ಬಸವಶ್ರೀ ಫೌಂಡೇಷನ್ (ರಿ.) ಬೆಂಗಳೂರು ಇದರ ವತಿಯಿಂದ ಭಗವಾನ್ ಬುದ್ದ, ಶ್ರೀ ಬಸವೇಶ್ವರ, ಡಾ|| ಬಿ.ಆರ್ ಅಂಬೇಡ್ಕರ್ ಮತ್ತು ಡಾ|| ಶಿವಕುಮಾರ ಸ್ವಾಮೀಜಿ ಜಯಂತಿ ಪ್ರಯುಕ್ತ ಮಹಾಸಂಗಮ ಸಮಾವೇಶ, ಶಾಸಕರ ಜನಸ್ಪಂದನ ಪತ್ರಿಕೆಯ 15 ನೇ ವಾರ್ಷಿಕೋತ್ಸವದ ವಿಶೇಷ ಸಂಚಿಕೆಯ ಬಿಡುಗಡೆ ಸಮಾರಂಭವು ಬೆಂಗಳೂರಿನ ಕನ್ನಡ ಭವನದ ನಯನ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳಗಾವಿಯ ಕನ್ನಡದ ನ್ಯಾಯವಾದಿಗಳಾದ ಸನ್ಮಾನ್ಯ ಶ್ರೀ ಕೆ . ಎಲ್. ಕುಂದರಗಿರವರು ವಹಿಸಿದ್ದರು. ಈ ಸಮಾರಂಭದಲ್ಲಿ ವಿಶೇಷ ಸೇವೆ ಸಲ್ಲಿಸಿದ ಗಣ್ಯರಿಗೆ “ ಸಿದ್ಧಗಂಗಾ ರಾಷ್ಟಿçÃಯ ರತ್ನ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

oplus_2

ಸಹಕಾರ ಕ್ಷೇತ್ರದಲ್ಲಿ ಸಲ್ಲಿಸಿರುವ ಅತ್ಯುತ್ತಮ ಸಾಧನೆಗಾಗಿ ತುಮಕೂರು ಜಿಲ್ಲೆಯ ಶ್ರೀ ಅರೇ ಶಂಕರ ಮಠದ ಶ್ರೀ ಸಿದ್ದರಾಮ ಚೈತನ್ಯ ಮಹಾ ಸ್ವಾಮಿಗಳು ಹಾಗೂ ತುಮಕೂರು ಜಿಲ್ಲೆಯ ಶ್ರೀ ಬಸವೇಶ್ವರ ಪ್ರಾಚಿ ಯೋಗ ಮಠದ ಶ್ರೀ ತೋಟಾಪುರಿ ಸೋಮಶೇಖರ್ ಗುರೂಜಿಯವರ ಗೌರವ ಉಪಸ್ಥಿತಿಯಲ್ಲಿ ಕರ್ನಾಟಕ ಸರ್ಕಾರದ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಸನ್ಮಾನ್ಯ ಶ್ರೀ ಪಿ. ಕೃಷ್ಣಭಟ್ ರವರು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್‌ರವರಿಗೆ “ ಸಿದ್ಧಗಂಗಾ ರಾಷ್ಟಿçÃಯ ರತ್ನ” ಪ್ರಶಸ್ತಿಯನ್ನು ನೀಡಿ ಗೌರವಿಸಿದರು.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಕನ್ಸಲ್‌ಟಂಟ್ ಫ್ರೋಟೋಕಾಲ್ ಉಚ್ಚ ನ್ಯಾಯಾಲಯದ ಜಂಟಿ ರಿಜಿಸ್ಟಾçರ್ ಸನ್ಮಾನ್ಯ ಶ್ರೀ ಟಿ ಎನ್. ಕನಕರಾಜುರವರು, ಲೇಖಕರಾದ ಸನ್ಮಾನ್ಯ ಶ್ರೀ ಎಲ್. ಎನ್. ಮುಕುಂದರಾಜರವರು, ಟಿಲಿಕಾಂ ಎಂಪ್ಲಾಯೀಸ್ ಕೋ- ಆಪರೇಟಿವ್ ಹೌಸಿಂಗ್ ಸೊಸೈಟಿ (ಲಿ.) ನ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಬಿ. ಬಾಬುರವರು, ಬಿಜೆಪಿ ರಾಜ್ಯ ನೇಕಾರ ವಿಭಾಗದ ರಾಜ್ಯ ಸಮಿತಿ ಸದಸ್ಯರಾದ ಸನ್ಮಾನ್ಯ ಶ್ರೀ ಬಿ. ಎಲ್. ಹರೀಶ್‌ಕುಮಾರ್‌ರವರು, ಸಾಹಿತಿ ಹಾಗೂ ಪತ್ರಕರ್ತರಾದ ಸನ್ಮಾನ್ಯ ಶ್ರೀ ಸಂಗಮೇಶ ಎನ್ ಜವಾದಿರವರು, ಧನ್ವಂತರಿ ಸೇವಾ ಸಂಸ್ಥೆಯ ಅಧ್ಯಕ್ಷರಾದ ಸನ್ಮಾನ್ಯ ಡಾ. ಸುರೇಶ್ ಮೆಣಸಗಿರವರು, ಧನ್ವಂತರಿ ಸೇವಾ ಸಂಸ್ಥೆಯ ಅಧ್ಯಕ್ಷರಾದ ಸನ್ಮಾನ್ಯ ಡಾ. ಸುರೇಶ್ ಮೆಣಸಗಿರವರು ಮುಂತಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಬಸವಶ್ರೀ ಫೌಂಡೇಶನ್‌ನ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಹೆಚ್ . ಸದಾಶಿವರವರು ಸ್ವಾಗತಿಸಿ, ಚಂದನ ವಾಹಿನಿಯ ಖ್ಯಾತ ನಿರೂಪಕರಾದ ಶ್ರೀಮತಿ ಸವಿ ಪ್ರಕಾಶ್‌ರವರು ನಿರೂಪಿಸಿದರು.

Leave a Reply