ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಪಡೀಲ್ ಮಂಗಳೂರು ಇದರ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಸಂಘದ ಪ್ರಧಾನ ಕಛೇರಿ ಪಡೀಲ್‌ನಲ್ಲಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್‌ರವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾದನೆಗೈದಿರುವ ಸಾಧಕ ಮಹಿಳೆಯರಾದ ಸಿ.ಸಿ.ಬಿ ಕ್ರೆöÊಮ್, ಮಂಗಳೂರು ಇದರ ಸಹಾಯಕ ಪೋಲೀಸ್ ಆಯುಕ್ತರಾಗಿರುವ ಶ್ರೀಮತಿ ಗೀತಾ ಕುಲಕರ್ಣಿ ಹಾಗೂ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕುಮಾರಿ ಭಾಗೀರಥಿ ಮುರುಳ್ಯ ಇವರಿಗೆ “ಆತ್ಮಸಮ್ಮಾನ” ಪ್ರಶಸ್ತಿಯನ್ನು ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್‌ರವರು ನೀಡಿ ಗೌರವಿಸಿದರು.


ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿ.ಸಿ.ಬಿ. ಕ್ರೆöÊಮ್, ಮಂಗಳೂರು ಇದರ ಸಹಾಯಕ ಪೋಲೀಸ್ ಆಯುಕ್ತರಾಗಿರುವ ಶ್ರೀಮತಿ ಗೀತಾ ಕುಲಕರ್ಣಿ “ಹೆಣ್ಣು ಎಲ್ಲರಿಗೂ ಆದರ್ಶಪ್ರಾಯಳು. ಏಕೆಂದರೆ ಎಲ್ಲಾ ಕೆಲಸಗಳನ್ನು ನಿಭಾಯಿಸಬಲ್ಲ ಶಕ್ತಿಯನ್ನು ಹೊಂದಿರುತ್ತಾಳೆ. ಒಂದು ಕಡೆ ಮನೆ ಜವಾಬ್ದಾರಿ, ಇನ್ನೊಂದು ಕಡೆ ಮನೆ , ಮಕ್ಕಳ ಜವಾಬ್ದಾರಿಯ ಜೊತೆ ಕೆಲಸದ ಹೊಣೆಗಾರಿಕೆ. ಹೆಣ್ಣು ಸಹನಾಮಯಿ, ಹಾಗೂ ಹೆಣ್ಣು ಮನಸ್ಸು ಮಾಡಿದರೆ ಯಾವುದೇ ಕೆಲಸವನ್ನು ಯಾವುದೇ ಹಿಂಜರಿಕೆ ಇಲ್ಲದೆ ಎಲ್ಲರಿಗೂ ಅನುಕೂಲವಾಗುವ ರೀತಿಯಲ್ಲೇ ನಿಭಾಯಿಸುವಳು ಎಂದು ಕೆಲವು ಆದರ್ಶ ಮಹಿಳೆಯರ ಹೆಸರುಗಳನ್ನು ಪ್ರಸ್ತಾವಿಸಿದರು. ಮಹಿಳೆಯರು ಸೈಬರ್ ಅಪರಾಧದ ಬಗ್ಗೆ ಜಾಗೃತಿಯನ್ನು ಹೊಂದಬೇಕೆAದು ಸಲಹೆಗಳನ್ನು ನೀಡಿದರು.
ನಂತರ ಮಾತನಾಡಿದ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕುಮಾರಿ ಭಾಗೀರಥಿ ಮುರುಳ್ಯ “ಮಹಿಳಾ ದಿನವನ್ನು ಒಂದೇ ದಿನಕ್ಕೆ ಸೀಮಿತಗೊಳಿಸಬಾರದು. ಯಾಕೆಂದರೆ ಮನೆ, ಕುಟುಂಬ, ಕಚೇರಿ, ಮಕ್ಕಳು, ಕೆಲಸ ಹೀಗೆ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸುವ ಹೆಣ್ಣಿನ ಶಕ್ತಿಗೆ ಅದರದ್ದೇ ಆದ ಮಹತ್ವವಿದೆ. ಇದೇ ಕಾರಣಕ್ಕೆ ಹೆಣ್ಣಿಗೆ ಒಂದು ದಿನ ಮೀಸಲಿಟ್ಟು ಆಕೆಯ ಶ್ರಮ, ನಿಸ್ವಾರ್ಥ ಕೆಲಸವನ್ನು ಗೌರವಿಸಲಾಗುತ್ತದೆ. ಇದು ಪ್ರತಿಯೊಬ್ಬರ ಬದುಕಿನಲ್ಲೂ ಪ್ರಮುಖ ಪಾತ್ರ ವಹಿಸುವ ಹೆಣ್ಣಿಗೆ ಧನ್ಯವಾದ ಹೇಳುವ ಅವಕಾಶವೂ ಹೌದು. ಮಹಿಳಾ ದಿನಾಚರಣೆಯಂದು ಮಹಿಳೆಯರನ್ನು ಸನ್ಮಾನಿಸುವ ಜೊತೆಗೆ ಮಹಿಳೆಯರನ್ನು ಪ್ರೀತಿ ವಾತ್ಸಲ್ಯದಿಂದ ನೋಡಿಕೊಳ್ಳುತ್ತಿರುವ ಮಹಿಳೆಯರ ಗಂಡದಿರನ್ನು ಗುರುತಿಸಿ ಸನ್ಮಾನ ಮಾಡಿದರೆ ಎಲ್ಲ ಗಂಡಸರು ಅವರ ಪತ್ನಿಯರನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂದರು. ಜೊತೆಗೆ ಎಲ್ಲರಿಗೂ ಮಹಿಳಾ ದಿನಾಚರಣೆಗೆ ಶುಭಾಶಯವನ್ನು ಕೋರಿದರು.
ವೇದಿಕೆಯಲ್ಲಿ ಅಳಪೆ ವಾರ್ಡಿನ ಕಾರ್ಪೋರೇಟರ್ ಆಗಿರುವ ಶ್ರೀಮತಿ ರೂಪಶ್ರೀ ಪೂಜಾರಿ, ಕಣ್ಣೂರು ವಾರ್ಡಿನ ಕಾರ್ಪೋರೇಟರ್ ಆಗಿರುವ ಶ್ರೀಮತಿ ಚಂದ್ರಾವತಿ ವಿಶ್ವನಾಥ್, ಜಪ್ಪಿನಮೊಗರು ವಾರ್ಡಿನ ಕಾರ್ಪೋರೇಟರ್ ಆಗಿರುವ ಶ್ರೀಮತಿ ವೀಣಾ ಮಂಗಳ, ಬ್ರಹ್ಮಶ್ರೀ ನಾರಾಯಣಗುರುಸ್ವಾಮಿ ಪ್ರಕಾಶನ ಮತ್ತು ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷರಾದ ಶ್ರೀ ವಾಮನ್ ಕೆ. ಸಂಘದ ಉಪಾಧ್ಯಕ್ಷರಾದ ಶ್ರೀ ನೇಮಿರಾಜ್ ಪಿ, ಮತ್ತಿತ್ತರರು ಉಪಸ್ಥಿತರಿದ್ದರು.
ಸಂಘದ ನಿರ್ದೇಶಕರಾದ ಶ್ರೀ ಜಿ ಪರಮೇಶ್ವರ್ ಪೂಜಾರಿ, ಶ್ರೀ ಚಂದ್ರಹಾಸ್ ಮರೋಳಿ, ಶ್ರೀ ದಿವಾಕರ ಬಿ,ಪಿ., ಶ್ರೀ ಗೋಪಾಲ್ ಎಂ. ಹಾಗೂ ಸಲಹೆಗಾರರಾದ ಶ್ರೀ ಅಶೋಕ್ ಕುಮಾರ್ ಹಾಗೂ ಮತ್ತಿತರರು ಭಾಗವಹಿಸಿದ್ದರು.
ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ರವರು ಸ್ವಾಗತಿಸಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸೌಮ್ಯ ವಿಜಯ್ ಇವರು ವಂದಿಸಿದರು.ಸAಘದ ಸಿಬ್ಬಂದಿಯಾದ ಕುಮಾರಿ ಹರ್ಷಿತಾ ಕಾರ್ಯಕ್ರಮವನ್ನು ನಿರೂಪಿಸಿದರು.