ನವಚೇತನ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷರಾದ ಸಿಎ.ಅನಂತಪದ್ಮನಾಭ ಇವರು ಮಾತನಾಡಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ತನ್ನ ಲಾಭಾಂಶದಲ್ಲಿ ಒಂದು ಭಾಗವನ್ನು ಇಂತಹ ಉಚಿತ ಆರೋಗ್ಯ ಶಿಬಿರ ಹಾಗೂ ಸಮಾಜಮುಖಿ ಕೆಲಸಗಳಿಗೆ ವಿನಿಯೋಗಿಸುವುದು ಸಂತಸದ ವಿಷಯ. ನಾನು ಸಂಘದ ಪ್ರಗತಿಯನ್ನು ಕಂಡಾಗ ಪ್ರತಿಯೊಂದು ಕರ‍್ಯಕ್ರಮಗಳು ಗ್ರಾಹಕಸ್ನೇಹಿಯಾಗಿ ಸಂಘವು ಅತೀ ಕಡಿಮೆ ಅವಧಿಯಲ್ಲಿ ಶಾಖೆಗಳನ್ನು ತೆರೆದು ಆ ಮೂಲಕ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.
ಅತಿಥಿಗಳಾಗಿ ಭಾಗವಾಹಿಸಿದ ಇಂಜಿನಿಯರ್ ಸತೀಶ್ ಕುಮಾರ್ ಕುಂಡೇವು ಮಾತನಾಡಿ ಸುಬ್ರಹ್ಮಣ್ಯ ಭಜನಾ ಮಂದಿರದಲ್ಲಿ ಧರ‍್ಮಿಕ ಸಾಮಾಜಿಕ ಚಟುವಟಿಕೆ ನಿರಂತರವಾಗಿ ನಡೆಯುತ್ತಿದ್ದು. ಆರೋಗ್ಯ ಶಿಬಿರವನ್ನು ರ‍್ಪಡಿಸುವ ಮೂಲಕ ಜನರ ಸ್ವಾಸ್ಥ್ಯವನ್ನು ಕಾಪಾಡುವುದರಲ್ಲಿ ಮುಖ್ಯ ಪಾತ್ರ ವಹಿಸಿದೆ .ವೈದ್ಯೋ ನಾರಾಯಣ ಹರಿ ಎಂಬಂತೆ ವೈದ್ಯರ ಪಾಲು ಅತ್ಯಮೂಲ್ಯ ಎಂದರು.ನೀರುಮರ‍್ಗದಂತಹ ಗ್ರಾಮೀಣ ಪರಿಸರದಲ್ಲಿ ಇಂತಹ ಶಿಬಿರವನ್ನು ಆಯೋಜಿಸಿರುವುದು ಉತ್ತಮ ಕರ‍್ಯ ಎಂದು ಶ್ಲಾಘಿಸಿದರು.
ಈ ಕರ‍್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ರವರು ಮಾತನಾಡಿ ‘ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಪ್ರತೀ ರ‍್ಷ ಶಾಖೆಗಳ ವರ‍್ಷಿಕೋತ್ಸವದ ಸಂರ‍್ಭದಲ್ಲಿ ಸರ‍್ವಜನಿಕರ ಆರೋಗ್ಯದ ದೃಷ್ಟಿಯಿಂದ ನಿರಂತರವಾಗಿ ಆರೋಗ್ಯ ಶಿಬಿರವನ್ನು ರ‍್ಪಡಿಸುತ್ತಾ ಬಂದಿದ್ದು, ಇದು ಸಂಘದ ೬೭ನೇ ಉಚಿತ ವೈದ್ಯಕೀಯ ಶಿಬಿರವಾಗಿದೆ. ನಮ್ಮ ಶಿಬಿರಗಳಲ್ಲಿ ಕೇವಲ ರ‍್ಥಿಕ ದರ‍್ಬಲರಷ್ಟೇ ಅಲ್ಲ ಅನುಕೂಲಸ್ಥರು ಕೂಡ ತಮ್ಮ ಕೆಲಸದ ಒತ್ತಡದಲ್ಲಿ ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಲು ಸಮಯ ನೀಡಲು ಸಾಧ್ಯವಾಗದ ಸಮಯದಲ್ಲಿ ಇಂತಹ ಶಿಬಿರಗಳಿಗೆ ಬಂದು ತಮ್ಮ ಆರೋಗ್ಯ ತಪಾಸಣೆ ಮಾಡುತ್ತಿರುವುದು ಹೆಮ್ಮಯ ವಿಷಯ. ಕೇವಲ ರ‍್ಥಿಕ ಬೆಳವಣಿಗೆ ಒಂದೇ ಅಲ್ಲ ಸಮಾಜದ ಸ್ವಾಸ್ಥ್ಯವು ನಮಗೆ ಮುಖ್ಯ ಎಂಬ ನಿಟ್ಟಿನಲ್ಲಿ ನಮ್ಮ ಸಂಘವು ಇಂತಹ ಶಿಬಿರಗಳನ್ನು ಆಯೋಜಿಸುತ್ತ ಬಂದಿದೆ.
ಸದಸ್ಯರ ಹಿತದೃಷ್ಟಿಯಲ್ಲಿ ಸಂಘವು ಪ್ರತೀ ಮುಂಗಾರು ಸಮಯದಲ್ಲಿ ಮಾನ್ಸೂನ್ ಸಾಲಮೇಳಗಳನ್ನು ರ‍್ಪಡಿಸುವ ಮೂಲಕ , ಚಿನ್ನಾಭರಣ ಹಾಗೂ ವಾಹನ ಮತ್ತು ಮಕ್ಕಳ ವಿಧ್ಯಾಭ್ಯಾಸ ಸಾಲಕ್ಕೆ ಬರುವ ಗ್ರಾಹಕರಿಗೆ ವಿಶೇಷ ಬಡ್ಡಿದರದಲ್ಲಿ ಸಾಲ ನೀಡುವುದರ ಮೂಲಕ ರ‍್ಥಿಕವಾಗಿ ಸಮಸ್ಯೆಯುಳ್ಳವರಿಗೆ ಸದಾ ಸಹಕಾರ ನೀಡುತ್ತಾ ಬಂದಿರುತ್ತದೆ. ಸಂಘವು ಕಳೆದ ರ‍್ಥಿಕ ಸಾಲಿನಲ್ಲಿ ೩.೩ ಕೋಟಿಗೂ ಮಿಕ್ಕಿ ಲಾಭವನ್ನು ಗಳಿಸಿದ್ದು ನಮ್ಮ ಗ್ರಾಹಕರು ನಮ್ಮ ಮೇಲೆ ಇಟ್ಟಂತಹ ವಿಶ್ವಾಸಕ್ಕೆ ಸದಾ ಚಿರರುಣಿಯಾಗಿದ್ದೇವೆ.
ಈ ಕರ‍್ಯಕ್ರಮದಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಉಪಾದ್ಯಕ್ಷಾರದ ಶ್ರೀ ನೇಮಿರಾಜ್ ಪಿ. ನರ‍್ದೇಶಕರಾದ ಶ್ರೀ ರಮನಾಥ್ ಸನಿಲ್, ಶ್ರೀ ಚಂದ್ರಹಾಸ ಮರೋಳಿ, ಶ್ರೀ ಗೋಪಾಲ್ ಎಮ್, ವೈದ್ಯರಾದ ಡಾ.ಪ್ರಮಾದ ಪ್ರಭಾಕರ್, ಡಾ.ಅಜ್ಮಲ್, ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘ (ರಿ.) ಇದರ ಅಧ್ಯಕ್ಷರಾದ ಶ್ರೀ ಸತೀಶ್ ಅಂಚನ್ ,ನೀರುಮರ‍್ಗ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆಯಾದ ಶ್ರೀಮತಿ ಧನವಂತಿ, ಉದ್ಯಮಿ ಶ್ರೀ ಶ್ರೀಧರ್ ಪೂಜಾರಿ ಉಪಸ್ಥಿತರಿದ್ದರು. ಕರ‍್ಯಕ್ರಮದಲ್ಲಿ ಸುಮಾರು ೨೫೦ಕ್ಕೂ ಶಿಬಿರರ‍್ಥಿಗಳಿಗೆ ಆರೋಗ್ಯ ತಪಾಸಣೆ, ಉಚಿತ ಔಷದಿ ವಿತರಣೆ, ದಂತ ಚಿಕಿತ್ಸಾ ಹಾಗೂ ನೇತ್ರ ತಪಾಸಣೆಯನ್ನು ನಡೆಸಲಾಯಿತು.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಹಿರಿಯ ಶಾಖಾಧಿಕಾರಿಯಾದ ಶ್ರೀಮತಿ ರವಿಕಲಾ ಸ್ವಾಗತಿಸಿ, ಹಿರಿಯ ಶಾಖಾಧಿಕಾರಿಯಾದ ಶ್ರೀಮತಿ ಸೌಮ್ಯಲತಾ ಧನ್ಯವಾದವಿತ್ತರು. ಕರ‍್ಯಕ್ರಮದ ನಿರೂಪಣೆಯನ್ನು ಕುಮಾರಿ ರ‍್ಷಿತಾ ಮಾಡಿದರು.ಉಚಿತ ದಂತ ಚಿಕಿತ್ಸಾ, ನೇತ್ರ ತಪಾಸಣಾ ಮತ್ತು ಸಾಮಾನ್ಯ ವೈದ್ಯಕೀಯ ಶಿಬಿರದ ಸಂಯೋಜನೆಯನ್ನು ಶಾಖಾಧಿಕಾರಿಯಾದ ಶ್ರೀ ಸಂದೀಪ್ ಹಾಗೂ ವೀಕ್ಷಿತ್ ನಡೆಸಿದರು.