ಈ ಕಾರ್ಯಕ್ರಮವನ್ನು “ಪರಿಸರ ಸೇವಾ ರತ್ನ” ರಾಜ್ಯ ಪ್ರಶಸ್ತಿ ಪುರಸ್ಕöÈತರು ಹಾಗೂ ತಾರಸಿ ಕೃಷಿಕರಾದ ಶ್ರೀ ಕೃಷ್ಣಪ್ಪ ಗೌಡ ಪಡ್ಡಂಬೈಲ್ ರವರು ಸಸಿ ನೆಡುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಪ್ರತಿಯೊಬ್ಬರು ಮನೆಯಲ್ಲಿ ಒಂದು ಗಿಡವನ್ನು ಬೆಳೆಸಬೇಕು. ಗಿಡ ನೆಡುವುದರ ಜೊತೆಗೆ ನೆಟ್ಟ ಗಿಡಗಳನ್ನು ಚೆನ್ನಾಗಿ ಪೋಷಿಸಿ ಪರಿಸರ ಸಂರಕ್ಷಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದರು
ಅಧ್ಯಕ್ಷತೆ ವಹಿಸಿದ್ದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್‌ರವರು ಮಾತನಾಡಿ ಮನೆಯ ಸುತ್ತಮುತ್ತ ಗಿಡ ನೆಡಲು ಸ್ಥಳಾವಕಾಶ ಇಲ್ಲದ ಸಂದರ್ಭದಲ್ಲಿ ಎಲ್ಲಾ ರೀತಿಯ ಗಿಡಗಳನ್ನು ತನ್ನ ಮನೆಯ ತಾರಸಿಯಲ್ಲಿ ಬೆಳೆಸಿ ಶ್ರೀಯುತ ಕೃಷ್ಣಪ್ಪ ಗೌಡ ಪಡ್ಡಂಬೈಲ್‌ರವರು ಇತರರಿಗೆ ಮಾದರಿಯಾಗಿದ್ದಾರೆ ಎಂದರು. ಮನೆಯ ತಾರಸಿಯಲ್ಲಿ ಗಿಡಗಳನ್ನು ಬೆಳೆಸುವುದರಿಂದ ವಾತಾವರಣದಲ್ಲಿ ಶುದ್ದ ಗಾಳಿಯು ದೊರೆಯುತ್ತದೆ. ಶ್ರೀಯುತರು ಕಳೆದ ೨೫ ವರ್ಷಗಳಿಂದ ತನ್ನ ಮನೆಯ ತಾರಸಿಯಲ್ಲಿ ಗಿಡಗಳನ್ನು ಬೆಳೆದು ಪರಿಸರ ಸಂರಕ್ಷಣೆಗೆ ಮಹತ್ತರವಾದ ಕೊಡುಗೆಯನ್ನು ನೀಡಿದ್ದಾರೆ ಎಂದರು. ಸಂಘದ ವತಿಯಿಂದ ಪಡೀಲ್ ರಾಷ್ಟಿçÃಯ ಹೆದ್ದಾರಿಯ ಡಿವೈಡರ್ ಹಾಗೂ ಸುತ್ತಮುತ್ತ ಪರಿಸರದಲ್ಲಿ ಗಿಡಗಳನ್ನು ನೆಡಲಾಗಿದೆ ಎಂದರು.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷರಾದ ಶ್ರೀ ನೇಮಿರಾಜ್ ಪಿ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸೌಮ್ಯ ವಿಜಯ್, ಸಲಹೆಗಾರರಾದ ಶ್ರೀ ಅಶೋಕ್ ಕುಮಾರ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.