ನು ತೆರೆದು ಜನರಿಗೆ ಉತ್ತಮ ಸೇವೆಯನ್ನು ನೀಡುವಂತಾಗಲಿ ಎಂದು ಆಶಿಸಿದರು.
ಸಂಘದ ಸದಸ್ಯರು ಹಾಗೂ ಹಾಗೂ ಗಂಜಿಮಠ ಗ್ರಾಮ ಪಂಚಾಯತ್‌ನ ಅಧ್ಯಕ್ಷರಾದ ಶ್ರೀಮತಿ ಮಾಲತಿ ರವರು ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿ ಗಂಜಿಮಠ ಪಂಚಾಯತ್ ಕಟ್ಟಡ ದಲ್ಲಿ ಈ ಶಾಖೆ ಇರುವಂತಹದ್ದು ಖುಷಿಯ ವಿಚಾರ. ಶಾಖೆಯು ಕಷ್ಟ ಕಾಲದಲ್ಲಿ ಜನರ ಸಮಸ್ಯೆಗೆ ಉತ್ತಮ ಸ್ಪಂದನೆಯನ್ನು ನೀಡಿದೆ. ಸಿಬ್ಬಂದಿಗಳ ನಗುಮೊಗದ ಸೇವೆಗೆ ಹಾಗೂ ಈ ಕಿರು ಅವಧಿಯಲ್ಲಿ ಸಂಘದ ಬೆಳವಣಿಗೆಗೆ ಕಾರಣೀಕರ್ತರಾದ ಸಂಘದ ಅಧ್ಯಕ್ಷರಿಗೆ ಹಾಗೂ ಆಡಳಿತ ಮಂಡಳಿಯ ನಿರ್ದೇಶಕರುಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಶ್ರೀ ನೇಮಿರಾಜ್ ಪಿ, ನಿರ್ದೇಶಕರಾದ ಶ್ರೀ ಗೋಪಾಲ್ ಎಮ್, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸೌಮ್ಯ ವಿಜಯ್, ಸಹಾಯಕ ಪ್ರಬಂಧಕರಾದ ಶ್ರೀ ವಿಶ್ವನಾಥ್ ಹಾಗೂ ಮತ್ತಿತ್ತರರು ಉಪಸ್ಥಿತರಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಸಂಘದ ಗ್ರಾಹಕರು ಭಾಗವಹಿಸಿದ್ದರು.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಪಂಜಿಮೊಗರು ಶಾಖೆಯ ಶಾಖಾಧಿಕಾರಿಯಾದ ಶ್ರೀಮತಿ ಸುಜಾತ ರವರು ಸ್ವಾಗತಿಸಿ, ಗಂಜಿಮಠ ಶಾಖೆಯ ಗುಮಾಸ್ತೆಯಾದ ಕುಮಾರಿ ಶಮಿತಾ ರವರು ವಂದಿಸಿದರು. ಗಂಜಿಮಠ ಶಾಖೆಯ ಪ್ರಭಾರ ಶಾಖಾಧಿಕಾರಿಯಾದ ಕುಮಾರಿ ರಮ್ಯ ರವರು ಕಾರ್ಯಕ್ರಮ ನಿರೂಪಿಸಿದರು.