ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಸುರತ್ಕಲ್ ಶಾಖೆಯ ಹನ್ನೊಂದನೇ ವಾರ್ಷಿಕೋತ್ಸವದ ಪ್ರಯುಕ್ತ ಗ್ರಾಹಕರ ಸಭೆಯು ಸಂಘದ ಅಧ್ಯಕ್ಷರಾದ “ಸಹಕಾರ ರತ್ನ’’ ಶ್ರೀಯುತ ಚಿತ್ತರಂಜನ್ ಬೋಳಾರ್ ರವರ ಅಧ್ಯಕ್ಷತೆಯಲ್ಲಿ ಸುರತ್ಕಲ್ ಶಾಖೆಯಲ್ಲಿ ಜರಗಿತು. ಈ ಕಾರ್ಯಕ್ರಮವನ್ನು ಸಂಘದ ಸದಸ್ಯರುಗಳಾದ ಶ್ರೀ ಮಾಧವ ಎಮ್ ಅಂಚನ್, ಶ್ರೀ ರಾಘವೇಂದ್ರ ಟಿ.ಎನ್ ಹಾಗೂ ಶ್ರೀಮತಿ ಪ್ರೇಮ ಅಮೀನ್ ರವರು ದೀಪ ಪ್ರಜ್ವಲನೆ ಮಾಡುವುದರ ಮೂಲಕ ಉದ್ಘಾಟಿಸಿದರು.

ಸಂಘದ ಸದಸ್ಯರಾದ ಶ್ರೀ ಕುಳಾಯಿ ಗಿರಿಯಪ್ಪ ರವರು ಮಾತನಾಡಿ ಶಾಖೆಯ ವಾರ್ಷಿಕೋತ್ಸವದ ಪ್ರಯುಕ್ತ ಆಯೋಜಿಸಲಾದ ಗ್ರಾಹಕರ ಸಭೆಗೆ ಸಂತಸವನ್ನು ವ್ಯಕ್ತ ಪಡಿಸಿದರು. ಸಿಬ್ಬಂದಿಗಳ ಕಾರ್ಯವೈಖರಿ ಹಾಗೂ ಇ ಸ್ಟಾಂಪಿOಗ್ ಸೇವೆಯ ಕುರಿತು ಉತ್ತಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದರು. ಗ್ರಾಹಕರಾದ ಶ್ರೀ ರಾಘವೆಂದ್ರ ಟಿ ಎನ್ ಮಾತನಾಡಿ ಆಯ್ದ ರಜಾ ದಿನಗಳಲ್ಲಿಯೂ ಕೂಡ ಇ ಸ್ಟಾಂಪಿOಗ್ ಸೇವೆಯನ್ನು ನೀಡುವುದರ ಕುರಿತು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಶ್ರೀ ಎಮ್ ಶಬ್ಬೀರ್ ಅಹಮದ್‌ರವರು ಮಾತಾನಾಡಿ ಸಂಘದಲ್ಲಿ ಲಭ್ಯವಿರುವ ಚಿನ್ನಾಭರಣ ಸಾಲದ ಕುರಿತು ಪ್ರಶಂಸಿದರು ಹಾಗೂ ಸಂಘದ ಎಲ್ಲಾ ಶಾಖೆಗಳು ಲಾಭವನ್ನು ಗಳಿಸಿ ಸ್ವಂತ ಕಟ್ಟಡವನ್ನು ಹೊಂದಲಿ ಎಂದು ಶುಭ ಹಾರೈಸಿದರು.
ಶ್ರೀ ಮಾಧವ ಎಮ್ ಅಂಚನ್ ಹಾಗೂ ಶ್ರೀ ರಾಜೀವ ಪೂಜಾರಿ ಗ್ರಾಹಕ ಸಭೆಗೆ ಶುಭವನ್ನು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಘದ ಅಧ್ಯಕ್ಷರಾದ “ಸಹಕಾರ ರತ್ನ’’ ಶ್ರೀಯುತ ಚಿತ್ತರಂಜನ್ ಬೋಳಾರ್ ರವರು ಮಾತನಾಡಿ ಶಾಖೆಯ ಹನ್ನೊಂದನೇ ವಾರ್ಷಿಕೋತ್ಸವಕ್ಕೆ ಹರ್ಷವನ್ನು ವ್ಯಕ್ತಪಡಿಸಿದರು. ನಮ್ಮ ಸಹಕಾರಿ ಸಂಘವು 2000 ಕೋಟಿ ವ್ಯವಹಾರ ಹೊಂದಿದ್ದು ಪ್ರಸಕ್ತ ಸಾಲಿನಲ್ಲಿ 3000 ಕೋಟಿ ವ್ಯವಹಾರ ಹೊಂದುವ ಗುರಿ ಹೊಂದಿದೆ .ಸುರತ್ಕಲ್ ವ್ಯಾಪ್ತಿಯಲ್ಲಿ ಇ ಸ್ಟಾಂಪಿOಗ್ ಸೇವೆ ಬೇಡಿಕೆಯನ್ನು ಮನಗೊಂಡು ಈ ಪ್ರದೇಶದಲ್ಲಿ ಶಾಖೆಯನ್ನು ತೆರೆಯಲಾಯಿತು.ಸಂಘದಲ್ಲಿ ಲಭ್ಯವಿರುವ ವಿಮಾ ಸೇವೆಯ ಜೊತೆಗೆ ಲಭ್ಯವಿರುವ ಎಲ್ಲಾ ಸೇವೆಗಳನ್ನು ಸದುಪಯೋಗ ಪಡೆದುಕೊಳ್ಳುವಂತೆ ಗ್ರಾಹಕರಲ್ಲಿ ವಿನಂತಿಸಿದರು. ಗ್ರಾಹಕರ ಸಲಹೆ ಸಹಕಾರವನ್ನು ಸದಾ ಬಯಸುತ್ತಾ ಸಂಘವು ಇನ್ನಷ್ಟು ಎತ್ತರಕ್ಕೆ ಏರಲು ಇನ್ನು ಮುಂದೆಯೂ ಗಾಹಕರು ಕೈ ಜೋಡಿಸುವಂತೆ ಹೇಳಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಶ್ರೀ ನೇಮಿರಾಜ್ ಪಿ, ನಿರ್ದೇಶಕರಾದ ಶ್ರೀ ರಮಾನಾಥ್ ಸನಿಲ್, ಶ್ರೀ ಗೋಪಾಲ್ ಎಮ್. ಶ್ರೀ ಬಿ.ಪಿ ದಿವಾಕರ್, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸೌಮ್ಯ ವಿಜಯ್, ಹೆಚ್ಚಿನ ಸಂಖ್ಯೆಯಲ್ಲಿ ಸಂಘದ ಗ್ರಾಹಕರು ಭಾಗವಹಿಸಿದ್ದರು.
ಹಿರಿಯ ಶಾಖಾಧಿಕಾರಿ ಶ್ರೀಮತಿ ರವಿಕಲಾ ಸ್ವಾಗತಿಸಿ, ಸುರತ್ಕಲ್ ಶಾಖೆಯ ಪ್ರಭಾರ ಶಾಖಾಧಿಕಾರಿಯಾದ ಕುಮಾರಿ ವಿದ್ಯಾಶ್ರೀ ರವರು ವಂದಿಸಿದರು. ಸುರತ್ಕಲ್ ಶಾಖೆಯ ಗುಮಾಸ್ತ ಶ್ರೀ ವರುಣ್ ರಾಜ್ ರವರು ಕಾರ್ಯಕ್ರಮ ನಿರೂಪಿಸಿದರು.