ಈ ಕಾರ್ಯಕ್ರಮವನ್ನು ಲಯನ್ಸ್ ಕ್ಲಬ್ ಗುರುಪುರ ಕೈಕಂಬ ಇದರ ಅಧ್ಯಕ್ಷರಾದ ಶ್ರೀ ಮಹೇಶ್ ಶೆಟ್ಟಿ ಇವರು ಉದ್ಘಾಟಿಸಿ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ವಿವಿಧ ಸಂಘ ಸಂಸ್ಥೆಗಳೂAದಿಗೆ ಸೇರಿ ನಡೆಸುವ ಜನಪರ ಕಾರ್ಯಕ್ರಮವು ಶ್ಲಾಘನೀಯ, ಆರೋಗ್ಯವೇ ಭಾಗ್ಯ ಎಂಬAತೆ, ಮನುಷ್ಯನ ಆರೋಗ್ಯ, ಹಿತವಾದ ಜೀವನ ಶೈಲಿಯಲ್ಲಿ ಸಮಾಜಕ್ಕೆ ಸೇವೆಯನ್ನು ನೀಡುವಂತಾಗಲಿ, ಈ ಶಿಬಿರದ ಸದುಪಯೋಗವನ್ನು ಪಡೆಯುವಂತೆ ತಿಳಿಸಿದರು.
ಈ ಕಾರ್ಯಕ್ರಮದ ಇನ್ನೊರ್ವ ಅಥಿತಿಯಾದ ಉದ್ಯಮಿ ಶ್ರೀ ಚಂದ್ರಹಾಸ್ ನಾರ್ಲ ಇವರು ಮಾತನಾಡಿ ನಮ್ಮ ಊರಿನಲ್ಲಿ ವೈದ್ಯಕೀಯ ಶಿಬಿರದ ಅವಶ್ಯಕತೆ ಇತ್ತು, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ವೈದ್ಯಕೀಯ ಶಿಬಿರವನ್ನು ಆಯೋಜಿಸಿದ್ದು ಇನ್ನೊ ಮುಂದಕ್ಕೂ ಇಂತಹ ಶಿಬಿರವನ್ನು ಆಯೋಜಿಸುವಂತಾಗಲಿ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಶಾಖೆಗಳು ೧೦೦ , ೨೦೦ ರ ಗಡಿಯನ್ನು ದಾಟಿ, ಶಾಖೆಯು ರಾಜ್ಯ, ರಾಷ್ಟç ಮಟ್ಟದಲ್ಲಿ ಬೆಳಗಲಿ ಎಂದು ಹಾರೈಸಿದರು.
ಮರಾಠಿ ಸಮಾಜ ಸೇವಾ ಸಂಘ (ರಿ.) ಗಂಜಿಮಠ ಅಧ್ಯಕ್ಷರಾದ ಶ್ರೀ ಶೇಖರ್ ಕಡ್ತಲೆ ಇವರು ಮಾತನಾಡಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಆತ್ಮಪೂರ್ವಕವಾಗಿ ಕೆಲಸ ಮಾಡುತ್ತದೆ ಎಂಬುವುದಕ್ಕೆ ಈ ಶಿಬಿರ ಒಂದು ನಿದರ್ಶನ. ಆತ್ಮಶಕ್ತಿ ಎಂಬ ಹೆಸರನ್ನು ಇಟ್ಟುಕೊಂಡು ನವದುರ್ಗೆಯರನ್ನು ಪೂಜಿಸುವ ಈ ಸಂದರ್ಭದಲ್ಲಿ ದೇವರ ಕೃಪೆ ಜೊತೆಗೆ ಜನರಿಗೆ ಒಂದು ಒಳ್ಳೆಯ ಬದುಕನ್ನು ಕೊಡಬೇಕೆನ್ನುವ ದೃಷ್ಟಿಯಲ್ಲಿ ಕೆಲಸ ಮಾಡುತ್ತಿದೆ. ಇದು ನಿಜವಾದ ದೇವರು ಮೆಚ್ಚುವಂತ ಕೆಲಸ, ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ರವರ ಆಶಯದಂತೆ ಬಡ ಜನರಿಗೆ ಉಚಿತ ವೈದ್ಯಕೀಯ ಶಿಬಿರವನ್ನು ಆಯೋಜನೆ ಮಾಡುತ್ತಾ ಬರುತ್ತಿದ್ದಾರೆ ಎಂದು ಹೇಳಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್‌ರವರು ಮಾತನಾಡಿ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಪ್ರತೀ ವರ್ಷ ಶಾಖೆಗಳ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ನಿರಂತರವಾಗಿ ಆರೋಗ್ಯ ಶಿಬಿರವನ್ನು ಏರ್ಪಡಿಸುತ್ತಾ ಬಂದಿದ್ದು, ಈ ನಿಟ್ಟಿನಲ್ಲಿ ಬ್ಯಾಂಕಿAಗ್ ಸೇವೆಯೇ ಮುಖ್ಯ ಧ್ಯೇಯದೊಂದಿಗೆ
ನಿರಂತರವಾಗಿ 84 ಶಿಬಿರವನ್ನು ಆಯೋಜಿಸಿದ್ದು, ಇಂದಿನ ೭೫ ನೇ ಶಿಬಿರವಾಗಿದ್ದು, ಸಂಘವು .ಬ್ಯಾಂಕಿAಗ್ ಸೇವೆಯು ಜನರಿಗೆ ತುಂಬಾ ಹತ್ತಿರವಾಗುವ ನಿಟ್ಟಿನಲ್ಲಿ ಠೇವಣಿಗೆ ಆಕರ್ಷಕ ಬಡ್ಡಿದರ ಶೇ. 10 ರ ಜೊತೆಯಲ್ಲಿ, ಚಿನ್ನಾಭರಣ ಸಾಲಕ್ಕೆ ಗರಿಷ್ಟ ಮೌಲ್ಯದ ಜೊತೆಗೆ ಸೇವಾ ಶುಲ್ಕ ರಹಿತವಾಗಿ ನೀಡುತ್ತಿರುವುದು, ಇದು ಸಂಘದ ಸಮಾಜ ಮುಖಿ ಚಿಂತನೆಯಾಗಿದೆ. ರಜಾ ದಿನಗಳಲ್ಲಿ ಅಯೋಜಿಸುವ ಶಿಬಿರಗಳಲ್ಲಿ ನಮ್ಮೊಂದಿಗೆ ವೈದ್ಯಕೀಯ ಶಿಬಿರದ ಸಿಬ್ಬಂದಿಗಳು ಹಾಗೂ ನಮ್ಮ ಸಂಘದ ಸಿಬ್ಬಂದಿಗಳು ಹಾಗೂ ಸಂಘ ಸಂಸ್ಥೆಗಳ ಪಧಾಧಿಕಾರಿಗಳು ನಮ್ಮೊಂದಿಗೆ ಭಾಗವಹಿಸುವುದು ತುಂಬಾ ಹೆಮ್ಮ ಆಗುತ್ತದೆ. ಸಂಘವು 16000 ಮಿಕ್ಕಿ ಶಿಬಿರಾರ್ಥಿಗಳಿಗೆ ಉಚಿತವಾಗಿ ಕನ್ನಡಕಗಳನ್ನು ವಿತರಿಸಿದೆ. ಅಲ್ಲದೇ 530 ಮಿಕ್ಕಿ ಶಿಬಿರಾರ್ಥಿಗಳಿಗೆ ಉಚಿತ ಕಣ್ಣಿನ ಪೊರೆಯ ಶಸ್ತçಚಿಕಿತ್ಸೆಯನ್ನು ಆಸ್ಪತ್ರೆಗಳ ಸಹಯೋಗದೊಂದಿಗೆ ಮಾಡಿಸಿದೆ. ಈ ಕಾರ್ಯಕ್ರಮವು ಬಡವರ್ಗದ ಜನರಿಗೆ ಮಾತ್ರವಲ್ಲದೇ ಶ್ರೀಮಂತ ವರ್ಗದ ಜನರಿಗೂ ಕೂಡ ತುಂಬಾ ಪ್ರಯೋಜನಕಾರಿಯಾಗಿದೆ. ಇದರಿಂದ ಸಾರ್ವಜನಿಕರು ಆರೋಗ್ಯದ ಬಗ್ಗೆ ಕಾಳಜಿ ವಹಿಸುವಲ್ಲಿ ನಮ್ಮ ಸಹಕಾರಿ ಸಂಘವು ಮುಖ್ಯ ಪಾತ್ರ ವಹಿಸಿದೆ. ಅದೇ ರೀತಿ ಇಂತಹ ಆರೋಗ್ಯ ಶಿಬಿರವನ್ನು ಏರ್ಪಡಿಸಲು ಸಹಕರಿಸುತ್ತಿರುವ ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಅಭಿವೃದ್ಧಿ ಕೇಂದ್ರ, ಹಾಗೂ ಸಮುದಾಯ ದಂತ ವಿಭಾಗ ,ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆಯ ಆಡಳಿತ ವರ್ಗ , ವೈದ್ಯರು ಹಾಗೂ ಸಿಬ್ಬಂದಿವರ್ಗದವರಿಗೂ ಕ್ರತಜ್ನತೆಯನ್ನು ಸಲ್ಲಿಸಿದರು.
ಈ ಕಾರ್ಯಕ್ರಮದಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕರಾದ ಶ್ರೀ ಗೋಪಾಲ್ ಎಮ್ , ಫ್ರೆಂಡ್ಸ್ ಕ್ಲಬ್ ಮಟ್ಟಿ ಬಡಗುಳಿಪಾಡಿ ಅಧ್ಯಕ್ಷರಾದ ಶ್ರೀ ಸೋಹನ್ ಅತಿಕಾರಿ, ಕಲಾವರ್ಧಕ ಯುವಕ ಮಂಡಲ ನಾರ್ಲ ಮೊಗರು ಅಧ್ಯಕ್ಷರಾದ ಶ್ರೀ ನಾಗರಾಜ್ ಶೆಟ್ಟಿ, ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು Œಅಭಿವೃದ್ದಿ ಕೇಂದ್ರದ (ಯೆನೆಪೋಯ) ವೈದ್ಯರಾದ ಡಾ||ಸ್ನೇಹ, ಹಾಗೂ ಸಮುದಾಯ ದಂತ ವಿಭಾಗ , ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆ ಇಲಿನ ವೈದ್ಯರಾದ ಡಾ|| ಆಲ್ಫಿಯ , ಸಾರ್ವಜನಿಕ ಸಂಪರ್ಕ ಅಧಿಕಾರಿ ಶ್ರೀ ಭರತ್, ಸಮಾಜ ಸೇವಾಕರ್ತರು ಆರ್.ಹೆಚ್.ಸಿ.ಡಿ.ಸಿ. ಶ್ರೀಮತಿ ಶೈನಿ, ಮತ್ತಿತ್ತರರು ಉಪಸ್ಥಿತರಿದ್ದರು.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಹಿರಿಯ ಶಾಖಾಧಿಕಾರಿ ಶ್ರೀಮತಿ ಹರಿಣಾಕ್ಷಿ ಪ್ರಶಾಂತ್ ಸ್ವಾಗತಿಸಿ, ಶಾಖಾಧಿಕಾರಿ ಶ್ರೀಮತಿ ಸುಜಾತ ವಿಫುಲ್ ಸಾಲಿಯಾನ್ ಧನ್ಯವಾದವಿತ್ತರು. ಕಾರ್ಯಕ್ರಮವನ್ನು ಲೆಕ್ಕಿಗರಾದ ಶ್ರೀಮತಿ ಶ್ವೇತಾ ಸುರೇಶ್ ಮತ್ತು ಶಾಖಾಧಿಕಾರಿ ಶ್ರೀಮತಿ ರಮ್ಯ ನಯನ್ ಯವರು ನಿರೂಪಿಸಿದರು.