ಈ ಕಾರ್ಯಕ್ರಮವನ್ನು ಸಮುದಾಯ ದಂತ ಆರೋಗ್ಯ ವಿಭಾಗ , ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ, ದೇರಳ ಕಟ್ಟೆ ಇಲ್ಲಿನ ವೈದ್ಯರಾದ ಡಾ| ಶ್ರೀಮತಿ ಅಪೂರ್ವ ಕೋಟ್ಯಾನ್ ಉದ್ಘಾಟಿಸಿ ಮಾತನಾಡಿ ಸಮಾಜದ ಎಲ್ಲಾ ಜನರು ಉದ್ಯೋಗದ ಜೊತೆ ತಮ್ಮ ಆರೋಗ್ಯದ ಕಾಲಜಿಯನ್ನು ನೋಡಿಕೊಳ್ಳಬೇಕು ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಯ ಹಸಿರು ಕಾರ್ಡನ್ನು ವಿತರಿಸಲಾಗುವುದು ಶಿಬಿರಾರ್ಥಿಗಳು ಇದರ ಸದುಪಯೋಗವನ್ನು ಪಡೆಡುಕೊಳ್ಳಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ಇವರು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಕಳೆದ ೧೨ ವರ್ಷಗಳಿಂದ ವೈದ್ಯಕೀಯ ಶಿಬಿರವನ್ನು ನಿರಂತರ ಏರ್ಪಡಿಸುತ್ತಿದ್ದು, ಸಾರ್ವಜನಿಕರು ಇದರ ಸಂಪೂರ್ಣ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಸಂಘದ ೬೫ನೇ ಉಚಿತ ವೈದ್ಯಕೀಂiÀi ಶಿಬಿರವು ಇದಾಗಿದ್ದು, ಮುಂದಿನ ದಿನಗಳಲ್ಲಿ ಉಳ್ಳಾಲದ ಪರಿಸರದಲ್ಲೂ ಶಿಬಿರವನ್ನು ಆರೋಜಿಸಲಾಗುವುದೆಂದು ತಿಳಿಸಿದರು. ಸಂಘವು ೨೦೨೩-೨೪ ನೇ ಸಾಲಿನಲ್ಲಿ ೩.೩ ಕೋಟಿ ಲಾಭ ಗಳಿಸಿರುವುದು ಸಂಘದ ಪ್ರಗತಿಗೆ ಕಾರಣವಾಗಿದೆ. ಸಂಘವು ಈ ಆರ್ಥಿಕ ಸಾಲಿನಲ್ಲಿ ೫ ಶಾಖೆಗಳನ್ನು ಪಕ್ಷಿಕೆರೆ, ಎಲ್ಯಾರ್ ಪದವು, ಕೃಷ್ಣಾಪುರ, ಕಲ್ಲಾಪು ಮತ್ತು ಮೂಡಬಿದಿರೆಯಲ್ಲಿ ತೆರೆಯಲಾಗುವುದು.
ಸಂಘ ಲಾಭದಲ್ಲಿ ಸಂಘದ ಸದಸ್ಯರ ಆರೋಗ್ಯ ಕಾಳಜಿಯಿಂದ ಇಂತಹ ಆರೋಗ್ಯ ಶಿಬಿರವನ್ನು ಆಯೋಜಿಸಿದ್ದು, ಸಂಘದ ಸದಸ್ಯರಿಗೆ ಕೋರೋನ ಸಮಯದಲ್ಲಿ ಶೇ ೪ ರ ಬಡ್ಡಿದಲ್ಲಿ ಚಿನ್ನಾಭರಣ ಸಾಲ ಮತ್ತು ಮನ್ಸೂನ್ ಸಮಯದಲ್ಲಿಯೂ ಕೂಡ ಮನ್ಸೂನ್ ವಿಶೇಷ ಬಡ್ಡಿದರದಲ್ಲಿ ಸಾಲವನ್ನು ನೀಡಿ ಆರ್ಥಿಕವಾಗಿ ಸಹಕಾರಿಯಾಗಿರುವುದು ಸಮಾಜಿಕ ಕೈಗನ್ನಡಿಯಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷರಾದ ಶ್ರೀ ನೇಮಿರಾಜ್ ನಿರ್ದೇಶಕರಾದ ಶ್ರೀ ಆನಂದ ಎಸ್. ಕೊಂಡಾಣ ಮತ್ತು ಶ್ರೀ ಗೋಪಾಲ್ ಎಮ್, ಚಂದ್ರಹಾಸ್ ಮರೋಳಿ ಹಾಗೂ ಶ್ರೀ ಶಿರಡಿ ಸಾಯಿಬಾಬಾ ಮಂದಿರದ ಆಡಳಿತ ಮೋಕ್ತೇಸರರಾದ ಶ್ರೀ ಸುರೇಶ್ ಕೆ.ಪಿ ಮತ್ತು ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ ಇಲ್ಲಿನ ವೈದ್ಯರಾದ ಡಾ| ಶ್ರೀಮತಿ ಅಪೂರ್ವ ಕೋಟ್ಯಾನ್ ಹಾಗೂ ಪಿ.ಆರ್.ಓ ಆದ ಶ್ರೀ ಭರತ್ ಕುಮಾರ್ ಮತ್ತು ಕೆಎಂಸಿ ಆಸ್ಪತ್ರೆ ಅತ್ತಾವರ ಇಲ್ಲಿನ ವೈದ್ಯರಾದ ಶ್ರೀ ಡಾ| ಸಂಜನಾ ಮತ್ತು ಡಾ| ರಾಹುಲ್ ಹಾಗೂ ನಮ್ಮ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿಯಾದ ಶ್ರೀಮತಿ ಸೌಮ್ಯ ವಿಜಯ್ ಇವರು ಉಪಸ್ಥಿತರಿದ್ದರು.
ಈ ಶಿಬಿರದಲ್ಲಿ ಸುಮಾರು ೨೦೦ ಕ್ಕೂ ಮಿಕ್ಕಿ ಶಿಬಿರಾರ್ಥಿಗಳು ವೈದ್ಯಕೀಯ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.
ಸAಘದ ಹಿರಿಯ ಶಾಖಾಧಿಕಾರಿಯಾದ ಶ್ರೀಮತಿ ರವಿಕಲಾ ವಿಶ್ವನಾಥ್ ಸ್ವಾಗತಿಸಿ., ಉಳ್ಳಾಲ ಶಾಖೆಯ ಶಾಖಾಧಿಕಾರಿಯಾದ ಶ್ರೀಮತಿ ಭವ್ಯ ಯೋಗೀಶ್ ರವರು ವಂದಿಸಿದರು. ಮಾಡೂರು ಶಾಖೆಯ ಶಾಖಾಧಿಕಾರಿ ಶ್ರೀಮತಿ ಸೌಮ್ಯಲತಾ ರವರು ಕಾರ್ಯಕ್ರಮ ನಿರೂಪಿಸಿದರು.