ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಮುಡಿಪು ಶಾಖೆಯ ಎಂಟನೇ ವಾರ್ಷಿಕೋತ್ಸವದ ಪ್ರಯುಕ್ತ ಗ್ರಾಹಕರ ಸಭೆಯು ಸಂಘದ ಅಧ್ಯಕ್ಷರಾದ ಸಹಕಾರ ರತ್ನ’’ಶ್ರೀಯುತ ಚಿತ್ತರಂಜನ್ ಬೋಳಾರ್ ರವರ ಅಧ್ಯಕ್ಷತೆಯಲ್ಲಿ ಮುಡಿಪು ಶಾಖೆಯಲ್ಲಿ ಜರಗಿತು. ಈ ಕಾರ್ಯಕ್ರಮವನ್ನು ಸಂಘದ ಸದಸ್ಯರುಗಳಾದ ಶ್ರೀ ಶಿವರಾಮ್ ಬಿ, ಶ್ರೀ ಎಮ್ ಶಂಕರ್ ಭಟ್, ಶ್ರೀ ಸುಂದರ್ ಪೂಜಾರಿ, ಶ್ರೀ ಗುರುವಪ್ಪ ಪೂಜಾರಿ, ಶ್ರೀಮತಿ ಶಶಿಕಲಾ ಎಮ್ ಮತ್ತು ಶ್ರೀಮತಿ ಅಮೀನಾ ರವರು ದೀಪ ಪ್ರಜ್ವಲನೆ ಮಾಡುವುದರ ಮೂಲಕ ಉದ್ಟಾಟಿಸಿದರು. ಸಂಘದ ಸದಸ್ಯರಾದ ಶ್ರೀ ಶಿವರಾಮ್ ಬಿ ರವರು ಮಾತನಾಡಿ ಸಂಘದ ಬೆಳವಣಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ದಕ್ಷಿಣ ಕನ್ನಡದಲ್ಲಿ ಮಾತ್ರವಲ್ಲದೆ ಸಂಘದ ಶಾಖೆಗಳು ಕರ್ನಾಟಕದಾದ್ಯಂತ ಪ್ರಾರಂಭವಾಗಲಿ ಎಂದು ಕಾರ್ಯಕ್ರಮಕ್ಕೆ ಶುಭಹಾರೈಸಿದರು.


ಸಂಘದ ಸದಸ್ಯರಾದ ಶ್ರೀ ಮುರಳಿಧರ್ ರಾವ್ ರವರು ಮಾತನಾಡಿ, ಸಂಘದ ಸಿಬ್ಬಂದಿ ವರ್ಗದವರು ಉತ್ತಮ ರೀತಿಯಲ್ಲಿ ಗ್ರಾಹಕರಿಗೆ ಸೇವೆ ನೀಡುತ್ತಿದ್ದಾರೆ. ಸಂಘವು ಬ್ಯಾಂಕಿAಗ್ ಸೇವೆಯ ಜೊತೆಗೆ ಉಚಿತ ವೈದ್ಯಕೀಯ ಶಿಬಿರಗಳನ್ನು ಆಯೋಜಿಸಿ, ಸಾರ್ವಜನಿಕರು ಆರೋಗ್ಯದ ಮೇಲೆ ಹೆಚ್ಚಿನ ಕಾಳಜಿ ವಹಿಸುವಂತೆ ಪ್ರೇರೆಪಿಸುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಘದ ಅಧ್ಯಕ್ಷರಾದ “ಸಹಕಾರ ರತ್ನ’’ಶ್ರೀಯುತ ಚಿತ್ತರಂಜನ್ ಬೋಳಾರ್ ರವರು ಮಾತನಾಡಿ ಶಾಖೆಯ ವಾರ್ಷಿಕೋತ್ಸವದ ಪ್ರಯುಕ್ತ ಎಲ್ಲಾ ಗ್ರಾಹಕರಿಗೆ ಅಭಿನಂದನೆ ಸಲ್ಲಿಸಿದರು. ಸಂಘದ ಪ್ರತಿ ಶಾಖೆಗಳಲ್ಲೂ ವಾರ್ಷಿಕೋತ್ಸವದ ಪ್ರಯುಕ್ತ ಉಚಿತ ವೈದ್ಯಕೀಯ ಶಿಬಿರವನ್ನು ಆಯೋಜಿಸುತ್ತಿದ್ದು, ಈಗಾಗಲೇ ೭೫ಕ್ಕೂ ಮಿಕ್ಕಿ ಉಚಿತ ವೈದ್ಯಕೀಯ ಶಿಬಿರಗಳನ್ನು ಆಯೋಜಿಸಲಾಗಿದೆ. ಮುಡಿಪು ಶಾಖೆಯಲ್ಲಿಯೂ ಮುಂದಿನ ದಿನಗಳಲ್ಲಿ ವೈದ್ಯಕೀಯ ಶಿಬಿರವನ್ನು ಆಯೋಜಿಸಲಾಗುವುದು ಎಂದರು. ಪ್ರತಿ ಶಾಖೆಯಲ್ಲಿಯೂ ರಾಷ್ಟಿçÃಕೃತ ಬ್ಯಾಂಕುಗಳಲ್ಲಿ ಇರುವಂತೆ ಭದ್ರತೆಯ ನಿಟ್ಟಿನಲ್ಲಿ ಅಲಾರಾಮ್ ವ್ಯವಸ್ಥೆ ಇದ್ದು, ಎಸ್.ಎಮ್.ಎಸ್ ಹಾಗೂ ದೂರವಾಣಿ ಕರೆಯ ಮೂಲಕ ಎಚ್ಚರಿಕೆ ನೀಡುವ ನೂತನ ವ್ಯವಸ್ಥೆ ಇರುವ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಿದರು, ಶಾಖೆಯಲ್ಲಿ ಪಿಗ್ಮಿ ಸಂಗ್ರಾಹಕರು ಹುದ್ದೆಗಳು ಖಾಲಿ ಇದ್ದು, ಆಸಕ್ತ ನಿರುದ್ಯೋಗಿಗಳು ಹಾಗೂ ಮಹಿಳೆಯರು ಪಿಗ್ಮಿ ಸಂಗ್ರಾಹಕರಾಗಿ ಉತ್ತಮ ಆದಾಯವನ್ನು ಗಳಿಸಬಹುದು ಎಂದು ತಿಳಿಸಿದರು. ಸಂಘದಲ್ಲಿ ಈಗಾಗಲೇ ಸಂಘದ ಸದಸ್ಯರಿಗೆ ಹಬ್ಬದ ಕೊಡುಗೆಯಾಗಿ ೧೦೦೦ ದಿನಗಳ ಠೇವಣಿಗಳಿಗೆ ವಿಶೇಷ ಬಡ್ಡಿ ದರ ಶೇ. ೧೦.೫೦ ವನ್ನು ನೀಡಲಾಗುತ್ತಿದ್ದು, ಚಿನ್ನಾಭರಣ ಸಾಲಗಳಿಗೆ ಪ್ರತಿ ಗ್ರಾಂ ಗೆ ಗರಿಷ್ಟ ಮೌಲ್ಯ ರೂ. ೬೨೫೦/- ರವರೆಗೆ ಯಾವುದೇ ಸೇವಾ ಶುಲ್ಕವಿಲ್ಲದೆ ಸಾಲ ನೀಡಲಾಗುತ್ತಿದೆ. ಸಂಘದಲ್ಲಿ ಲಭ್ಯವಿರುವ ಇ-ಸ್ಟಾಂಪಿAಗ್ ಸೇವೆ, ವಿಮಾ ಸೇವೆ, ಭವಿಷ್ಯ ಸುರಕ್ಷಾ ಯೋಜನೆಯ ಜೊತೆಗೆ ಎಲ್ಲಾ ಸೇವೆಗಳನ್ನು ಸದುಪಯೋಗ ಮಾಡಿಕೊಳ್ಳುವಂತೆ ಗ್ರಾಹಕರಲ್ಲಿ ವಿನಂತಿಸಿದರು. ಸಂಘವು ಈ ಕಿರು ಅವಧಿಯಲ್ಲಿ ಬೆಳೆಯಬೇಕಾದರೆ ಸಂಘದ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರ ಪರಿಶ್ರಮ ಹಾಗೂ ಗ್ರಾಹಕರ ಸಹಕಾರದಿಂದ ಸಾದ್ಯವಾಗಿದೆ. ಗ್ರಾಹಕರ ಸಲಹೆ ಸಹಕಾರವನ್ನು ಸದಾ ಬಯಸುತ್ತಾ ಸಂಘವು ಇನ್ನಷ್ಟು ಎತ್ತರಕ್ಕೆ ಏರಲು ಇನ್ನು ಮುಂದೆಯೂ ಗಾಹಕರು ಕೈ ಜೋಡಿಸುವಂತೆ ಹೇಳಿದರು.
ಈ ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷರಾದ ಶ್ರೀ ನೇಮಿರಾಜ್ ಪಿ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸೌಮ್ಯ ವಿಜಯ್ ಮತ್ತಿತ್ತರರು ಉಪಸ್ಥಿತರಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಸಂಘದ ಗ್ರಾಹಕರು ಭಾಗವಹಿಸಿದರು.
ಸಿಬ್ಬಂದಿಯಾದ ಶ್ರೀ ಚೇತನ್ ಬಿ ರವರು ಸ್ವಾಗತಿಸಿ, ಸಂಘದ ಸಿಬ್ಬಂದಿ ಕುಮಾರಿ ದೀಪ್ತಿ ರವರು ವಂದಿಸಿದರು. ಶಾಖೆಯ ಶಾಖಾಧಿಕಾರಿ ಕುಮಾರಿ ವಿಂಕಿತಾರವರು ನಿರೂಪಿಸಿದರು.