ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಬ್ಯಾಂಕಿAಗ್ ಸೇವೆಯ ಜೊತೆಗೆ ಆರೋಗ್ಯ ಪೂರ್ಣ ಸ್ವಸ್ಥ ಸಮಾಜ ನಿರ್ಮಾಣಕ್ಕೆ ನಿರಂತರವಾಗಿ ಆರೋಗ್ಯ ಕ್ಷೇತ್ರದಲ್ಲಿ ಸೇವೆಯನ್ನು ಸಲ್ಲಿಸುತ್ತಾ ಬರುತ್ತಿದೆ. ಟರ್ಟಲ್‌ಮಿಂಟ್ ಬ್ರೋಕಿಂಗ್ ಇನ್ಸೂರೆನ್ಸ್ ಕಂಪೆನಿಯ ಜೊತೆ ಒಡಂಬಡಿಕೆ ಮಾಡಿಕೊಂಡು ಆರೋಗ್ಯ, ವಾಹನ ಹಾಗೂ ಜೀವ ವಿಮಾ ಸೇವೆಯನ್ನು ಸಂಘದ ಸದಸ್ಯರಿಗೆ ಸ್ಮರ್ಧಾತಕ ದರದಲ್ಲಿ ನೀಡುತ್ತಾ ಬರುತ್ತಿದ್ದು, ಹೆಚ್ಚಿನ ಗ್ರಾಹಕರು ಇದರ ಪ್ರಯೋಜನವನ್ನು ಪಡೆದಿದ್ದಾರೆ. ಸಂಘವು ವಿಮಾ ಕ್ಷೇತ್ರದಲ್ಲಿ ಪ್ರತೀ ವರ್ಷ ಗರಿಷ್ಟ ಗುರಿಯನ್ನು ತಲುಪುತ್ತಿದ್ದು, ಸಾಧನೆಗೆ ಸತತ ೮ ವರ್ಷಗಳಿಂದ ವಿವಿಧ […]
Month: April 2024
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಬಜ್ಪೆ ಶಾಖೆಯ ದಶಮಾನೋತ್ಸವ ಹಾಗೂ ಗ್ರಾಹಕರ ಸಭೆಯು ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಘದ ಸದಸ್ಯರಾದ ಶ್ರೀ ಚಂದಪ್ಪ ಕುಂದರ್ ಹಾಗೂ ಶ್ರೀ ಪ್ರದೀಪ್ ಕುಮಾರ್ ಸುವರ್ಣ ದೀಪ ಪ್ರಜ್ವಲನೆ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಘದ ಸದಸ್ಯರಾದ ಪ್ರದೀಪ್ ಕುಮಾರ್ ಸುವರ್ಣ ಇವರು ಆತ್ಮಶಕ್ತಿಯ ಪ್ರಗತಿಯಲ್ಲಿ ಸಂಸ್ಥೆಯ ಆಡಳಿತ ಮಂಡಳಿಯ ಚುರುಕುತನ ಹಾಗೂ ಸಿಬ್ಬಂದಿಗಳ ನಗುಮೊಗದ ಸೇವೆಯಿಂದಾಗಿ ಅತೀ ಹೆಚ್ಚಿನ ವ್ಯವಹಾರ ಹೊಂದಲು ಕಾರಣವೆಂದು ಶ್ಲಾಘಿಸಿದರು. ಸಂಘವು ಅತೀ ಕಿರು ಅವಧಿಯಲ್ಲಿ ಸ್ವಂತ ಕಟ್ಟಡ ಹೊಂದಿ ಸಹಕಾರ ರಂಗದಲ್ಲಿಯೇ ಅತೀ ಉತ್ತಮ ಸ್ಥಾನ ಗಳಿಸಿದೆ. ಸಂಘದಲ್ಲಿ ಸದಸ್ಯರು ಪಡೆದ ಸಾಲವನ್ನು ಸರಿಯಾಗಿ ಮರುಪಾವತಿ ಮಾಡಿದ್ದಲ್ಲಿಮಾತ್ರ ಲಾಭ ಗಳಿಸಲು ಸಾಧ್ಯವಿದೆ ಎಂದರು.
ಸಂಘದ ಸದಸ್ಯರಾದ ಶ್ರೀ ಮಾಧವ ಎಮ್ ಅಮೀನ್ ರವರು ಮಾತನಾಡಿ ಸಿಬ್ಬಂದಿಗಳು ದೊಡ್ದ ಆಲದ ಮರದ ಬೇರುಗಳಿದ್ದಂತೆ. ಬೇರುಗಳು ಎಲ್ಲಾ ಕಡೆ ಹರಡಿ ಮರವನ್ನು ಭದ್ರವಾಗಿ ನಿಲ್ಲಿಸುವಲ್ಲಿ ಕಾರಣವಾಗುತ್ತದೆ. ಅಂತೆಯೇ ಸಿಬ್ಬಂದಿಗಳು ಸಂಘವನ್ನು ಮುನ್ನಡೆಸುವಲ್ಲಿ ಕಾರಣಕರ್ತರೆಂದು ಶ್ಲಾಘಿಸಿದರು. ಶ್ರೀ ವೈ ಕೃಷ್ಣಮೂರ್ತಿ ರಾವ್ ರವರು ಮಾತನಾಡಿ ಸಂಘದಲ್ಲಿ ೯೫% ಮಹಿಳಾ ಸಿಬ್ಬಂದಿಗಳು ಇದ್ದು, ಇದು ಮಹಿಳಾ ಸಬಲೀಕರಣಕ್ಕೆ ಕಾರಣವಾಗಿದ್ದು, ೧೦ ವರ್ಷಗಳಲ್ಲಿ ೩೦ ಶಾಖೆಗಳನ್ನು ತೆರೆದು ಎಲ್ಲಾ ಶಾಖೆಗಳಲ್ಲಿ ಶಾಖಾಧಿಕಾರಿಗಳು ಮಹಿಳೆಯರೇ ಇರುವುದನ್ನು ಶ್ಲಾಘಿಸಿದರು. ಶ್ರೀ ವಿಶ್ವನಾಥ್ […]
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಪಡೀಲ್ ಮಂಗಳೂರು ಇದರ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಸಂಘದ ಪ್ರಧಾನ ಕಛೇರಿ ಪಡೀಲ್‌ನಲ್ಲಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್‌ರವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾದನೆಗೈದಿರುವ ಸಾಧಕ ಮಹಿಳೆಯರಾದ ಸಿ.ಸಿ.ಬಿ ಕ್ರೆöÊಮ್, ಮಂಗಳೂರು ಇದರ ಸಹಾಯಕ ಪೋಲೀಸ್ ಆಯುಕ್ತರಾಗಿರುವ ಶ್ರೀಮತಿ ಗೀತಾ ಕುಲಕರ್ಣಿ ಹಾಗೂ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕುಮಾರಿ ಭಾಗೀರಥಿ ಮುರುಳ್ಯ ಇವರಿಗೆ “ಆತ್ಮಸಮ್ಮಾನ” ಪ್ರಶಸ್ತಿಯನ್ನು ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್‌ರವರು ನೀಡಿ ಗೌರವಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿ.ಸಿ.ಬಿ. ಕ್ರೆöÊಮ್, ಮಂಗಳೂರು ಇದರ ಸಹಾಯಕ ಪೋಲೀಸ್ ಆಯುಕ್ತರಾಗಿರುವ ಶ್ರೀಮತಿ ಗೀತಾ ಕುಲಕರ್ಣಿ “ಹೆಣ್ಣು ಎಲ್ಲರಿಗೂ ಆದರ್ಶಪ್ರಾಯಳು. ಏಕೆಂದರೆ ಎಲ್ಲಾ ಕೆಲಸಗಳನ್ನು ನಿಭಾಯಿಸಬಲ್ಲ ಶಕ್ತಿಯನ್ನು ಹೊಂದಿರುತ್ತಾಳೆ. ಒಂದು ಕಡೆ ಮನೆ ಜವಾಬ್ದಾರಿ, ಇನ್ನೊಂದು ಕಡೆ ಮನೆ , ಮಕ್ಕಳ ಜವಾಬ್ದಾರಿಯ ಜೊತೆ ಕೆಲಸದ ಹೊಣೆಗಾರಿಕೆ. ಹೆಣ್ಣು ಸಹನಾಮಯಿ, ಹಾಗೂ ಹೆಣ್ಣು ಮನಸ್ಸು ಮಾಡಿದರೆ ಯಾವುದೇ ಕೆಲಸವನ್ನು ಯಾವುದೇ ಹಿಂಜರಿಕೆ ಇಲ್ಲದೆ ಎಲ್ಲರಿಗೂ ಅನುಕೂಲವಾಗುವ ರೀತಿಯಲ್ಲೇ ನಿಭಾಯಿಸುವಳು ಎಂದು ಕೆಲವು ಆದರ್ಶ ಮಹಿಳೆಯರ ಹೆಸರುಗಳನ್ನು […]
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಪಡೀಲ್ ಮಂಗಳೂರು ಇದರ ಅಳದಂಗಡಿ ಶಾಖೆಯ ಪ್ರಥಮ ವಾರ್ಷಿಕೋತ್ಸವದ ಪ್ರಯುಕ್ತ ಜೆಸಿಐ ಬೆಳ್ತಂಗಡಿ ಮಂಜುಶ್ರೀ, ಹಿಂದು ಯುವಶಕ್ತಿ ಆಲಡ್ಕ ಕ್ಷೇತ್ರ ಸಮಾಜ ಸೇವಾ ಸಂಘಟನೆ, ನಾರಾಯಣ ಗುರು ಸ್ವಾಮಿ ಸೇವಾ ಸಂಘ ಅಳದಂಗಡಿ ವಲಯ, ರೋಟರಿ ಕ್ಲಬ್ ಬೆಳ್ತಂಗಡಿ ಇವರ ಜಂಟಿ ಸಹಯೋಗದೊಂದಿಗೆ ಎ.ಜೆ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ, ಮಂಗಳೂರು, ಇಂಡಿಯನ್ ಕ್ಯಾನ್ಸರ್ ಸೊಸೈಟಿ ಮತ್ತು ಕೆ.ಎಂ.ಸಿ ಆಸ್ಪತ್ರೆ ಅತ್ತಾವರ, ಮಂಗಳೂರು ಇವರ ವೈದರ ತಂಡದವರಿAದ ಉಚಿತ ನೇತ್ರ ತಪಾಸಣೆ, ದಂತ ಚಿಕಿತ್ಸೆ, ಕ್ಯಾನ್ಸರ್ ತಪಾಸಣೆ ಮತ್ತು ಸಾಮಾನ್ಯ ವೈದ್ಯಕೀಯ ತಪಾಸಣಾ ಶಿಬಿರ ಹಾಗೂ ಭಾರತೀಯ ಅಂಚೆ ಇಲಾಖೆ- ಬೆಳ್ತಂಗಡಿ ವಿಭಾಗದ ವತಿಯಿಂದ ಆಧಾರ್ ಕಾರ್ಡ್ ನೋಂದಣಿ ಹಾಗೂ ತಿದ್ದುಪಡಿ ಶಿಬಿರವು ಶ್ರೀಗುರು ಸಭಾಭವನ , ಅಳದಂಗಡಿ ಇಲ್ಲಿ ನಡೆಸಲಾಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಜೆಸಿಐ ಬೆಳ್ತಂಗಡಿ ಮಂಜುಶ್ರೀ, ಇದರ ಅಧ್ಯಕ್ಷರಾದ ಶ್ರೀಯುತ ರಂಜಿತ್ ಯಚ್.ಡಿ ಇವರು ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಶಿಬಿರವನ್ನು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಮಾಡುತ್ತಿರುವುದು ಒಂದು ಒಳ್ಳೆಯ ಕೆಲಸ, ಯಾಕೆಂದರೆ ಆರೋಗ್ಯದಿಂದ ಇದ್ದರೆ ಮಾತ್ರ ಬೇರೆ ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯ. ಈ ಆರೋಗ್ಯ ಶಿಬಿರದ ಮುಖ್ಯ ಉದ್ದೇಶವೆನೆಂದರೆ ಮಂಗಳೂರಿಗೆ ಹೋಗಿ ಆರೋಗ್ಯ ತಪಾಸಣೆ ಮಾಡುವುದು ಕೆಲವರಿಗೆ ಅಸಾಧ್ಯ ಅಂತವರಿಗೆ ಈ ಶಿಬಿರವು ತುಂಬಾ ಸಹಕಾರಿಯಾಗುತ್ತದೆ. ಇಂತಹ ಉತ್ತಮ ಸಮಾಜಮುಖಿ ಕಾರ್ಯವನ್ನು ಮಾಡಿರುವ […]