ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಬಜ್ಪೆ ಶಾಖೆಯ ದಶಮಾನೋತ್ಸವ ಹಾಗೂ ಗ್ರಾಹಕರ ಸಭೆಯು ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಘದ ಸದಸ್ಯರಾದ ಶ್ರೀ ಚಂದಪ್ಪ ಕುಂದರ್ ಹಾಗೂ ಶ್ರೀ ಪ್ರದೀಪ್ ಕುಮಾರ್ ಸುವರ್ಣ ದೀಪ ಪ್ರಜ್ವಲನೆ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಘದ ಸದಸ್ಯರಾದ ಪ್ರದೀಪ್ ಕುಮಾರ್ ಸುವರ್ಣ ಇವರು ಆತ್ಮಶಕ್ತಿಯ ಪ್ರಗತಿಯಲ್ಲಿ ಸಂಸ್ಥೆಯ ಆಡಳಿತ ಮಂಡಳಿಯ ಚುರುಕುತನ ಹಾಗೂ ಸಿಬ್ಬಂದಿಗಳ ನಗುಮೊಗದ ಸೇವೆಯಿಂದಾಗಿ ಅತೀ ಹೆಚ್ಚಿನ ವ್ಯವಹಾರ ಹೊಂದಲು ಕಾರಣವೆಂದು ಶ್ಲಾಘಿಸಿದರು. ಸಂಘವು ಅತೀ ಕಿರು ಅವಧಿಯಲ್ಲಿ ಸ್ವಂತ ಕಟ್ಟಡ ಹೊಂದಿ ಸಹಕಾರ ರಂಗದಲ್ಲಿಯೇ ಅತೀ ಉತ್ತಮ ಸ್ಥಾನ ಗಳಿಸಿದೆ. ಸಂಘದಲ್ಲಿ ಸದಸ್ಯರು ಪಡೆದ ಸಾಲವನ್ನು ಸರಿಯಾಗಿ ಮರುಪಾವತಿ ಮಾಡಿದ್ದಲ್ಲಿಮಾತ್ರ ಲಾಭ ಗಳಿಸಲು ಸಾಧ್ಯವಿದೆ ಎಂದರು.


ಸಂಘದ ಸದಸ್ಯರಾದ ಶ್ರೀ ಮಾಧವ ಎಮ್ ಅಮೀನ್ ರವರು ಮಾತನಾಡಿ ಸಿಬ್ಬಂದಿಗಳು ದೊಡ್ದ ಆಲದ ಮರದ ಬೇರುಗಳಿದ್ದಂತೆ. ಬೇರುಗಳು ಎಲ್ಲಾ ಕಡೆ ಹರಡಿ ಮರವನ್ನು ಭದ್ರವಾಗಿ ನಿಲ್ಲಿಸುವಲ್ಲಿ ಕಾರಣವಾಗುತ್ತದೆ. ಅಂತೆಯೇ ಸಿಬ್ಬಂದಿಗಳು ಸಂಘವನ್ನು ಮುನ್ನಡೆಸುವಲ್ಲಿ ಕಾರಣಕರ್ತರೆಂದು ಶ್ಲಾಘಿಸಿದರು.
ಶ್ರೀ ವೈ ಕೃಷ್ಣಮೂರ್ತಿ ರಾವ್ ರವರು ಮಾತನಾಡಿ ಸಂಘದಲ್ಲಿ ೯೫% ಮಹಿಳಾ ಸಿಬ್ಬಂದಿಗಳು ಇದ್ದು, ಇದು ಮಹಿಳಾ ಸಬಲೀಕರಣಕ್ಕೆ ಕಾರಣವಾಗಿದ್ದು, ೧೦ ವರ್ಷಗಳಲ್ಲಿ ೩೦ ಶಾಖೆಗಳನ್ನು ತೆರೆದು ಎಲ್ಲಾ ಶಾಖೆಗಳಲ್ಲಿ ಶಾಖಾಧಿಕಾರಿಗಳು ಮಹಿಳೆಯರೇ ಇರುವುದನ್ನು ಶ್ಲಾಘಿಸಿದರು.
ಶ್ರೀ ವಿಶ್ವನಾಥ್ ರೆಂಜಾಳ , ಶ್ರೀ ಚಿತ್ತರಂಜನ್ ಸಾಲ್ಯಾನ್ ಹಾಗೂ ಶ್ರೀ ಬಾಲಕೃಷ್ಣ ಸುವರ್ಣರವರು ಸಂಘದ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್‌ರವರು ಮಾತನಾಡಿ ಬಜ್ಪೆ ವಠಾರದಲ್ಲಿ ಬೇರೆ ಬೇರೆ ರಾಷ್ಟಿçÃಯ ಹಾಗೂ ಸಹಕಾರಿ ಬ್ಯಾಂಕುಗಳು ಇದ್ದರೂ ನಮ್ಮ ಸಂಘವೂ ಗ್ರಾಹಕರಿಗೆ ಸೇವೆ ಒದಗಿಸುವುದರಲ್ಲಿ ಮುಂಚೂಣಿಯಲ್ಲಿರುವುದು ಹಾಗೂ ದಶ ವರುಷಗಳನ್ನು ಯಶಸ್ವಿಯಾಗಿ ಪೂರೈಸಿರುವುದು ಶ್ಲಾಘನೀಯ ವಿಷಯ. ಬಜ್ಪೆ ಶಾಖೆಯ ವ್ಯವಹಾರ ದೂರದ ಕೈಕಂಬ , ಕಟೀಲು ಹಾಗೂ ಕಾವೂರಿನವರೆಗೂ ವ್ಯಾಪಿಸಿದೆ. ಇದು ಇನ್ನಷ್ಟು ಶಾಖೆಗಳನ್ನು ತೆರೆಯಲು, ಜನರಿಗೆ ಸೇವೆ ಒದಗಿಸಲು ಪ್ರೇರಣೆಯಾಗುತ್ತಿದೆ. ಸಂಘದಲ್ಲಿ ಲಭ್ಯವಿರುವ ವಾಹನ ,ಆರೋಗ್ಯ, ಜೀವ ವಿಮಾ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಸರಕಾರದ ಯೋಜನೆಯಾದ ಯಶಸ್ವಿನಿ ಯೋಜನೆಯ ನೋಂದಣಿಯು ಮಾರ್ಚ್ ೩೧ರ ವರೆಗೆ ಸರಕಾರವು ವಿಸ್ತರಿಸಿದ್ದು, ಸಂಘದ ಸದಸ್ಯರು ಇದರ ಸದುಪಯೋಗ ಪಡೆದುಕೊಳ್ಳುವಂತೆ ವಿನಂತಿಸಿದರು.
ಸಂಘದ ಉಪಾಧ್ಯಕ್ಷರಾದ ಶ್ರೀ ನೇಮಿರಾಜ್.ಪಿ., ಮುಖ್ಯಕಾರ್ಯನಿರ್ವಣಾಧಿಕಾರಿಯಾದ ಶ್ರೀಮತಿ ಸೌಮ್ಯವಿಜಯ್ ಉಪಸ್ಥಿತರಿದ್ದರು. ಸಿಬ್ಬಂದಿಯಾದ ಕುಮಾರಿ ಪ್ರೀತಿಕಾ ಸ್ವಾಗತಿಸಿ, ಕುಮಾರಿ ಸ್ವಾತಿ ವಂದಿಸಿದರು. ಶಾಖಾಧಿಕಾರಿಯಾದ ಶ್ರೀಮತಿ ಹರ್ಷಿತಾ ಕಾರ್ಯಕ್ರಮವನ್ನು ನಿರೂಪಿಸಿದರು.