ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು 2012ರಲ್ಲಿ ಪ್ರಾರಂಭವಾಗಿ ದಶಮಾನೋತ್ಸವಕ್ಕೆ ನಗರದ ಪಡೀಲ್‌ನಲ್ಲಿ ಸ್ವಂತ ಪ್ರಧಾನ ಕಛೇರಿಯನ್ನು ಹೊಂದಿರುತ್ತದೆ. ಪ್ರಸ್ತುತ ದ.ಕ ಹಾಗೂ ಉಡುಪಿ ಜಿಲ್ಲೆಯಾದ್ಯಂತ 33 ಶಾಖೆಗಳನ್ನು ಹೊಂದಿರುವ ಸಂಘವು, 2023-24ನೇ ಸಾಲಿನಲ್ಲಿ ದುಡಿಯುವ ಬಂಡವಾಳ 23652.68 ಲಕ್ಷ ಹೊಂದಿದ್ದು, ರೂ. 3.03 ಕೋಟಿಗೂ ಮಿಕ್ಕಿ ಲಾಭ ಗಳಿಸಿರುತ್ತದೆ.
ಈ ಕಾರ್ಯಕ್ರಮದಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀ ವಿನಯ ಕುಮಾರ್ ಸೂರಿಂಜೆ, ನಿರ್ದೇಶಕರುಗಳಾದ ಶ್ರೀ ಭಾಸ್ಕರ್ ಎಸ್. ಕೋಟ್ಯಾನ್, ಶ್ರೀ ಟಿ.ಜಿ. ರಾಜಾರಾಮ ಭಟ್, ಶ್ರೀ ಎಂ. ವಾದಿರಾಜ್ ಶೆಟ್ಟಿ, ಶ್ರೀ ಎಸ್.ರಾಜು ಪೂಜಾರಿ, , ಶ್ರೀ ಶಶಿಕುಮಾರ್ ರೈ ಬಿ., ಶ್ರೀ ಎಸ್.ಬಿ.ಜಯರಾಮ ರೈ, ಡಾ. ಐಕಳಬಾವ ದೇವಿ ಪ್ರಸಾದ್ ಶೆಟ್ಟಿ, ಶ್ರೀ ಕೆ. ಹರಿಶ್ಚಂದ್ರ, ಶ್ರೀ ಎಂ. ಮಹೇಶ್ ಹೆಗ್ಡೆ, ಶ್ರೀ ಬಿ. ಅಶೋಕ್ ಕುಮಾರ್ ಶೆಟ್ಟಿ, ಶ್ರೀ ಮೋನಪ್ಪ ಶೆಟ್ಟಿ ಎಕ್ಕಾರು, ಶ್ರೀ ಕೆ. ಜೈರಾಜ್ ಬಿ. ರೈ, ಶ್ರೀ ಕುಶಾಲಪ್ಪ ಗೌಡ ಪಿ., ಶ್ರೀ ಎಸ್. ಎನ್. ಮನ್ಮಥ, ಅಪೆಕ್ಸ್ ಬ್ಯಾಂಕ್ ನ ಪ್ರತಿನಿಧಿಯಾದ ಶ್ರೀ ಸದಾಶಿವ ಉಳ್ಳಾಲ್, ವೃತ್ತಿಪರ ನಿರ್ದೇಶಕರಾದ ಶ್ರೀ ರಾಜೇಶ್ ರಾವ್, ದ.ಕ ಜಿಲ್ಲೆ ಸಹಕಾರ ಸಂಘಗಳ ಉಪನಿಬಂಧಕರಾದ ಶ್ರೀ ಹೆಚ್.ಎನ್, ರಮೇಶ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಪ್ರ) ಶ್ರೀ ಗೋಪಾಲಕೃಷ್ಣ ಭಟ್ ಕೆ., ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷರಾದ ಶ್ರೀ ನೇಮಿರಾಜ್ ಪಿ., ಸಲಹೆಗಾರರಾದ ಶ್ರೀ ಅಶೋಕ್ ಕುಮಾರ್ ಮತ್ತಿತ್ತರರು ಉಪಸ್ಥಿತರಿದ್ದರು.
